Advertisement

Yoga-ದ.ಕ.ದಲ್ಲಿ 80 ಸಾವಿರ ಮಂದಿಗೆ ತರಬೇತಿ :ಮಹಾಯೋಗಕ್ಕೆ ಸಜ್ಜಾಗಿದೆ ‌ಮಹಾನಗರ…

01:18 PM Jun 20, 2024 | Team Udayavani |

ಮಹಾನಗರ: ಜೂನ್‌ 21ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಮಂಗಳೂರು ನಗರ ಸಹಿತ ಇಡೀ ದ.ಕ. ಜಿಲ್ಲೆ ಸಿದ್ಧವಾಗುತ್ತಿದೆ. ಈ ಬಾರಿ “ಮಹಿಳಾ ಸಬಲೀಕರಣಕ್ಕಾಗಿ ಯೋಗ’ ಎಂಬ ಧ್ಯೇಯ ಇರುವುದರಿಂದ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಕರ್ನಾಟಕ ಸರಕಾರ,ಜಿಲ್ಲಾಡಳಿತ, ಆಯುಷ್‌ ಇಲಾಖೆ, ದಕ್ಷಿಣ ಕನ್ನಡ ಆಯುಷ್‌ ಕಾಲೇಜು ಗಳು, ವಿವಿಧ ಇಲಾಖೆಗಳು, ವಿವಿಧ ಯೋಗ ಸಂಘಟನೆಗಳ ಸಹ ಯೋಗದೊಂದಿಗೆ ಯೋಗ ದಿನಾಚರಣೆ ನಡೆಯಲಿದೆ.

Advertisement

ಜಿಲ್ಲೆಯ ಮುಖ್ಯ ಕಾರ್ಯಕ್ರಮ ಮಂಗಳೂರಿನ ಕುದ್ಮುಲ್‌ ರಂಗರಾವ್‌ ಪುರಭವನದ ಮಿನಿ ಸಭಾಂಗಣದಲ್ಲಿ ಬೆಳಗ್ಗೆ 8 ಗಂಟೆ ಗೆ ಆರಂಭ ವಾಗಲಿದೆ. ಸ್ಪೀಕರ್‌ ಯು.ಟಿ. ಖಾದರ್‌, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗೂಂಡೂರಾವ್‌ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ವೇದವ್ಯಾಸ ಕಾಮತ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕ್ಯಾ| ಬ್ರಿಜೇಶ್‌ ಚೌಟ ಸಹಿತ ಜಿಲ್ಲೆಯ
ಅಧಿಕಾರಿಗಳು ಗಣ್ಯರು, ಸಾರ್ವಜನಿಕರು ಭಾಗವಹಿಸುವರು.

ದಶಮ ಸಂಭ್ರಮಕ್ಕೆ ಭಾರಿ ಜಾಗೃತಿ
ಯೋಗ ದಿನಾಚರಣೆಯ ದಶ ವರ್ಷದ ಸಂಭ್ರಮಕ್ಕೆ ಜಿಲ್ಲೆಯಲ್ಲಿ ಸಾಕಷ್ಟು ಸಿದ್ಧತೆ ನಡೆ ಸಿದ್ದು, 1 ಲಕ್ಷ ಜನ ಯೋಗ  ದಿನಾಚರಣೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಶಾಲೆ, ಕಾಲೇಜು ಗಳು, ವಿ.ವಿ., ಯೋಗ ಸಂಘಟನೆಗಳು, ಆಯುಷ್‌ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು, ಪೊಲೀಸ್‌ ಇಲಾಖೆ, ಗೃಹ ರಕ್ಷಕ ದಳದವರು, ಎನ್‌ಸಿಸಿ, ಎನ್‌ ಎಸ್‌ ಎಸ್‌ ಘಟಕಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸರಕಾರಿ ವಸತಿ ನಿಲಯದ ವಿದ್ಯಾರ್ಥಿಗಳು, ಸ್ಫೋರ್ಟ್ಸ್ ಹಾಸ್ಟೆಲ್‌ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗಿಯಾಗಲಿದ್ದಾರೆ.

10 ದಿನಗಳ ಉಚಿತ ತರಬೇತಿ
ಆಯುಷ್‌ ಇಲಾಖೆ ಸಹಿತೆ ವಿವಿಧ ಸಂಘ – ಸಂಸ್ಥೆಗಳು ಯೋಗ ದಿನಾಚರಣೆಗೆ ಸರಿಸುಮಾರು 80 ಸಾವಿರ ಜನರಿಗೆ 10 ದಿನಗಳ ಉಚಿತ ತರಬೇತಿ ನೀಡಿವೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲೂ ಯೋಗ ದಿನಾಚರಣೆ ನಡೆಯಲಿದೆ.
*ಡಾ| ಮುಹಮ್ಮದ್‌ ಇಕ್ಬಾಲ್‌, ಜಿಲ್ಲಾ ಆಯುಷ್‌ ಅಧಿಕಾರಿ

ಉತ್ತಮ ಆರೋಗ್ಯಕ್ಕೆ ಯೋಗ
ಯೋಗದಿಂದ ರೋಗ ನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ. ಮಂಡಿ ನೋವು, ತಲೆನೋವು, ಗ್ಯಾಸ್ಟ್ರಿಕ್‌, ಹೊಟ್ಟೆ ನೋವು ಸೇರಿದಂತೆ ವಿವಿಧ ಕಾಯಿಲೆಗಳಿಂದ ದೂರ ಇರಬಹುದು. ಇತ್ತೀಚೆಗೆ ಕಡಿಮೆಯಾಗುತ್ತಿರುವ ಮಾನಸಿಕ ನೆಮ್ಮದಿ, ಶಾಂತಿ ಪಡೆಯಲು ಯೋಗ ಅತ್ಯುತ್ತಮ ಸಾಧನ.
*ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ, ಯೋಗಗುರು

Advertisement

ಎಲ್ಲೆಲ್ಲಿ ಸಾರ್ವಜನಿಕ ಯೋಗ?
*ಬೆಳಗ್ಗೆ 8 ಗಂಟೆಗೆ ಮಂಗಳೂರು ಪುರಭವನ ಮಿನಿಸಭಾಂಗಣ: ಆಯುಷ್‌ ಇಲಾಖೆ
*ಬೆಳಗ್ಗೆ 5-7: ಉರ್ವ ಬೋಳೂರಿನ ಶ್ರೀ ಮಾರಿಯಮ್ಮ ದೇವಸ್ಥಾನ: ಪತಂಜಲಿ ಸಂಸ್ಥೆ
*ಬೆಳಗ್ಗೆ 7: ಸಂಘ ನಿಕೇತನ: ಕೇಶವ ಯೋಗ ಕೇಂದ್ರ ಹಾಗೂ ಪತಂಜಲಿ ಸಂಸ್ಥೆ
*ಸಂಜೆ 4-6: ಜೈಲುರಸ್ತೆಯ ಸುಬ್ರಹ್ಮಣ್ಯ ಸಭಾ ಸದನ: ಪಿರಮಿಡ್‌ ಧ್ಯಾನ ಕೇಂದ್ರ
*ಸಂಜೆ 6: ಮಂಗಳಾದೇವಿಯ ರಾಮಕೃಷ್ಣ ಮಠ: ಯೋಗಗುರು ಗೋಪಾಲಕೃಷ್ಣ ದೇಲಂಪಾಡಿ

Advertisement

Udayavani is now on Telegram. Click here to join our channel and stay updated with the latest news.

Next