ಬೆಂಗಳೂರು: ಶಾಲಾ ಶಿಕ್ಷಕರ ವರ್ಗಾವಣೆಗೆಉಂಟಾಗಿರುವ ಕಾನೂನು ತೊಡಕು ನಿವಾರಿಸಲುಈಗಾಗಲೇ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿತರಲಾಗಿದೆಯಾದರೂ, ವರ್ಗಾವಣೆ ಪ್ರಕ್ರಿಯೆಪೂರ್ಣಗೊಳ್ಳಲು ಇನ್ನೂ ಎರಡರಿಂದ ಮೂರುತಿಂಗಳು ಹೆಚ್ಚುವರಿ ಕಾಲಾವಕಾಶ ಪಡೆಯಲಿದೆ.
ವರ್ಗಾವಣೆ ಸಂಬಂಧ ಈಗಾಗಲೇ ಕರಡುನಿಯಮ ಸಿದ್ಧಪಡಿಸಿ, ಸಾರ್ವಜನಿಕರಿಂದ ಆಕ್ಷೇಪಣೆಆಹ್ವಾನಿಸಲಾಗಿದೆ. ಜೂನ್ 14 ಆಕ್ಷೇಪಣೆ ಸಲ್ಲಿಸಲುಕೊನೆಯ ದಿನವಾಗಿತ್ತು. ಬಂದಿರುವ ಆಕ್ಷೇಪಣೆಗಳನ್ನುಪರಿಶೀಲಿಸಿ, ದಾಖಲೆ ಸಹಿತವಾಗಿರುವ ಅರ್ಹಆಕ್ಷೇಪಣೆಗಳನ್ನು ಪರಿಗಣಿಸಿ, ಅಂತಿಮ ಆದೇಶಕ್ಕಾಗಿಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಸರ್ಕಾರದಿಂದ ಆದೇಶಬಂದ ಬಂತರ, ವರ್ಗಾವಣೆ ಪ್ರಕ್ರಿಯೆಗೆ ಅಧಿಸೂಚನೆಹೊರಡಿಸಲಾಗುತ್ತದೆ ಎಂದು ಇಲಾಖೆಯ ಹಿರಿಯಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಬಹುತೇಕ ಅಧಿಕಾರಿಗಳು ಕೊರೊನಾ ತಡೆಸೇವೆಯಲ್ಲಿರುವುದರಿಂದ ಇಲಾಖೆಯ ಆಡಳಿತಾತ್ಮಕಕಾರ್ಯದಲ್ಲಿ ಅಷ್ಟೊಂದು ಸಕ್ರಿಯವಾಗಿಲ್ಲ. ಜೂ.14ರಿಂದ 2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಆರಂಭವಾಗುವುದರಿಂದ ಅಧಿಕಾರಿಗಳು ಶೈಕ್ಷಣಿಕಮತ್ತು ಆಡಳಿತಾತ್ಮಕ ಕಾರ್ಯದಲ್ಲಿ ಸಕ್ರಿಯರಾಗಲಿದ್ದಾರೆ.
ವರ್ಗಾವಣೆ ಪ್ರಕ್ರಿಯೆ ಶೈಕ್ಷಣಿಕ ವರ್ಷದಆರಂಭದಲ್ಲಿ ನಡೆದರೂ, ವಿದ್ಯಾರ್ಥಿಗಳ ಶೈಕ್ಷಣಿಕಹಿತದೃಷ್ಟಿಯಿಂದ ಸ್ಥಳ ನಿಯೋಜನೆ ಸ್ವಲ್ಪ ವಿಳಂಬಮಾಡಲಾಗುತ್ತದೆ. ವರ್ಗಾವಣೆ ಪ್ರಕ್ರಿಯೆಆರಂಭವಾದ ನಂತರ ಕನಿಷ್ಠ ಎರಡು ತಿಂಗಳು ಪ್ರಕ್ರಿಯೆಪೂರ್ಣಗೊಳಿಸಲು ಬೇಕಾಗುತ್ತದೆ.
ಎಲ್ಲವೂ ಆನ್‌ಲೈನ್ ಮೂಲಕ: ಈಗಾಗಲೇ 72ಸಾವಿರಕ್ಕೂ ಅಧಿಕ ಶಿಕ್ಷಕರು ವರ್ಗಾವಣೆಗೆ ಅರ್ಜಿಸಲ್ಲಿಸಿದ್ದಾರೆ. ಶಿಕ್ಷಕರ ಸೇವಾ ಮಾಹಿತಿಯನ್ನು ಶಿಕ್ಷಕಮಿತ್ರ ಆ್ಯಪ್ ನಲ್ಲಿ ಅಪ್ಡೆàಟ್ ಮಾಡುವ ಕಾರ್ಯವೂನಡೆಯುತ್ತಿದೆ. ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌ಸೇರಿದಂತೆ ಬಹುತೇಕ ಎಲ್ಲ ಪ್ರಕ್ರಿಯೆಗಳು ಆನ್‌ಲೈನ್‌ಮೂಲಕವೇ ನಡೆಯಲಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು
ರಾಜು ಖಾರ್ವಿ ಕೊಡೇರಿ