Advertisement
2017ರ ಜೂನ್ 15ರಂದು ಮೈಸೂರು ತಾಲೂಕು ಇಲವಾಲ ಬಸ್ ನಿಲ್ದಾಣದ ಮೊದಲ ಮಹಡಿಯಲ್ಲಿ ಆರಂಭವಾದ ಮೈಸೂರಿನ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ, ಕಳೆದ ಒಂದೂವರೆ ವರ್ಷದಲ್ಲಿ 738 ಜನರಿಗೆ ವೃತ್ತಿ ತರಬೇತಿ ನೀಡಿ, 483 ಜನರಿಗೆ ಉದ್ಯೋಗ ದೊರಕಿಸಿ ಕೊಟ್ಟಿದೆ.
Related Articles
Advertisement
483 ಮಂದಿಗೆ ಉದ್ಯೋಗ: ಕೇಂದ್ರ ಆರಂಭವಾದ ಈ ಒಂದೂವರೆ ವರ್ಷಗಳಲ್ಲಿ 852 ಯುವಜನರು ಹೆಸರು ನೋಂದಾಯಿಸಿಕೊಂಡಿದ್ದು, ಈ ಪೈಕಿ 738 ಜನರು ತರಬೇತಿ ಪೂರ್ಣಗೊಳಿಸಿದ್ದಾರೆ. ಈ ರೀತಿ ತರಬೇತಿ ಪಡೆದವರಲ್ಲಿ 483 ಜನರು ಈಗಾಗಲೇ ಬೆಂಗಳೂರು, ಮೈಸೂರಿನ ವಿವಿಧ ಕಂಪನಿಗಳಲ್ಲಿ ಉದ್ಯೋಗ ಪಡೆದಿದ್ದಾರೆ.
ಪ್ರಮುಖವಾಗಿ ಬೆಂಗಳೂರಿನ ಡಿ ಮಾರ್ಟ್, ಈಸ್ಟ್ ಇಂಡಿಯಾ, ವಿಶಾಲ್ ಮಾರ್ಟ್ ಸೇರಿದಂತೆ ಅನ್ ಲಿಮಿಟೆಡ್, ಬಿಗ್‌ಬಜಾರ್, ರಿಯಲನ್ಸ್ ಮಾರ್ಟ್, ಗ್ರಾಸ್‌ರೂಟ್ಸ್, ರಾಣೆ ಮದ್ರಾಸ್, ಆಟೋಮೇಟಿವ್ ಆಕ್ಸೆಲ್ಸ್ ಮೊದಲಾದ ಕಂಪನಿಗಳಲ್ಲಿ ಇವರಿಗೆ ಉದ್ಯೋಗ ಪಡೆದಿದ್ದಾರೆ.
ಆನ್‌ಲೈನ್ ಸಂದರ್ಶನ: ಕೇಂದ್ರದಲ್ಲಿ ತರಬೇತಿ ಮುಗಿಸಿದ ಯುವಜನರಿಗೆ ಉದ್ಯೋಗದ ನೆರವು ಒದಗಿಸುವ ದೃಷ್ಟಿಯಿಂದ ಕಂಪನಿಗಳ ಜೊತೆಗೆ ಆನ್‌ಲೈನ್ ಸಂದರ್ಶನ, ಮುಖಾಮುಖೀ ಸಂದರ್ಶನಕ್ಕೂ ಅವಕಾಶ ಮಾಡಿಕೊಡಲಾಗುತ್ತದೆ. ಜೊತೆಗೆ ಕೇಂದ್ರದಲ್ಲಿ ತರಬೇತಿ ಹೊಂದದ ಯುವಜನರಿಗಾಗಿ ಕೇಂದ್ರದ ಆವರಣದಲ್ಲೇ ಉದ್ಯೋಗ ಮೇಳವನ್ನು ಆಯೋಜಿಸಿ ಉದ್ಯೋಗದ ನೆರವು ಒದಗಿಸಲಾಗುತ್ತಿದೆ.
ಉದ್ಯೋಗ ಮೇಳ: 2017ರ ಮಾರ್ಚ್‌ನಲ್ಲಿ ಪ್ರಥಮ ಬಾರಿಗೆ ಬೃಹತ್ ಉದ್ಯೋಗ ಮೇಳ ಆಯೋಜಿಸಿ, ಹಲವರಿಗೆ ಉದ್ಯೋಗ ಒದಗಿಸಿಕೊಡಲಾಗಿತ್ತು. ಇದೀಗ ಎರಡನೇ ಬಾರಿಗೆ ಜನವರಿ 5 ರಂದು ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಬಿಗ್ ಬಜಾರ್, ವೆಸ್ಟ್‌ಸೈಡ್, ಸನ್ ಬಿಸಿನೆಸ್ ಸಲ್ಯೂಷನ್, ಉಡ್‌ಲ್ಯಾಂಡ್, ಕಾರ್ವಿ ಸೇರಿದಂತೆ 20ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಮೇಳದಲ್ಲಿ ಭಾಗವಹಿಸುತ್ತಿವೆ.
ಜಿಲ್ಲೆಯ ಯುವಜನರಿಗೆ ಉದ್ಯೋಗ ಒದಗಿಸಲು ನೆರವಾಗುವ ದೃಷ್ಟಿಯಿಂದ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಆಸಕ್ತರು ಕೇಂದ್ರಕ್ಕೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಂಡು ಮೇಳದಲ್ಲಿ ಭಾಗವಹಿಸಿ, ತಮಗೆ ಇಷ್ಟವಾದ ಕಂಪನಿಗಳ ಸಂದರ್ಶನ ಎದುರಿಸಿ ಉದ್ಯೋಗ ಪಡೆದುಕೊಳ್ಳಬಹುದಾಗಿದೆ.-ಪರಮೇಶ, ವ್ಯವಸ್ಥಾಪಕರು, ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ * ಗಿರೀಶ್ ಹುಣಸೂರು