Advertisement

Mangaluru: ಮಹಿಳೆಯನ್ನು ಕಾರಿನಲ್ಲಿ ಹಿಂಬಾಲಿಸಿ ಭಯ ಹುಟ್ಟಿಸಲು ಯತ್ನ; ಪ್ರಕರಣ ದಾಖಲು

08:14 PM Dec 05, 2024 | Team Udayavani |

ಮಂಗಳೂರು: ಮಂಗಳೂರು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಿದ್ದ ಮಹಿಳೆಯೊಬ್ಬರನ್ನು ಇಬ್ಬರು ಯುವಕರು ಕಾರಿನಲ್ಲಿ ಹಿಂಬಾಲಿಸಿ ಬೆದರಿಸಿ, ಭಯ ಹುಟ್ಟಿಸಲು ಯತ್ನಿಸಿದ ಕುರಿತು ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ದೂರುದಾರೆ ಮುಂಬಯಿ ನಿವಾಸಿಯಾಗಿದ್ದು, ಫಳ್ನೀರ್‌ನ ನಿವಾಸಿಯೊಬ್ಬರನ್ನು 2020ರಲ್ಲಿ ಮದುವೆಯಾಗಿದ್ದರು. ಬಳಿಕ ಮನಸ್ತಾಪ ಉಂಟಾದ ಕಾರಣ ವಿಚ್ಛೇದನದವರೆಗೆ ತಲುಪಿದ್ದು, ಇದೇ ಕಾರಣಕ್ಕಾಗಿ ನ. 19ರಂದು ಬೆಳಗ್ಗೆ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ನ್ಯಾಯಾಲಯದಲ್ಲಿ ಕುಳಿತಿರುವಾಗ ಇಬ್ಬರು ಯುವಕರು ಮಹಿಳೆಯನ್ನು ನೋಡಿ ಅಸಭ್ಯ ರೀತಿಯಲ್ಲಿ ನೋಡುತ್ತಿದ್ದು, ಮೊಬೈಲ್‌ನಿಂದ ಫೋಟೋ ತೆಗೆದಿದ್ದಾರೆ.

ವಿಚಾರಣೆ ಬಳಿಕ ಮಹಿಳೆ ಹೊರಬಂದಾಗ ಹಿಂದಿನಿಂದ ಯುವಕರು ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದಿದ್ದರು. ಬಳಿಕ ಮಹಿಳೆ ಆಟೋದಲ್ಲಿ ತೆರಳುವಾಗ ಮತ್ತೆ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next