Advertisement

ಮತ ಎಣಿಕೆ ಯಂತ್ರದ ಬಳಕೆಗೆ ತರಬೇತಿ

01:02 PM Apr 12, 2017 | |

ನಂಜನಗೂಡು: ಭಾನುವಾರ ನಡೆದ ಉಪ ಚುನಾವಣೆಯ ಮತಪೆಟ್ಟಿಗೆ ಈಗ ಪಟ್ಟಣದ  ಜೆಎಸ್‌ಎಸ್‌ ಕಾಲೇಜಿನ ಒಳಾವರಣದಲ್ಲಿ ಭದ್ರವಾಗಿದ್ದು ನಾಳೆ (ಗುರುವಾರ) ಈ ಮತಗಳ ಎಣಿಕೆ ನಡೆಯಲಿದ್ದು ಆ ಕುರಿತು ಕಾಲೇಜಿನ ಆವರಣದಲ್ಲಿ ಮಂಗಳವಾರ ಸಂಜೆ ತರಬೇತಿ ಪ್ರಾರಂಭವಾಯಿತು.

Advertisement

ಇದೇ ಮೊದಲ ಬಾರಿಗೆ ನಂಜನಗೂಡಿನಲ್ಲಿ ಅಳವಡಿಸಲಾಗಿದ್ದ ವಿವಿ ಪ್ಯಾಟ್‌ ಮತಯಂತ್ರದ ಬಳಕೆ ಹಾಗೂ ಎಣಿಕೆಯ ಕುರಿತು ದೆಹಲಿಯಿಂದ ತರಬೇತಿ ಪಡೆದ ಸತೀಶ್‌ ಎಂಬುವವರು ಚುನಾವಣಾ ಕಾರ್ಯನಿರತರಿಗೆ ಮಂಗಳವಾರ ತರಬೇತಿ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಚುನಾವಣಾಧಿಕಾರಿ ಜಗದೀಶ್‌, 236 ಮತಪೆಟ್ಟಿಗೆಗಳನ್ನು 14 ಟೇಬಲ್‌ಗ‌ಳಲ್ಲಿ ಸುಮಾರು 17 ಸುತ್ತುಗಳಲ್ಲಿ ಎಣಿಕೆ ಮಾಡಲಾಗುವುದು.

ಅದಕ್ಕಾಗಿ 16 ಸೂಪ್ರವೇಜರ್‌, 16 ಎಣಿಕೆ ಸಿಬ್ಬಂದಿ ಹಾಗೂ 16 ಮೈಕ್ರೋಅಬ್ಸರ್ವರ್‌ ಸೇರಿ ಒಟ್ಟಾರೆ 48 ಸಿಬ್ಬಂದಿ ಆಯ್ಕೆ ಮಾಡಿದ್ದು, ಗುರುವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಿ 12 ಗಂಟೆಗೆ ಮುಕ್ತಾಯ ಗೊಳ್ಳಬಹುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next