Advertisement

10 ಸಾವಿರ ಪದವೀಧರ ಶಿಕ್ಷಕರ ಹುದ್ದೆ ಹೊರತುಪಡಿಸಿ ವರ್ಗಾವಣೆ

06:35 AM Aug 09, 2018 | Team Udayavani |

ಬೆಂಗಳೂರು : ರಾಜ್ಯದ ಸರ್ಕಾರಿ ಶಾಲೆಯ ಆರರಿಂದ ಎಂಟನೇ ತರಗತಿಯಲ್ಲಿ ಖಾಲಿ ಇರುವ 10 ಸಾವಿರ ಪದವೀಧರ ಶಿಕ್ಷಕರ ಹುದ್ದೆಗಳನ್ನು ಹೊರತುಪಡಿಸಿ ವರ್ಗಾವಣೆ ಪ್ರಕಿಯೆ ನಡೆಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಜಿಲ್ಲಾ ಉಪನಿರ್ದೇಶಕರಿಗೆ  ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ.

Advertisement

ಪದವೀಧರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, 10 ಸಾವಿರ ಶಿಕ್ಷಕರು ಯಾವುದೇ ಸಂದರ್ಭದಲ್ಲಿ ಬೇಕಾದರೂ ಹುದ್ದೆ ಸೇರಿಕೊಳ್ಳಬಹುದು. ಆದ್ದರಿಂದ ಪದವೀಧರ ಶಿಕ್ಷಕರ ಹುದ್ದೆಯನ್ನು ಹೊರತುಪಡಿಸಿ ವರ್ಗಾವಣೆ ಕೌನ್ಸೆಲಿಂಗ್‌ ನಡೆಸಲು ಇಲಾಖೆ ನಿರ್ದೇಶಿಸಿದೆ.

ವರ್ಗಾವಣೆ ಪ್ರಕ್ರಿಯೆಗೆ ಸಂಬಂಧಿಸಿದ ಪರಿಷ್ಕೃತ ಮಾರ್ಗಸೂಚಿ ಇಲಾಖೆಯ ವೆಬ್‌ಸೈಟ್‌ //www.schooleducation.kar.nic.in  ನಲ್ಲಿ ಲಭ್ಯವಿದೆ. ಮಾರ್ಗಸೂಚಿಗೆ ಅನುಗುಣವಾಗಿಯೇ ವರ್ಗಾವಣೆ ಪ್ರಕ್ರಿಯೆ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಯಾವುದೇ ಕಾರಣಕ್ಕೂ ನಿಯಮ ಉಲ್ಲಂಘನೆ ಮಾಡಬಾರದು ಎಂದು ಎಚ್ಚರಿಕೆ ನೀಡಿದೆ.

ವರ್ಗಾವಣೆ ಕಾಯ್ದೆ ಹಾಗೂ ನಿಯಮಗಳು ಶಿಕ್ಷಕ ಸ್ನೇಹಿಯಾಗಿದ್ದು, ಘಟಕದ ಒಳಗೆ ಮತ್ತು ಹೊರಗಿನ ಒಟ್ಟು ವರ್ಗಾವಣಾ ಮಿತಿಯನ್ನು ಶೇ.8ರಿಂದ ಶೇ.15ಕ್ಕೆ ಹೆಚ್ಚಿಸಲಾಗಿದೆ. ಹಿಂದಿನ ಕಾಂಗ್ರೆಸ್‌ ಸರ್ಕಾರ ತೆಗೆದುಕೊಂಡಿದ್ದ ಈ ನಿರ್ಧಾರವನ್ನು ಪರಿಷ್ಕೃತ ಮಾರ್ಗಸೂಚಿಯಲ್ಲಿ ಸೇರಿಸಿ ಹೊರಡಿಸಲಾಗಿದೆ.

ಹೆಚ್ಚುವರಿ ಶಿಕ್ಷಕರು :
ಟಿಡಿಎಸ್‌ ಹಾಗೂ ಎಸ್‌ಎಟಿಎಸ್‌ ವಿಧಾನ ಮೂಲಕ ಎಲ್ಲ ಶಿಕ್ಷಕರ ಮಾಹಿತಿಯನ್ನು ಇಲಾಖೆ ಪಡೆದುಕೊಂಡಿದ್ದು, ಇದರಲ್ಲಿ ಸರ್ಕಾರಿ ಶಾಲೆಯ ಹೆಚ್ಚುವರಿ ಶಿಕ್ಷಕರು(ಕಾರ್ಯಭಾರ ಕಡಿಮೆ ಇರುವ ಶಿಕ್ಷಕರು) ಸೇರಿದ್ದಾರೆ. ರಾಜ್ಯದ 7062 ಪ್ರಾಥಮಿಕ ಶಾಲೆಯಲ್ಲಿ 10,686 ಹೆಚ್ಚುವರಿ ಶಿಕ್ಷರು, 4680 ಪ್ರೌಢಶಾಲೆಯಲ್ಲಿ 1941 ಹೆಚ್ಚುವರಿ ಶಿಕ್ಷಕರನ್ನು ಈಗಾಗಲೇ ಗುರುತಿಸಲಾಗಿದೆ. ಒಟ್ಟು 11,742 ಶಾಲೆಯಲ್ಲಿ 12,627 ಹೆಚ್ಚುವರಿ ಶಿಕ್ಷಕರು ಇದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ, ಮಾಧ್ಯಮ ಮತ್ತು ವಿಷಯದ ಆಧಾರದಲ್ಲಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಲಾಗಿದೆ. ಹೆಚ್ಚುವರಿ ಶಿಕ್ಷಕರ ಜಿಲ್ಲಾ ಮತ್ತು ತಾಲೂಕು ಹಂತದ ಕೌನ್ಸೆಲಿಂಗ್‌ ಪ್ರಕ್ರಿಯೇ ಆ.18 ಮತ್ತು 19ರಂದು ನಡೆಯಲಿದೆ.

Advertisement

ಇದಾದ ನಂತರ ಆ.31ರಿಂದ ಕೋರಿಕೆ, ಕಡ್ಡಾಯ ಹಾಗೂ ಪರಸ್ಪರ ವರ್ಗಾವಣೆಗೆ ಗಣಕೀಕೃತ ಕೌನ್ಸೆಲಿಂಗ್‌ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next