Advertisement

ಕೋವಿಡ್‌ನಿಂದ ನಷ್ಟದಲ್ಲಿವೆ ಸಾರಿಗೆ ಸಂಸ್ಥೆಗಳು

06:42 PM Nov 02, 2021 | Team Udayavani |

ಹುಬ್ಬಳ್ಳಿ: ಕೋವಿಡ್‌ನಿಂದ ಸಾರಿಗೆ ಸಂಸ್ಥೆಗಳು ಸಾಕಷ್ಟು ನಷ್ಟ ಅನುಭವಿಸಿವೆ. ಅರ್ಧ ವೇತನದ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿಯೂ ಸಾರಿಗೆ ಸಿಬ್ಬಂದಿ ಕನ್ನಡಾಭಿಮಾನ ಕಡಿಮೆಯಾಗಿಲ್ಲ. ತಮ್ಮ ಸ್ವಂತ ವಾಹನಕ್ಕಿಂತ ಹೆಚ್ಚಾಗಿ ಶೃಂಗರಿಸಿ ಕನ್ನಡಾಸಕ್ತಿ, ಅಭಿಮಾನ ಹಾಗೂ
ಗೌರವ ಹೆಚ್ಚಿಸಿದ್ದಾರೆಂದು ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್‌.ಪಾಟೀಲ ಹೇಳಿದರು.

Advertisement

ಸೋಮವಾರ ಇಲ್ಲಿನ ಗೋಕುಲ ರಸ್ತೆಯ ಹೊಸ ಬಸ್‌ ನಿಲ್ದಾಣದಲ್ಲಿ ಹಂಪಿ ಪರಂಪರೆ ತಿಳಿಸುವ ಕನ್ನಡದ ತೇರು ಸ್ತಬ್ಧಚಿತ್ರ ಹಾಗೂ ಇಡೀ ಕನ್ನಡಮಯಗೊಂಡಿರುವ ಬಸ್‌ ಗೆ ಚಾಲನೆ ನೀಡಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಲವು ಸಂಘಟನೆಗಳು ಹಬ್ಬದ ಸಂದರ್ಭ ವೇತನ ನೀಡುವಂತೆ ಪ್ರತಿಭಟನೆ ನಡೆಸಿದರೂ, ಸರಕಾರದೊಂದಿಗೆ ಸಾಕಷ್ಟು ಪ್ರಯತ್ನ ಮಾಡಿದರೂ ಚುನಾವಣೆ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಲಿಲ್ಲ. ಆದರೆ ದೀಪಾವಳಿ ಸಂಭ್ರಮ ಕಳೆಗುಂದಬಾರದು ಎನ್ನುವ ಕಾರಣಕ್ಕೆ ಅರ್ಧವೇತನ ಹಾಕಲಾಗಿದೆ. ಶೀಘ್ರ ಉಳಿದ ವೇತನ ಪಾವತಿಸಲಾಗುವುದು. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿಯಲ್ಲಿ ರಾಜ್ಯೋತ್ಸವ ಕಿಚ್ಚು, ಅಭಿಮಾನಿ, ಆಚರಣೆ ಇದಾವುದು ಅಡ್ಡಿಯಾಗಿಲ್ಲ. ಸಿಬ್ಬಂದಿ ತಮ್ಮ ವಾಹನಕ್ಕಿಂತ ಹೆಚ್ಚಾಗಿ ಸಂಸ್ಥೆ ಬಸ್‌ ಗಳನ್ನು ಪೀÅತಿ ಮಾಡುತ್ತಾರೆ. ಆ ಶೃಂಗಾರ ನೋಡಿದರೆ ಇದಕ್ಕೆ ಬಸ್‌ ಎನ್ನುವ ಮನಸ್ಸು ಬಾರದೆ ಕನ್ನಡದ ತೇರು ಅನ್ನುವಷ್ಟು ಸಂತಸ ಮೂಡಿಸಿದೆ ಎಂದರು.

ಉಪಾಧ್ಯಕ್ಷ ಡಾ| ಬಸವರಾಜ ಕೆಲಗಾರ ಮಾತನಾಡಿ, ಎಲ್ಲಾ ಸಂಸ್ಕೃತಿ ಇರುವ ಕರುನಾಡು ನಮ್ಮ ರಾಜ್ಯ. ಶ್ರೇಷ್ಠ ಸಂಸ್ಕೃತಿ ಹೊಂದಿದೆ. ಇದಕ್ಕೆ ಯಾವುದೇ ಅಪಚಾರವಾಗದಂತೆ ಮುನ್ನಡೆಸಿಕೊಂಡು ಹೋಗುವ ಕೆಲಸ ಆಗಬೇಕಿದೆ. ಸರಕಾರಿ ಆದೇಶ ಪಾಲನೆ ಎನ್ನುವುದಕ್ಕಿಂತ ಇದು ನಮ್ಮ
ಕರುನಾಡಿನ ಹಬ್ಬ ಎನ್ನುವ ಭಾವನೆ ಎಲ್ಲರಲ್ಲಿದೆ. ಎಷ್ಟೇ ಭಾಷೆ ಕಲಿತರೂ ನಮ್ಮ ಭಾಷೆ ಬಳಸಬೇಕು. ಉದ್ಯೋಗಕ್ಕೆ ಬೇರೆ ಭಾಷೆ ಇರಲಿ. ಆದರೆ ಬದುಕಿನ ಭಾಷೆ ಕನ್ನಡವಾಗಿರಲಿ ಎಂದರು.

ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌. ರಾಮನಗೌಡರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯ ಸಿಬ್ಬಂದಿ ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಿದ್ದಾರೆ. ಇದು ನಾಡು-ನುಡಿಯ ಮೇಲಿರುವ ಪ್ರೀತಿ ಹಾಗೂ ಗೌರವವಾಗಿದೆ ಎಂದರು. ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಗಂಗಾಧರ ಕಮಲದಿನ್ನಿ ಮಾತನಾಡಿ, ಸಂಸ್ಥೆ ಹಾಗೂ ನೌಕರರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಸರಕಾರದ ಅಸಹಕಾರದಿಂದ ನಷ್ಟಕ್ಕೆ ಕಾರಣವಾಗಿದೆ. ಸಂಸ್ಥೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರು ಸಂಸ್ಥೆಗೆ ಬರಬೇಕಾದ ಬಾಕಿ ಜತೆಗೆ ಸಂಸ್ಥೆ ಇತಿಹಾಸದಲ್ಲಿ ಉಳಿಯುವಂತಹ ಕೊಡುಗೆ ನಿಮ್ಮಿಂದ ಆಗಲಿ ಎಂದರು.

Advertisement

ಹಂಪಿ ಸ್ತಬ್ದ ಚಿತ್ರ ಕನ್ನಡದ ತೇರು ನಿರ್ಮಾಣದ ಉಸ್ತುವಾರಿ ಅಧಿಕಾರಿಗಳಾದ ಪ್ರವೀಣ ಈಡೂರ, ಅಶೋಕ ಡೇಂಗಿ ಹಾಗೂ ಕನ್ನಡಮಯ ಬಸ್‌ ಆಗಿ ಶೃಂಗರಿಸಿದ ನಿರ್ವಾಹಕ ಶಶಿಕುಮಾರ ಬೋಸ್ಲೆ, ಚಾಲಕ ಸಂತೋಷ ಜಲಮಗಿ ಅವರನ್ನು ಸನ್ಮಾನಿಸಲಾಯಿತು. ಮಂಡಳಿ ನಿರ್ದೇಶಕರು ಸಂತೋಷ ಪಾಟೀಲ, ಸಿದ್ದಲಿಂಗೇಶ್ವರ ಮಠದ, ಅಶೋಕ ಮಳಗಿ, ಮುಖ್ಯ ಸಂಚಾರ ವ್ಯವಸ್ಥಾಪಕ ರಾಜೇಶ ಹುದ್ದಾರ, ಉಪ ಮುಖ್ಯ ಲೆಕ್ಕಾಧಿಕಾರಿ ಪ್ರಕಾಶ ಕರಗುದರಿ, ವಿಭಾಗೀಯ ಕಚೇರಿ ಹಾಗೂ ಕಾರ್ಯಾಗಾರದ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next