Advertisement

ಸಾರಿಗೆ ನೌಕರರ ಕೂಟದ ಹೆಸರಿನಲ್ಲಿ ಚಂದಾ ವಸೂಲು?

01:38 AM May 04, 2021 | Team Udayavani |

ಬೆಂಗಳೂರು: ವೇತನ ಬಿಡುಗಡೆ ಆಗಿರುವವರು  ನಿಮ್ಮ ಕೈಲಾದಷ್ಟು ದೇಣಿಗೆಯನ್ನು ಸಾರಿಗೆ ನೌಕರರ ಕೂಟದ ಖಾತೆಗೆ ಜಮೆ ಮಾಡಬೇಕು! ಇಂಥದ್ದೊಂದು ಅಲಿಖೀತ ಫ‌ರ್ಮಾನುಗಳು ನಿಗಮದೊಂದಿಗೆ ಸಾರಿಗೆ ನೌಕರರ ಮೊಬೈಲ್‌ಗ‌ಳಿಗೆ  ಬರುತ್ತಿವೆ.

Advertisement

ಮಾರ್ಚ್‌ ತಿಂಗಳ ಸಂಬಳ ಹೆಚ್ಚು-ಕಡಿಮೆ ಒಂದು ತಿಂಗಳು ತಡವಾಗಿ ಬಿಡುಗಡೆಯಾಗಿದೆ. ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿ ದ್ದರಿಂದ ಬರುವ ತಿಂಗಳು ಎಷ್ಟು ಪ್ರಮಾಣದಲ್ಲಿ ವೇತನ  ಕೈಸೇರುತ್ತದೆ ಎಂಬುದು ಖಾತ್ರಿ ಇಲ್ಲ. ಈ ನಡುವೆ ಹಣಕ್ಕಾಗಿ ಬೇಡಿಕೆ ಇಡುತ್ತಿರುವ ಸಂದೇಶಗಳನ್ನು ಬರುತ್ತಿರುವುದು ನೌಕರರನ್ನು  ಇಕ್ಕಟ್ಟಿಗೆ ಸಿಲುಕಿಸಿದೆ.

ನುಂಗಲಾರದ ತುತ್ತು :

ಧನಸಹಾಯ ಮಾಡದಿದ್ದರೆ ಸ್ಥಳೀಯ ನಾಯಕರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಇದು ಬೇರೆ ರೀತಿಯ ಪರಿಣಾಮ ಬೀರಲಿದೆ ಎಂಬ ಭಯ ಕಾಡುತ್ತಿದೆ. ಧನಸಹಾಯ ಮಾಡಿದರೆ ಕುಟುಂಬ ನಿರ್ವಹಣೆ ಕಷ್ಟವಾಗ ಲಿದೆ. ಏನು ಮಾಡುವುದೆಂದು ತೋಚುತ್ತಿಲ್ಲ  ಎಂದು ಹೆಸರು ಹೇಳಲಿಚ್ಛಿಸದ ಬಿಎಂಟಿಸಿ ನೌಕರರೊಬ್ಬರು ಹೇಳಿ ಕೊಂಡರು.

ಸುಮಾರು 1.30 ಲಕ್ಷ ನೌಕರರು ಇದ್ದಾರೆ. ಇದರಲ್ಲಿ ಲಕ್ಷ ಜನ ತಲಾ 100 ರೂ. ಜಮೆ ಮಾಡಿದರೂ 1 ಕೋಟಿ ರೂ. ಆಗುತ್ತದೆ. ಅಷ್ಟಕ್ಕೂ ಕೂಟಕ್ಕೆ ಈಗ ಹಣದ ಅಗತ್ಯವೇನಿದೆ?  ಅಮಾನತು, ವಜಾಗೊಂಡ ನೌಕರರ ಪರ ಕಾನೂನು ಹೋರಾಟಕ್ಕೆ ಮಾಡು

Advertisement

ವುದಕ್ಕೂ  ಹಣದ ಅಗತ್ಯವಿಲ್ಲ. ಯಾಕೆಂದರೆ ಈಗಾಗಲೇ ಸಾರ್ವ ಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹಂತದಲ್ಲಿದೆ. ಜತೆಗೆ ಒಂದಿಬ್ಬರು ವಕೀಲರು ಉಚಿತವಾಗಿ ನಮ್ಮ ಪರ ವಾದಿಸಲು ಮುಂದೆ ಬಂದಿ ದ್ದಾರೆ ಎಂದು ಕೆಎಸ್‌ಆರ್‌ಟಿಸಿಯ ಮಂಗಳೂರು ಘಟಕದ ಚಾಲಕರೊಬ್ಬರು ಹೇಳುತ್ತಾರೆ.

100 ರೂ. ನೋಂದಣಿ ಶುಲ್ಕ :

ಈ ಬಗ್ಗೆ ನನಗೂ ಕೆಲವು ನೌಕರರು ಕರೆ ಮಾಡಿ ಕೇಳಿದ್ದಾರೆ. ಮಂಗಳೂರಿನಿಂದ ಒಂದಿಬ್ಬರು ಸ್ನೇಹಿತರು ಕರೆ ಮಾಡಿ, 1,000 ರೂ. ಹಾಕುವಂತೆ ಕೇಳುತ್ತಿದ್ದಾರೆ. ಏನು ಮಾಡುವುದು ಎಂದು ಕೇಳಿದರು. ಕೂಟದಿಂದ  ಧನಸಹಾಯ ಕೇಳುತ್ತಿಲ್ಲ. ಹೆಸರು ನೋಂದಣಿ ಮಾಡಿಕೊಳ್ಳಲಾಗುತ್ತಿದ್ದು, ಅದಕ್ಕೆ 100 ರೂ. ಶುಲ್ಕ ನಿಗದಿಪಡಿಸಲಾಗಿದೆ. ಯಾರಾದರೂ ದುರುದ್ದೇಶ ದಿಂದ ಹಣ ಸಂಗ್ರಹಿಸುವುದಿದ್ದರೆ ಅದರ ಬಗ್ಗೆ ನೌಕರರು ಜಾಗರೂಕ ರಾಗಿರಬೇಕು ಎಂದು ರಾಜ್ಯ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಆರ್‌. ಚಂದ್ರಶೇಖರ್‌ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next