Advertisement

ಎಚ್‌ಎಎಲ್‌ಗೆ ಧ್ರುವ್‌ ಸ್ಟ್ರಕ್ಚರ್‌ಗಳ ಹಸ್ತಾಂತರ

11:40 AM Nov 24, 2018 | Team Udayavani |

ಬೆಂಗಳೂರು: ಮುಂದುವರಿದ ಲಘು ಹೆಲಿಕಾಪ್ಟರ್‌ “ಧ್ರುವ್‌’ಗೆ ಬೇಕಾದ ಸ್ಟ್ರಕ್ಚರ್‌ಗಳು ಮತ್ತು ಪೂರಕ ಜೋಡಣೆ ಸಾಮಗ್ರಿಗಳನ್ನು ನೈನಿ ಏರೋಸ್ಪೇಸ್‌ ಲಿ., (NAeL) ಶುಕ್ರವಾರ ಎಚ್‌ಎಎಲ್‌ಗೆ ಹಸ್ತಾಂತರಿಸಿತು. 

Advertisement

ಧ್ರುವ್‌ ನಿರ್ಮಾಣಕ್ಕೆ ಒಟ್ಟಾರೆ ಐದು ಸೆಟ್‌ ಸ್ಟ್ರಕ್ಚರ್‌ಗಳು ಮತ್ತು ಜೋಡಣೆಗಳನ್ನು ಪೂರೈಸುವಂತೆ ಎಚ್‌ಎಎಲ್‌ ತನ್ನ ಉಪ ಅಂಗ ಸಂಸ್ಥೆಯಾದ ನೈನಿ ಏರೋಸ್ಪೇಸ್‌ ಲಿ.,ಗೆ ಸೂಚಿಸಿದೆ. ಈ ಪೈಕಿ ಮೊದಲ ಬ್ಯಾಚ್‌ ಅನ್ನು ಹಸ್ತಾಂತರಿಸಲಾಯಿತು. ಸಾಂಕೇತಿಕವಾಗಿ ಎಚ್‌ಎಎಲ್‌ ಹೆಲಿಕಾಪ್ಟರ್‌ ವಿಭಾಗದ ಕಾರ್ಯನಿರ್ವಹಣಾ ನಿರ್ದೇಶಕ ವಿ. ನಟರಾಜನ್‌ ಅವರಿಗೆ ಎನ್‌ಎಇಎಲ್‌ ನಿರ್ದೇಶಕ (ಎಚ್‌ಆರ್‌) ವಿ.ಎಂ. ಚಮೊಲ ಖಾತ್ರಿ ಪ್ರಮಾಣಪತ್ರವನ್ನು ನೀಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ವಿ.ಎಂ. ಚಮೊಲ, ಇದುವರೆಗೆ ಯುದ್ಧ ವಿಮಾನಗಳ ಲೂಮ್‌ ತಯಾರಿಸುತ್ತಿದ್ದ ಎನ್‌ಎಇಎಲ್‌, ಈಗ ಹೆಲಿಕಾಪ್ಟರ್‌ ಸ್ಟ್ರಕ್ಚರ್‌ಗಳನ್ನೂ ಅಭಿವೃದ್ಧಿಪಡಿಸುವ ಮೂಲಕ ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಂಡಿದೆ. ಇದರೊಂದಿಗೆ ಸಂಸ್ಥೆಯಲ್ಲಿನ ಉದ್ಯೋಗಿಗಳ ಕೌಶಲ್ಯ ವೃದ್ಧಿಗೂ ಸಹಕಾರಿಯಾಯಿತು ಎಂದರು. 

ವೈಮಾನಿಕ ಸ್ಟ್ರಕ್ಚರ್‌ಗಳು ಮತ್ತು ಯುದ್ಧ ವಿಮಾನಗಳ ಲೂಮ್‌ಗಳ ತಯಾರಿಕೆ, ದುರಸ್ತಿ, ನವೀಕರಣ ಮತ್ತಿತರ ಕಾರ್ಯಗಳನ್ನು ಪೂರೈಸುತ್ತಿದೆ. ಸಂಸ್ಥೆಯು ಇದುವರೆಗೆ ಲಘು ಯುದ್ಧ ವಿಮಾನ ತೇಜಸ್‌ ಹಾಗೂ ಹಗುರ ಹೆಲಿಕಾಪ್ಟರ್‌ ಧ್ರುವ್‌ಗಾಗಿ 600 ಯುದ್ಧ ವಿಮಾನಗಳ ಲೂಮ್‌ಗಳನ್ನು ಪೂರೈಸಿದೆ. ನೈನಿ ಘಟಕವು ಹಿಂದೂಸ್ತಾನ್‌ ಕೇಬಲ್ಸ್‌ ಲಿ., ಅಡಿ 15 ವರ್ಷ ಕಾರ್ಯನಿರ್ವಹಿಸಿದ್ದು, 2017ರ ಫೆಬ್ರವರಿಯಿಂದ ಎಚ್‌ಎಎಲ್‌ ಸುಪರ್ದಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next