Advertisement

ಮೈಸೂರು ಅರಮನೆಯ 4 ಆನೆ ಗುಜರಾತಿಗೆ ಸ್ಥಳಾಂತರ

11:24 AM Dec 16, 2021 | Team Udayavani |

ಮೈಸೂರು: ಸರ್ಕಸ್‌ ಕಂಪನಿಯಿಂದ ರಕ್ಷಿಸಿ, ಮೈಸೂರು ಅರಮನೆ ಆವರಣದಲ್ಲಿ ಪುನರ್ವಸತಿ ಕಲ್ಪಿಸಲಾಗಿದ್ದ 6 ಹೆಣ್ಣಾನೆಗಳಲ್ಲಿ 4 ಆನೆಯನ್ನು ಗುಜರಾತ್‌ನ ಜಾಮ್‌ನಗರದಲ್ಲಿರುವ ಪುನರ್ವತಿ ಕೇಂದ್ರಕ್ಕೆ ಬುಧವಾರ ಮುಂಜಾನೆಕೊಂಡೊಯ್ಯಲಾಯಿತು. ಅರಮನೆ ಆವರಣದಲ್ಲಿ ಕಳೆದ ಎರಡೂವರೆ ದಶಕಗಳ ಹಿಂದೆ ಸರ್ಕಸ್‌ನಿಂದ ರಕ್ಷಿಸಲ್ಪಟ್ಟ 6 ಹೆಣ್ಣಾನೆಗೆ ಪುನರ್ವಸತಿ ಕಲ್ಪಿಸಲಾಗಿತ್ತು.

Advertisement

ಆದರೆ, ಕಳೆದ ಕೆಲವು ವರ್ಷಗಳಿಂದ ಆನೆಗಳ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರಿತ್ತು. ಆದರೂ,ಅವುಗಳಆರೈಕೆಮಾಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅರಮನೆಯಲ್ಲಿರುವ ಆನೆಗಳನ್ನು ರಕ್ಷಿಸುವಂತೆ ದೊಡ್ಡಮಟ್ಟದಲ್ಲಿ ಅಭಿಯಾನ ನಡೆದಿತ್ತು. ಇದಕ್ಕೆ ಮನಸೋತಿದ್ದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌2017ರಲ್ಲಿ ಮಾರ್ಚ್‌ನಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿ, 6 ಆನೆಗಳಲ್ಲಿ 3 ಆನೆಯನ್ನಾದರೂ ಸರ್ಕಾರದ ವಶಕ್ಕೆ ಪಡೆದುಕೊಳ್ಳುವಂತೆಕೋರಿದ್ದರು.

ಬಳಿಕನಾಲ್ಕುಹೆಣ್ಣಾನೆಗಳನ್ನುಗುಜರಾತ್‌ನಜಾಮ್‌ನಗರದಲ್ಲಿರುವ ಆನೆಗಳ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ಯಲು ಗುಜರಾತ್‌ನ ಗಾಂಧಿ ನಗರದ ಚೀಫ್ ವೈಲ್ಡ್‌ಲೈಫ್ ವಾರ್ಡನ್‌ ಸೆ.1ರಂದು ನೋ ಅಬjಕ್ಷನ್‌ (ನಿರಪೇಕ್ಷಣಾ) ಪತ್ರ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರು ರಾಜವಂಶಸ್ಥರು ಆನೆಯನ್ನು ಕಳುಹಿಸಿಕೊಡುವ ನಿಟ್ಟಿನಲ್ಲಿ ಉತ್ಸಾಹ ಪ್ರದರ್ಶಿಸಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರಿಂದ ಆನೆಯನ್ನು ಕಳುಹಿಸಿಕೊಡಲು ಕರ್ನಾಟಕ ಅರಣ್ಯ ಇಲಾಖೆಯ ಚೀಫ್ ವೈಲ್‌ xಲೈಫ್ವಾರ್ಡನ್‌ಅನುಮತಿಬೇಕಾಗಿತ್ತು.

ಮೈಸೂರುರಾಜಮನೆತನದ ಅನುಮತಿ ಕೋರಿ ಸಲ್ಲಿಸಿದ್ದ ಮನವಿ ಮೇರೆಗೆ ಆನೆ ಸಾಗಿಸಲು ಚೀಫ್ ವೈಲ್ಡ್‌ಲೈಫ್ ವಾರ್ಡನ್‌ ಡಿ.9ರಂದು ಅನುಮತಿ ನೀಡಿ, ಪ್ರಯಾಣದ ವೇಳೆ ಆನೆಯ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಮುಂಜಾನೆ ಮಲ್ಟಿ ಆಕ್ಸೆಲ್‌ ಲಾರಿಗೆ ಹತ್ತಿಸಿ ಗುಜರಾತ್‌ಗೆ ಆನೆಗಳನ್ನುಕೊಂಡೊಯ್ಯಲಾಗಿತು.

ಸ್ಥಳಾಂತರಗೊಂಡ ಆನೆಗಳಿವು: ಮೈಸೂರು ಅರಮನೆಯಿಂದ ಬುಧವಾರ ಬೆಳಗ್ಗೆ ಸೀತಾ(36), ರೂಬಿ(44), ಜೈಮಿನಿ(31) ಹಾಗೂ ರಾಜೇಶ್ವರಿ(27) ಎಂಬ ನಾಲ್ಕು ಹೆಣ್ಣಾನೆಗಳನ್ನು ಗುಜರಾತ್‌ನ ಜಾಮ್‌ನಗರದಲ್ಲಿರುವ ಆನೆಗಳ ಪುನರ್‌ ವಸತಿ ಕೇಂದ್ರಕ್ಕೆ ಕಳುಹಿಸಿಕೊಡಲಾಯಿತು.

Advertisement

ಕೆಲವು ಕಾರಣದಿಂದ ಬೆಳಗಾಗುವುದರೊಂದಿಗೆ  ನಾಲ್ಕು ಆನೆಯನ್ನು ಕಳುಹಿಸಲಾಯಿತು. ಎರಡೂವರೆ ದಶಕದಿಂದ  ಮೈಸೂರು ಅರಮನೆಯ ಆವರಣದಲ್ಲಿ ಬೀಡು ಬಿಟ್ಟಿದ್ದ ಈ ಆನೆಗಳು ಲಾರಿ ಏರಲು ಹಿಂದೇಟು ಹಾಕಿದವು. ಅಲ್ಲದೆ, ಬಾರವಾದ ಮ® ಸಲ್ಲಿ ಗುಜರಾತ್‌ ಕ ಡೆಗೆ ಪ್ರಯಾಣ ಬೆಳೆಸಿದವು.

ಅರಮನೆಯಲ್ಲೇ ಉಳಿದ 2 ಆನೆ: ಆರು ಆನೆಗಳಲ್ಲಿ ನಾಲ್ಕು ಆನೆಗಳನ್ನು ಗುಜರಾತ್‌ಗೆ ಕಳುಹಿಸಿಕೊಟ್ಟ ಬಳಿಕ ರಾಜಮನೆತನದ ಪ್ರೀತಿಯ ಪಾತ್ರವಾಗಿರುವ ಎರಡು ಆನೆಗಳಾದ ಚಂಚಲ, ಪ್ರೀತಿ ಎಂಬ ಆನೆಗಳನ್ನು ಮೈಸೂರು ಅರಮನೆಯಲ್ಲಿ ಉಳಿಸಿಕೊಳ್ಳಲಾಗಿದೆ. ಸಂಗಾತಿಗಳಲ್ಲಿ ನಾಲ್ಕು ಆನೆಗಳು ಬೇರೆಡೆಗೆ ತೆರಳಿದ ಹಿನ್ನೆಲೆಯಲ್ಲಿ ಚಂಚಲ ಹಾಗೂ ಪ್ರೀತಿ ಚಡಪಡಿಸುತ್ತಿದ್ದ ದೃಶ್ಯಕಂಡುಬಂತು.

Advertisement

Udayavani is now on Telegram. Click here to join our channel and stay updated with the latest news.

Next