Advertisement

ಶೆಡ್‌ಗಳ ಗುತ್ತಿಗೆ ಪತ್ರ ಹಸ್ತಾಂತರ

12:23 PM Aug 04, 2020 | Suhan S |

ಹುಬ್ಬಳ್ಳಿ: ಗೋಕುಲ ರಸ್ತೆಯ ಕೈಗಾರಿಕಾ ವಸಾಹತುವಿನಲ್ಲಿರುವ ಜಿ 4, ಜಿ 5 ಶೆಡ್‌ ಗಳನ್ನು ಕರ್ನಾಟಕ ಮಟೇರಿಯಲ್‌ ಟೆಸ್ಟಿಂಗ್‌ ಸೆಂಟರ್‌ ಸಂಸ್ಥೆಗೆ 99 ವರ್ಷಗಳ ಕಾಲ ಲೀಸ್‌ ನೀಡುವ ಪತ್ರವನ್ನು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ವಿತರಿಸಿದರು.

Advertisement

ಕೇಂದ್ರ ಮತ್ತು ರಾಜ್ಯ ಸರಕಾರಗಳ ಅನುದಾನದಡಿ ಸ್ಥಾಪಿಸಿದ ಕರ್ನಾಟಕ ಮಟಿರಿಯಲ್‌ ಟೆಸ್ಟಿಂಗ್‌ ಸೆಂಟರ್‌ ಸಂಸ್ಥೆ ಕಳೆದ 25 ವರ್ಷಗಳಿಂದ ಉತ್ತರ ಕರ್ನಾಟಕ ಭಾಗದ ಕೈಗಾರಿಕೆಗಳಿಗೆ, ವಸ್ತುಗಳ ಗುಣಮಟ್ಟ ಪರೀಕ್ಷೆ ನಡೆಸುತ್ತಿದೆ. ಲೀಸ್‌ ಪತ್ರ ನೀಡುವ ಮುಖಾಂತರ ಪರೀಕ್ಷಾ ಕೇಂದ್ರವನ್ನು ಅಭಿವೃದ್ಧಿಪಡಿಸಲು ಸರ್ಕಾರ ಒತ್ತು ನೀಡಿದೆ. ಎನ್‌.ಎ.ಬಿ.ಎಲ್‌ (ನ್ಯಾಷಿನಲ್‌ ಅಕ್ರಿಡಿಯೇಷನ್‌ ಬೋರ್ಡ್‌ ಫಾರ್‌ ಟೆಸ್ಟಿಂಗ್‌ ಆ್ಯಂಡ್ ಕ್ಯಾಲಿಬರೇಷನ್‌ ಲ್ಯಾಬೋರೇಟರಿಸ್‌) ಪ್ರಮಾಣ ಪತ್ರ ಹೊಂದಿದೆ. ಉದ್ದಿಮೆದಾರರ ಬೇಡಿಕೆಗೆ ಅನುಸಾರವಾಗಿ ಇನ್ನೂ ಹೆಚ್ಚಿನ ಪ್ರಮಾಣದ ಟೆಸ್ಟಿಂಗ್‌ ಅನುಕೂಲ ಒದಗಿಸಲು ಸರಕಾರ ಮುಂದಾಗಿದೆ ಎಂದು ಕೈಗಾರಿಕೆ ಸಚಿವರು ಹೇಳಿದರು.

ಕೆಎಸ್‌ಎಸ್‌ಐಡಿಸಿ ಅಧಿಕಾರಿ ಡಿ.ಹೆಚ್‌.ನಾಗೇಶ, ಜಿಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆಯ ಮೋಹನ ಭರಮಕ್ಕನವರ, ಪರೀಕ್ಷಣಾ ಕೇಂದ್ರದ ಅಧ್ಯಕ್ಷ ನಾಗರಾಜ ದಿವಾಟೆ, ಪ್ರಧಾನ ಕಾರ್ಯದರ್ಶಿ ಮಹೇಶ್‌ ಜಾಡರ್‌, ಕಾರ್ಯ ನಿರ್ವಾಹಕ ಅಧಿಕಾರಿ ನರೇಂದ್ರ ಕುಲಕರ್ಣಿ, ಉಪಾಧ್ಯಕ್ಷ ಜಯಪ್ರಕಾಶ್‌ ಟೆಂಗಿನಕಾಯಿ, ಸಹ ಕಾರ್ಯದರ್ಶಿ ಎಂ.ಕೆ.ಪಾಟೀಲ, ಖಜಾಂಚಿ ಹೇಮಂತ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next