Advertisement

ಹುಬ್ಬಳ್ಳಿ: ಚಹಾ ಮಿರ್ಚಿ ಬಜಿ ಮಾರಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಸಾರಿಗೆ ನೌಕರರು

04:43 PM Apr 02, 2021 | Team Udayavani |

ಹುಬ್ಬಳ್ಳಿ: ಸಾರಿಗೆ ನೌಕರರಿಗೆ 6 ನೇ ವೇತನ ಆಯೋಗ ಜಾರಿಗೊಳಿಸುವಂತೆ ಒತ್ತಾಯಿಸಿ ಏ.7 ರಂದು ನಡೆಯಲಿರುವ ಅನಿರ್ಧಿಷ್ಟಾವಧಿ ಮುಷ್ಕರದ ಹಿನ್ನೆಲೆಯಲ್ಲಿ ಸಾರಿಗೆ ಸಿಬ್ಬಂದಿ ಶುಕ್ರವಾರ ಇಲ್ಲಿನ ಹಳೇ ಬಸ್ ನಿಲ್ದಾಣದಲ್ಲಿ ಮಿರ್ಚಿ ಬಜಿ ಹಾಗೂ ಚಹಾ ಮಾರಾಟ ಮಾಡಿ ಪ್ರತಿಭಟನೆ ನಡೆಸಿದರು.

Advertisement

ಮೂರು ತಿಂಗಳ ಹಿಂದೆ ಬೇಡಿಕೆ ಈಡೇರಿಕೆಗಾಗಿ ಮನವಿ ಮಾಡಿದ್ದರೂ ಸರಕಾರ ಕುಂಟು ನೆಪ ಹೇಳಿ ಜಾರಿಕೊಳ್ಳುತ್ತಿದೆ. ಕಳೆದ 15-20 ವರ್ಷಗಳಿಂದ ಸಾರಿಗೆ ನೌಕರರು ಕಡಿಮೆ ವೇತನದಲ್ಲಿ ಜೀವನ ಮಾಡುತ್ತಿದ್ದಾರೆ. ಕುಟುಂಬ ನಿರ್ವಹಣೆ ಮಾಡಲು ಅಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಚಹಾ, ಬಜಿ ಮಾರಾಟ ಮಾಡುವಂತಹ ಪರಿಸ್ಥಿತಿಗೆ ತಲುಪಿದ್ದಾರೆ. ಸರಕಾರ ಪ್ರತಿಯೊಂದು ಯೋಜನೆಗಳನ್ನು ಸಾರಿಗೆ ಸಂಸ್ಥೆ ಮೂಲಕ ಅನುಷ್ಠಾನ ಮಾಡುತ್ತದೆ. ಆದರೆ ಇದೂವರೆಗೆ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಿಲ್ಲ.

ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿರುವ ನಿಗಮಗಳಿಗೆ ಅನುದಾನ ನೀಡುವ ಕೆಲಸ ಸರಕಾರಗಳಿಂದ ಆಗುತ್ತಿಲ್ಲ. ಹಲವು ಆರ್ಥಿಕ ಸೌಲಭ್ಯಗಳನ್ನು ಕಡಿತ ಮಾಡಿದ್ದಾರೆ. 24 ಗಂಟೆ ಸೇವೆ ಮಾಡಿದರೂ ಸೂಕ್ತ ವೇತನ, ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next