Advertisement

Karnataka State ಸರಕಾರಿ ನೌಕರರ ವರ್ಗಾವಣೆ ಆರಂಭ

12:20 AM Jun 26, 2024 | Team Udayavani |

ಬೆಂಗಳೂರು: ಸರಕಾರಿ ನೌಕರರ ವರ್ಗಾವಣೆ ಮಾರ್ಗಸೂಚಿಯನ್ನು ಸಿಬಂದಿ ಮತ್ತು ಆಡಳಿತ ಸುಧಾರಣ ಇಲಾಖೆ ಹೊರಡಿಸಿದ್ದು, ಈ ವರ್ಷದ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆಯನ್ನು ಜೂ. 25ರಿಂದ ಆರಂಭಿಸಿ ಜು. 9ರೊಳಗೆ ಪೂರ್ಣಗೊಳಿಸುವಂತೆ ತಿಳಿಸಲಾಗಿದೆ.

Advertisement

ವರ್ಗ ಪ್ರಕ್ರಿಯೆಯಲ್ಲಿ ಸಕ್ಷಮ ಪ್ರಾಧಿಕಾರ, ವರ್ಗಾವಣೆ, ಚಲನ ವಲನ, ಜೇಷ್ಠತಾ ಘಟಕ ಮುಂತಾದ ಪದಗಳಿಗೆ ಸ್ಪಷ್ಟ ವ್ಯಾಖ್ಯಾನ ನೀಡಲಾಗಿದೆ. ಅದೇ ರೀತಿ ಗ್ರೂಪ್‌ “ಎ’ ಮತ್ತು “ಬಿ’ ಹುದ್ದೆಗಳ ವರ್ಗಾವಣೆ ಪೂರ್ವ ಸೇವಾವಧಿಯನ್ನು 2 ವರ್ಷಗಳಿಗೆ ನಿಗದಿ ಮಾಡಲಾಗಿದೆ. ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳುವ ಅಧಿಕಾರ ಆಯಾ ಇಲಾಖಾ ಸಚಿವರ ಕೈಯಲ್ಲೇ ಉಳಿದುಕೊಂಡಿದೆ.

ಸಾರ್ವತ್ರಿಕ ವರ್ಗಾವಣೆಯ ಬಳಿಕದ ವಿಶೇಷ ಪ್ರಕರಣ ಗಳಡಿಯ ವರ್ಗಾವಣೆಯ ಅಧಿಕಾರ ಮುಖ್ಯಮಂತ್ರಿಗಳಲ್ಲಿ ಇರಲಿದೆ.

ಒಂದು ಜೇಷ್ಠತಾ ಘಟಕದ ಕಾರ್ಯನಿರತ ವೃಂದ ಬಲದ ಶೇ. 6 ಮೀರದಂತೆ ವರ್ಗಾವಣೆ ನಡೆಸಬೇಕು ಎಂದು ಸೂಚಿಸಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next