Advertisement

ತ್ರಾಲ್‌ ಎನ್‌ಕೌಂಟರ್‌: 6 ಉಗ್ರರ ಹತ್ಯೆ, ಅಪಾರ ಶಸ್ತ್ರಾಸ್ರ ವಶ

10:45 AM Dec 22, 2018 | udayavani editorial |

ಶ್ರೀನಗರ : ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ತ್ರಾಲ್‌ ಪ್ರದೇಶದ ಅರ್ಮಪೋರಾ ಗ್ರಾಮದಲ್ಲಿ ನಡೆದಿರುವ ಎನ್‌ಕೌಂಟರ್‌ನಲ್ಲಿ ಭಾರತೀಯ ಸೇನಾ ಪಡೆಗಳು ಆರು ಮಂದಿ ಉಗ್ರರನ್ನು ಹತ್ಯೆಗೈದಿರುವುದಾಗಿ ವರದಿಯಾಗಿದೆ.

Advertisement

ಐಜಿಪಿ ಸ್ವಯಂ ಪ್ರಕಾಶ್‌ ಅವರು ತ್ರಾಲ್‌ ಎನ್‌ಕೌಂಟರ್‌ನಲ್ಲಿ ಯೋಧರು  6 ಉಗ್ರರನ್ನು ಕೊಂದಿರುವುದನ್ನು ದೃಢಪಡಿಸಿದ್ದಾರೆ. 

ಉಗ್ರರು ತ್ರಾಲ್‌ ಪ್ರದೇಶದಲ್ಲಿ ಅಡಗಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದು ನಡೆಸಲಾದ ಈ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ಐಜಿಪಿ ಹೇಳಿದರು. 

ಕಳೆದ ವಾರ ಪುಲ್ವಾಮಾದಲ್ಲಿ ಭದ್ರತಾ ಪಡೆಗಳು ಮತ್ತು ಪ್ರತಿಭಟನಕಾರರ ನಡುವಿನ ಸಂಘರ್ಷದಲ್ಲಿ  ಓರ್ವ ಸೈನಿಕ, ಏಳು ಮಂದಿ ಪೌರರು ಮೃತಪಟ್ಟು ಮೂರು ಡಜನ್‌ಗೂ ಹೆಚ್ಚು ಪ್ರತಿಭಟನಕಾರರು ಗಾಯಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next