Advertisement

ದ್ರಾಕ್ಷಿ ಬೆಳೆಗಾರರಿಗೆ ತರಬೇತಿ

04:57 PM Sep 02, 2020 | Suhan S |

ಕನಕಗಿರಿ: ತಾಲೂಕಿನ ಅಡವಿಬಾವಿ ಗ್ರಾಮದಲ್ಲಿ ತೋಟಗಾರಿಕೆ ದಿನಾಚರಣೆ ಹಾಗೂ ದ್ರಾಕ್ಷಿ ಬೆಳೆಗಾರರಿಗೆ ತರಬೇತಿ ಕಾರ್ಯಕ್ರಮ ನಡೆಯಿತು.

Advertisement

ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಮಾತನಾಡಿ, ಈ ಭಾಗದಲ್ಲಿ ದ್ರಾಕ್ಷಿ ಬೆಳೆ 200 ಹೆಕ್ಟೇರ್‌ ಪ್ರದೇಶದ ಹೊಂದಿದ್ದು, ಪ್ರತಿಯೊಬ್ಬ ರೈತರು ತೋಟಗಾರಿಕೆ ಬೆಳೆಯುವ ಆಸಕ್ತಿಯನ್ನು ಹೊಂದಿದ್ದಾರೆ. ಋತುಮಾನಗಳಿಗೆ ಅನುಸಾರವಾಗಿ ಹಾಗೂ ಕಾಲಕ್ಕೆ ತಕ್ಕಂತೆ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಬೇಕು. ಇಲಾಖೆಯಿಂದ ದೊರೆಯುವ ಸಹಾಯಧನ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಶಾಸಕ ಬಸವರಾಜ ದಢೇಸುಗೂರು ಅವರು ಇಚ್ಛಾಶಕ್ತಿಯಿಂದ ತಾಲೂಕಿನ ಸಿರವಾರ ಗ್ರಾಮದ ಬಳಿ ತೋಟಗಾರಿಕೆ ಟೆಕ್ನಾಲಜಿ ಪಾರ್ಕ್‌ ಆರಂಭಿಸಲು ಡಿಪಿಆರ್‌ ತಯಾರಿಸಿ ಅನುಮೋದನೆಗೆ ಕಳಿಸಲಾಗಿದೆ. ತೋಟಗಾರಿಕೆ ಟೆಕ್ನಾಲಜಿ ಪಾರ್ಕ್‌ ನಿರ್ಮಾಣದಿಂದ ಈ ಭಾಗದಲ್ಲಿ ರೈತರಿಗೆ ಅನುಕೂಲವಾಗಲಿದೆ ಎಂದರು.

ಮುದ್ದೇಬಿಹಾಳದ ತೋಟಗಾರಿಕೆ ವಿವಿ ಪ್ರಾಧ್ಯಾಪಕ ರಾಘವೇಂದ್ರಆಚಾರ್ಯ ಮಾತನಾಡಿ, ಬೆಳೆಬೆಳೆಸುವ ಮುನ್ನವೇ ಹವಾಮಾನ ವೈಫಲ್ಯ ಕಂಡುಕೊಂಡು ನಾಟಿ ಮಾಡಬೇಕು. ದ್ರಾಕ್ಷಿಯಲ್ಲಿ ಹೊಸ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಗಂಗಾವತಿ ತೋಟಗಾರಿಕೆ ಇಲಾಖೆ ಅಧಿಕಾರಿ ಶಿವಯೋಗಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಾಮನಮೂರ್ತಿ, ಕೀಟ ತಜ್ಞ ಬದ್ರಿ ಪ್ರಸಾದ, ರೈತ ಮುಖಂಡರಾದ ಜಗದೀಶಪ್ಪ ಸೋಮನಾಳ, ಕುಮಾರೆಪ್ಪ ಮಾದಿನಾಳ, ವೀರೇಶ ವಿಟ್ಲಾಪೂರ, ಶರಣಬಸವ ಕನ್ನೇರಮಾಡ, ಮಲ್ಲಪ್ಪ ಆರೇರ್‌, ಮಹೇಶ ಹುಲಸನಟ್ಟಿ, ದ್ಯಾಮಣ್ಣ ನೆಲಜೇರಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next