Advertisement
ಸಾರಿಗೆ ನೌಕರರ ಕೂಟದ ಮುಖಂಡರೊಂದಿಗೆ ಮತ್ತೆ ಮಾತುಕತೆ ಪ್ರಶ್ನೆಯೇ ಇಲ್ಲ. 6ನೇ ವೇತನ ಆಯೋಗದ ಶಿಫಾರಸು ಜಾರಿ ಮಾಡುವುದಿಲ್ಲ. ಮುಷ್ಕರ ನಡೆಸು ವವರನ್ನು ಗೈರುಹಾಜರು ಎಂದು ಪರಿಗಣಿಸಲಾಗುತ್ತದೆ, ಮುಷ್ಕರ ನಡೆಸಿದರೆ ಎಸ್ಮಾ ಮತ್ತು ವಿಪತ್ತು ನಿರ್ವಹಣ ಕಾಯ್ದೆ ಅಡಿ ಕ್ರಮ ಕೈಗೊಳ್ಳಲು ಸರಕಾರ ನಿರ್ಧರಿಸಿದೆ.
ಕೆಎಸ್ಸಾರ್ಟಿಸಿ, ಬಿಎಂಟಿಸಿ ನೌಕರರಲ್ಲಿ ಕೆಲವರು ಮಂಗಳವಾರದಿಂದಲೇ ಗೈರುಹಾಜರಾಗಿದ್ದಾರೆ. ಇದರಿಂದ ಬಸ್ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು.
Related Articles
ಸಿಎಂ ಸಭೆಯ ಬಳಿಕ ಮಾತನಾಡಿದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಸಾರಿಗೆ ನೌಕರರಿಗೆ ಶೇ. 8ರಷ್ಟು ವೇತನ ಹೆಚ್ಚಿಸಲು ಸರಕಾರ ಸಿದ್ಧವಿದೆ. ಆದರೆ ಈಗ ಚುನಾವಣೆ ನೀತಿ ಸಂಹಿತೆ ಇದ್ದು, ಆಯೋಗ ಅನುಮತಿ ಕೊಟ್ಟರೆ ಮಾಡುತ್ತೇವೆ. ಇಲ್ಲವಾದರೆ, ಚುನಾವಣೆ ಬಳಿಕ ಜಾರಿ ಮಾಡುತ್ತೇವೆ. ಕೊರೊನಾ ಹಿನ್ನೆಲೆಯಲ್ಲಿ ಮುಷ್ಕರ ನಿಷೇಧಿಸಲಾಗಿದೆ. ಗುಂಪು ಸೇರುವಂತಿಲ್ಲ. ಕೋವಿಡ್ ನಿಯಮ ಉಲ್ಲಂಘಿಸುವಂತಿಲ್ಲ ಎಂದು ಎಚ್ಚರಿಸಿದರು.
Advertisement
ಪರ್ಯಾಯ ವ್ಯವಸ್ಥೆ– ರಜೆ, ಹಬ್ಬದ ಕಾರಣ ವಿಶೇಷ ರೈಲು ವ್ಯವಸ್ಥೆ ಮಾಡಲು ರೈಲ್ವೇ ಇಲಾಖೆ ಜತೆ ಮಾತುಕತೆ
– ಖಾಸಗಿ ಬಸ್, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌ಗಳಿಗೆ ತಾತ್ಕಾಲಿಕ ಪರವಾನಿಗೆ ನೀಡಿ ಸಂಚರಿಸಲು ಅನುಮತಿ
– ನಿಗಮಗಳ ಬಸ್ ನಿಲ್ದಾಣಗಳಿಂದಲೇ ಖಾಸಗಿ ವಾಹನಗಳ ಕಾರ್ಯಾಚರಣೆಗೆ ಅವಕಾಶ
– ಖಾಸಗಿ ಬಸ್‌ಗಳಿಗೆ ಪೊಲೀಸ್, ಆರ್‌ಟಿಒ ಭದ್ರತೆ
– “ನಮ್ಮ ಮೆಟ್ರೋ’ ಹೆಚ್ಚುವರಿ ಕಾರ್ಯಾಚರಣೆಗೆ ಸೂಚನೆ
– ನೇರಳೆ ಮಾರ್ಗದಲ್ಲಿ ಸಂಜೆ 7ರಿಂದ 9ರ ವರೆಗೆ 4.5 ನಿಮಿಷಕ್ಕೊಂದು, ಹಸಿರು ಮಾರ್ಗದಲ್ಲಿ 5 ನಿಮಿಷಗಳ ಅಂತರದಲ್ಲಿ ಮೆಟ್ರೋ ಸೇವೆ ಆರ್‌ಟಿಒ, ಪೊಲೀಸ್ ನೆರವು
ಖಾಸಗಿ ಬಸ್, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌ಗಳಿಗೆ ತಾತ್ಕಾ ಲಿಕ ಪರವಾನಿಗೆ ಕೊಟ್ಟು, ರಸ್ತೆಗಿಳಿಸಲು ಸರಕಾರ ನಿರ್ಧರಿಸಿದ್ದು, ಈಗಾಗಲೇ ಎಲ್ಲ ಆರ್‌ಟಿಒ ಅಧಿಕಾರಿಗಳೊಂದಿಗೆ ಆಯಾ ಜಿಲ್ಲಾಧಿಕಾರಿಗಳು ಮಾತುಕತೆ ನಡೆಸಿ, ಒತ್ತಡಕ್ಕೆ ಅನುಗುಣವಾಗಿ ಪರವಾನಿಗೆ ವಿತರಿಸಲು ಸೂಚಿಸಲಾಗಿದೆ. ನಿಗಮಗಳ ನಿಲ್ದಾಣಗಳಿಂದಲೇ ಈ ವಾಹನಗಳ ಕಾರ್ಯಾಚರಣೆಗೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಪೊಲೀಸ್ ನೆರವು ಪಡೆಯಲು ನಿರ್ಧರಿಸಲಾಗಿದೆ. ಎಸ್ಮಾ ಜಾರಿ?
ಸಾರಿಗೆ ನೌಕರರು ಮುಷ್ಕರ ನಡೆಸಿದರೆ ಎಸ್ಮಾದಂಥ ಕಠಿನ ಕ್ರಮ ಕೈಗೊಳ್ಳಲು ಸರಕಾರ ನಿರ್ಧರಿಸಿದೆ. ಸಿಎಂ ನೇತೃತ್ವದಲ್ಲಿ ನಡೆದ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಸಾರಿಗೆ ನೌಕರರ ಜತೆ ಸಂಧಾನ ಮಾಡಬೇಡಿ ಎಂದು ಸಿಎಂ ಸ್ಪಷ್ಟ ಸೂಚನೆ ನೀಡಿದ್ದಾರೆ. ಕರಾವಳಿಯಲ್ಲಿ ಅಲ್ಪ ಪರಿಣಾಮ?
ಮುಷ್ಕರ ಕರಾವಳಿಯಲ್ಲಿ ಅಲ್ಪ ತೊಂದರೆ ಉಂಟು ಮಾಡುವ ಸಾಧ್ಯತೆಯಿದೆ. ಮಂಗಳೂರು, ಉಡುಪಿ ಸೇರಿದಂತೆ ನಗರ ಭಾಗಗಳಲ್ಲಿ ಖಾಸಗಿ ಬಸ್ ಸಂಚಾರ ಸಾಕಷ್ಟು ಪ್ರಮಾಣದಲ್ಲಿರುವ ಕಾರಣ ಸಮಸ್ಯೆ ಉಂಟಾಗುವ ಸಾಧ್ಯತೆ ಕಡಿಮೆ. ಗ್ರಾಮಾಂತರ ಭಾಗದ ಸಂಚಾರ ಹೆಚ್ಚಿರುವ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಭಾಗಗಳಲ್ಲಿ ತೊಂದರೆ ಉಂಟಾಗಬಹುದು. ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ಮಾತ್ರ ಪರದಾಡುವ ಸಾಧ್ಯತೆ ಇದೆ. ರಾಜ್ಯದ ಆರ್ಥಿಕ ಸ್ಥಿತಿ ಸಮಾಧಾನಕರ ವಾಗಿಲ್ಲ. ಆದರೂ ಸಾರಿಗೆ ನೌಕರರ ವೇತನದ 1,200 ಕೋ.ರೂ. ಹಣವನ್ನು ಸರಕಾರವೇ ನೀಡಿದೆ. 9 ಬೇಡಿಕೆಗಳ ಪೈಕಿ 8ನ್ನು ಈಡೇರಿಸಲಾಗಿದೆ. ಇದನ್ನು ಗಮನದಲ್ಲಿ ಇರಿಸಿಕೊಂಡು ಮುಷ್ಕರ ಕೈಬಿಡಬೇಕು.
– ಬಿ.ಎಸ್. ಯಡಿಯೂರಪ್ಪ , ಮುಖ್ಯಮಂತ್ರಿ ಆರನೇ ವೇತನ ಆಯೋಗದ ಶಿಫಾರಸು ಜಾರಿ ಸಾಧ್ಯವಿಲ್ಲ, ಸಾರಿಗೆ ನೌಕರರೊಂದಿಗೆ ಮತ್ತೆ ಮಾತು ಕತೆಯ ಪ್ರಶ್ನೆಯೂ ಇಲ್ಲ, ಮುಷ್ಕರಕ್ಕೆ ಮುಂದಾ ದಲ್ಲಿ ವಿಪತ್ತು ನಿರ್ವಹಣ ಕಾಯ್ದೆ, ಎಸ್ಮಾ ಜಾರಿ ಸಹಿತ ಕಠಿನ ಕ್ರಮ ಕೈಗೊಳ್ಳಲಾಗುತ್ತದೆ.
-ಪಿ. ರವಿಕುಮಾರ್, ಸರಕಾರದ ಮುಖ್ಯ ಕಾರ್ಯದರ್ಶಿ