Advertisement

30 ಸಾವಿರ ಸ್ವಯಂ ಸೇವಕರಿಗೆ ತರಬೇತಿ

12:35 AM Apr 23, 2019 | Lakshmi GovindaRaju |

ಬೆಂಗಳೂರು: ರಾಜ್ಯದಲ್ಲಿ ನೆರೆ, ವಿಪತ್ತು ಸೇರಿದಂತೆ ಮತ್ತಿತರ ತುರ್ತು ಸಂದರ್ಭಗಳಲ್ಲಿ ಮಾನವೀಯ ಸೇವಾ ಕಾರ್ಯಕ್ರಮಗಳ ಪರಿಣಾತ್ಮಕವಾಗಿ ಅನುಷ್ಠಾನಗೊಳಿಸಲು ರೆಡ್‌ ಕ್ರಾಸ್‌ ಸಂಸ್ಥೆಯ ವತಿಯಿಂದ ನೂತನವಾಗಿ ಜಿಲ್ಲೆಗೆ ತಲಾ ಒಂದು ಸಾವಿರದಂತೆ ರಾಜ್ಯದಲ್ಲಿ 30 ಸಾವಿರ ಸ್ವಯಂ ಸೇವಕರಿಗೆ ತರಬೇತಿ ನೀಡಲು ನಿರ್ಧರಿಸಲಾಯಿತು.

Advertisement

ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಗೆ ಕರ್ನಾಟಕ ರಾಜ್ಯ ಶಾಖೆಯ ಸಿಬ್ಬಂದಿಗಳೊಂದಿಗೆ ರಾಜ್ಯಪಾಲರಿಂದ ನಾಮ ನಿರ್ದೇಶಿತರಾದ ಡಾ. ಎಂ.ಕೆ.ಶ್ರೀಧರ್‌ ರವರ ಸಮ್ಮುಖದಲ್ಲಿ, ಸಂಸ್ಥೆಯ ಸಭಾಪತಿ ಎಸ್‌.ನಾಗಣ್ಣ , ಉಪ ಸಭಾಪತಿ ಡಾ.ಕುಮಾರ್‌, ಪ್ರಧಾನ ಕಾರ್ಯದರ್ಶಿ ಪ್ರಶಾಂತ್‌ ಚಂದ್ರಶೇಖರ್‌ ಉಪಸ್ಥಿತಿಯಲ್ಲಿ ಸೋಮವಾರ ನಡೆದ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆಯಲ್ಲಿ ವಿಶೇಷವಾದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ರೆಡ್‌ ಕ್ರಾಸ್‌ ಸಂಸ್ಥೆಯ ಪ್ರಮುಖ ಯೋಜನೆಗಳಲ್ಲೊಂದಾದ ಎಸ್‌ಇಆರ್‌ವಿ(ಸಾಮಾಜಿಕ ತುರ್ತುಗಳಲ್ಲಿ ಸ್ಪಂದಿಸುವ ಸ್ವಯಂಸೇವಕರು) 30,000 ಸ್ವಯಂಸೇವಕರನ್ನು ಈ ಯೋಜನೆಯಡಿ ತರಬೇತಿಗೊಳಿಸುತ್ತಿದೆ. ಅಂದರೆ ಪ್ರತಿ ಜಿಲ್ಲೆಯಲ್ಲಿ 1,000 ಸ್ವಯಂಸೇವಕರನ್ನು ತರಬೇತಿಯನ್ನು ಕೊಡಲಾಗುತ್ತದೆ.

ಇದರ ಜತೆಗೆ ರೆಡ್‌ ಕ್ರಾಸ್‌ ಸಂಸ್ಥೆಯ ಕಾರ್ಯ ಚಟುವಟಿಕೆಗಳಾದ ಪ್ರಥಮ ಚಿಕಿತ್ಸೆ, ವಿಪತ್ತು ನಿರ್ವಹಣೆ ಮತ್ತು ಸನ್ನಧತೆ ಕುರಿತ ತರಬೇತಿ ಚಟುವಟಿಕೆಗಳು, ಜೂನಿಯರ್‌ ರೆಡ್‌ ಕ್ರಾಸ್‌, ಯುವ ರೆಡ್‌ ಕ್ರಾಸ್‌, ರೆಡ್‌ ಕ್ರಾಸ್‌ ಜನೌಷಧಿ ಮಳಿಗೆಗಳು, ರೆಡ್‌ ಕ್ರಾಸ್‌ ಕನ್ನಡಕ ಮಳಿಗೆ, ರೆಡ್‌ ಕ್ರಾಸ್‌ ರಕ್ತನಿಧಿ ಹಲವು ಕಾರ್ಯಕ್ರಮಗಳ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸುವ ಕುರಿತು ಚರ್ಚಿಸಿ ಯೋಜನೆಗಳನ್ನು ಸಿದ್ಧಪಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next