Advertisement

ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ

02:06 PM Jun 12, 2018 | |

ಹುಣಸೂರು: ಚುನಾವಣಾ ಆಯೋಗದ ವತಿಯಿಂದ ತಾಲೂಕಿನ ಹನಗೋಡು ಜಿಪಂ ಉಪ ಚುನಾವಣೆ ಸಂಬಂಧ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ನೀಡಲಾಯಿತು.

Advertisement

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತರಬೇತಿ ಕಾರ್ಯಾಗಾರದಲ್ಲಿ ತರಬೇತುದಾರ ಹಾಗೂ ಅಧ್ಯಾಪಕ ಡಾ.ಮೋಹನ್‌ ಇವಿಎಂ ಮತಯಂತ್ರಗಳ ಬಳಕೆ ಬಗ್ಗೆ ಪ್ರಾತ್ಯಕ್ಷತೆ ಮೂಲಕ ತರಬೇತಿ ನೀಡಿದರು.

ಎಸಿಡಿಪಿಒ ವೆಂಕಟಪ್ಪ ಮಾತನಾಡಿ, ನಿಗದಿತ ಸಮಯಕ್ಕೆ ಹಾಜರಾಗಬೇಕು, ಮತಕೇಂದ್ರಕ್ಕೆ ತೆರಳುವ ಮುನ್ನ ಅಗತ್ಯ ದಾಖಲಾತಿ ಹಾಗೂ ಸಾಮಗ್ರಿಗಳನ್ನು ಪರೀಕ್ಷಿಸಿ ಕೊಂಡೊಯ್ಯಬೇಕೆಂದು ಸೂಚಿಸಿದರು.

ತರಬೇತುದಾರ ಸಂತೋಷಕುಮಾರ್‌ ಮಾತನಾಡಿ, ಈ ಚುನಾವಣೆ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ನಡೆಯಲಿದೆ, ಇವಿಎಂ ಮತ ಯಂತ್ರ ಬಳಸಿದರೂ ಮತದಾನ ಖಾತರಿಯ ವಿವಿ ಪ್ಯಾಟ್‌ ಯಂತ್ರ ಇರುವುದಿಲ್ಲ, ಮತದಾನಕ್ಕೂ ಮುನ್ನ ಎಲ್ಲ ಕೇಂದ್ರಗಳಲ್ಲೂ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿ ಅಣಕು ಮತದಾನ ನಡೆಸಬೇಕು,

ಚುನಾವಣಾ ಆಯೋಗದಿಂದ ಮನೆಮನೆಗೆ ವಿತರಿಸುವ ಮತಪಟ್ಟಿಯ ದಾಖಲೆಯನ್ನು ಗುರುತಿಗಾಗಿ ಪಡೆಯಬಹುದು. ಚುನಾವಣೆಯನ್ನು ಮುಕ್ತವಾಗಿ ನಡೆಸಬೇಕು. ಸಮಸ್ಯೆಗಳಿದ್ದಲ್ಲಿ ಆಯಾ ವ್ಯಾಪ್ತಿಯ ಚುನಾವಣಾ ಮೇಲ್ವಿಚಾರಕರನ್ನು ಸಂಪರ್ಕಿಸಬೇಕೆಂದು ಸಲಹೆ ನೀಡಿದರು.

Advertisement

ತಾಲೂಕು ಚುನಾವಣಾ ಶಿರಸ್ತೆದಾರ್‌ ತಿಮ್ಮಯ್ಯ ಮಾತನಾಡಿ, ಬೈಪಾಸ್‌ ರಸ್ತೆಯಲ್ಲಿರುವ ತಾಲೂಕು ಕಚೇರಿಯಲ್ಲಿ ಜೂ.14 ರಂದು ನಡೆಯುವ ಉಪ ಚುನಾವಣೆಗಾಗಿ ಜೂ.13ಕ್ಕೆ ಮಸ್ಟರಿಂಗ್‌ ಹಾಗೂ ಡಿ-ಮಸ್ಟರಿಂಗ್‌ ನಡೆಯಲಿದೆ.

ಜೂ.17ಕ್ಕೆ ಮತ ಎಣಿಕೆ ಇಲ್ಲಿಯೇ ನಡೆಯಲಿದೆ. ಮತಗಟ್ಟೆಗೆ ತೆರಳುವ ವೇಳೆ ಚುನಾವಣಾ ಆಯೋಗದ ಮಾಹಿತಿಯುಳ್ಳ ಕೈಪಿಡಿಯನ್ನು ಕಡ್ಡಾಯವಾಗಿ ಕೊಂಡೊಯ್ಯಬೇಕೆಂದರು. ಒಟ್ಟು 80 ಮಂದಿ ಮತಗಟ್ಟೆ ಅಧಿಕಾರಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next