Advertisement

ವಾಷಿಂಗ್ಟನ್‌ : ಉದ್ಯೋಗ ಪರವಾನಗಿ ಮತ್ತೆ 18 ತಿಂಗಳು ವಿಸ್ತರಣೆ

10:51 PM May 04, 2022 | Team Udayavani |

ವಾಷಿಂಗ್ಟನ್‌ : ಅಮೆರಿಕದಲ್ಲಿರುವ ಸಾವಿರಾರು ಭಾರತೀಯ ವೃತ್ತಿಪರರಿಗೆ ಬೈಡೆನ್‌ ಆಡಳಿತವು ಸಮಾಧಾನಕರ ಸುದ್ದಿಯನ್ನು ನೀಡಿದೆ. ಗ್ರೀನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿರುವವರು, ಎಚ್‌-1 ಬಿ ವೀಸಾದಾರರ ಸಂಗಾತಿಗಳು ಸೇರಿದಂತೆ ಕೆಲವು ನಿರ್ದಿಷ್ಟ ಕೆಟಗರಿಯ ವಲಸಿಗರು ತಮ್ಮ ಉದ್ಯೋಗ ಪರವಾನಗಿ ಅವಧಿ ಮುಗಿದಿದ್ದರೂ, ಇನ್ನೂ 18 ತಿಂಗಳ ಕಾಲ ಅದನ್ನು ಬಳಸಲು ಸರ್ಕಾರ ಅನುಮತಿ ನೀಡಿದೆ.

Advertisement

ಮೇ 4ರಿಂದಲೇ ಈ ನಿಯಮ ಅನ್ವಯವಾಗಿದ್ದು, ಪರವಾನಗಿಯ ಎಕ್ಸ್‌ಪೈರಿ ದಿನಾಂಕವು ಮತ್ತೆ 540 ದಿನಗಳವರೆಗೆ ಸ್ವಯಂಚಾಲಿತವಾಗಿ ವಿಸ್ತರಣೆಯಾಗಿದೆ ಎಂದು ಅಮೆರಿಕ ಗೃಹ ಇಲಾಖೆ ತಿಳಿಸಿದೆ.

ಈ ಹಿಂದೆ ಪರವಾನಗಿ ಅವಧಿಯನ್ನು 180 ದಿನಗಳಿಗೆ ವಿಸ್ತರಣೆ ಮಾಡಲಾಗಿತ್ತು. ಈಗ ಹೆಚ್ಚುವರಿ 18 ತಿಂಗಳ ಕಾಲಾವಕಾಶ ಸಿಕ್ಕಿರುವ ಕಾರಣ, ಇಲ್ಲಿರುವ ಉದ್ಯೋಗಿಗಳು ನಿರಾತಂಕವಾಗಿ ತಮ್ಮ ಉದ್ಯೋಗವನ್ನು ಮುಂದುವರಿಸಬಹುದು. ಈ ನಿಯಮದಿಂದಾಗಿ ಸುಮಾರು 87 ಸಾವಿರ ವಲಸಿಗರಿಗೆ ಅನುಕೂಲವಾಗಲಿದೆ ಎಂದೂ ಇಲಾಖೆ ತಿಳಿಸಿದೆ.

ಇದನ್ನೂ ಓದಿ :ಪಿಎಸ್ಐ ಪರೀಕ್ಷೆ ಅಕ್ರಮ: ಡಿವೈಎಸ್ಪಿ ,ಇನ್ಸ್ ಪೆಕ್ಟರ್ ಸಸ್ಪೆಂಡ್

Advertisement

Udayavani is now on Telegram. Click here to join our channel and stay updated with the latest news.

Next