Advertisement

ಮೈಸೂರಿನಿಂದ ಬೆಂಗಳೂರಿಗೆ ಅಂಗಾಗಗಳ ರವಾನೆ

02:44 PM Jul 08, 2018 | |

ಮೈಸೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫ‌ಲಿಸದೆ ಮೃತಪಟ್ಟ ಯುವತಿಯ ಹೃದಯದ ಕವಾಟ ಸೇರಿ ವಿವಿಧ ಅಂಗಾಗಗಳನ್ನು ಆ್ಯಂಬುಲೆನ್ಸ್‌ ಮೂಲಕ ಮೈಸೂರಿನಿಂದ ಬೆಂಗಳೂರಿಗೆ ರವಾನಿಸಲಾಯಿತು. ನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ನಯನಾ ಬದುಕುವುದು ಕಷ್ಟವೆಂದು ಆಸ್ಪತ್ರೆ ವೈದ್ಯರು ತಿಳಿಸಿದ್ದರು.

Advertisement

ಹೀಗಾಗಿ ಮಗಳ ಹೃದಯವನ್ನು ದಾನ ಮಾಡಲು ಆಕೆಯ ಪೋಷಕರು ಒಪ್ಪಿಗೆ ಸೂಚಿಸಿದರು. ಪೋಷಕರ ಒಪ್ಪಿಗೆ ಪಡೆದ ಆಸ್ಪತ್ರೆ ವೈದ್ಯರು, ನಯನಾ ಅವರ ಹೃದಯದ ಕವಾಟವನ್ನು ನಾರಾಯಣ ಹೃದಯಾಲಯಕ್ಕೆ, ಕಿಡ್ನಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಹಾಗೂ ಶ್ವಾಸಕೋಶವನ್ನು ಬೆಂಗಳೂರಿನ ಬಿಜಿಎಸ್‌ ಅಪೊಲೋ ಆಸ್ಪತ್ರೆಗೆ ರವಾನಿಸಲು ನಿರ್ಧರಿಸಿ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದ್ದರು.

ಅಂಗಾಂಗಳ ರವಾನೆಗೆ ತೊಂದರೆಯಾಗದಂತೆ ಸ್ಥಳೀಯ ಪೊಲೀಸರು ಆ್ಯಂಬುಲೆನ್ಸ್‌ ಸಂಚರಿಸಲು ವ್ಯವಸ್ಥೆ ಮಾಡಿಕೊಟ್ಟರು. ನಂತರ ಪೊಲೀಸ್‌ ಬೆಂಗಾವಲುಪಡೆಯೊಂದಿಗೆ ಮೈಸೂರಿನಿಂದ ಹೊರಟ ಆ್ಯಂಬುಲೆನ್ಸ್‌ ಬೆಂಗಳೂರು ತಲುಪುವ ತನಕ ಯಾವುದೇ ಅಡಚಣೆಯಾಗದಂತೆ ಮಾರ್ಗದುದ್ದಕ್ಕೂ ಪೊಲೀಸರು ಝೀರೋ ಟ್ರಾಫಿಕ್‌ ವ್ಯವಸ್ಥೆ ಕಲ್ಪಿಸಿದ್ದರು.

ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ನಯನಾ ಗುರುವಾರ ರಾತ್ರಿ ತನ್ನ ಸ್ನೇತನೊಂದಿಗೆ ಬೈಕ್‌ನಲ್ಲಿ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದರು. ಬೆಟ್ಟದಿಂದ ವಾಪಸಾಗುವಾಗ ಐ ವಾಚ್‌ ಜಂಕ್ಷನ್‌ ಬಳಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಚಾಲನೆ ಮಾಡುತ್ತಿದ್ದ ಅರಂದರಾವ್‌ ಸ್ಥಳದಲ್ಲೇ ಮೃತಪಟ್ಟಿದ್ದ. ತೀವ್ರವಾಗಿ ಗಾಯಗೊಂಡಿದ್ದ ನಯನಾರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next