Advertisement
ಗುಜ್ಜರ್, ರೈಕಾ-ರೆಬಾರಿ, ಗಾಡಿಯಾ ಲುಹಾರ್, ಬಂಜಾರ ಹಾಗೂ ಗಡಾರಿಯಾ ಜಾತಿಗಳಿಗೆ ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಶೇ.5ರಷ್ಟು ಮೀಸಲಾತಿ ಸಿಗುವವರೆಗೂ ಧರಣಿ ಮುಂದುವರಿಸುವುದಾಗಿ ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ, ಸವಾಯ್ ಮಾಧೋಪುರ್-ಬಯಾನಾ ಮಾರ್ಗದಲ್ಲಿ ಸಂಚರಿಸಬೇಕಿದ್ದ ಹಜ್ರತ್ ನಿಜಾಮುದ್ದೀನ್-ಹೈದರಾಬಾದ್, ಹಜ್ರತ್ ನಿಜಾಮುದ್ದೀನ್-ಉದಯ್‌ಪುರ್, ಉದಯ್‌ಪುರ್-ಹಜ್ರತ್ ನಿಜಾಮುದ್ದೀನ್ ರೈಲುಗಳ ಸಂಚಾರ ರದ್ದುಗೊಳಿಸಲಾಯಿತು. ಫಿರೋಜ್‌ಪುರ ಕಂಟೋನ್ಮೆಂಟ್-ಮುಂಬೈ ಮಾರ್ಗದ ರೈಲನ್ನು ಬೇರೆ ಮಾರ್ಗದಲ್ಲಿ ಕಳುಹಿಸಲಾಯಿತು. ಧರಣಿ ನಿರತ ಮತ್ತೂಂದು ಗುಂಪು, ಜೈಪುರ-ದೆಹಲಿ, ಜೋಧಪುರ-ಭಿಲ್ವೇರಾ, ಅಜೆರ್-ಭಿಲ್ವಾರಾ ಹೈವೇ ಬಂದ್ ಮಾಡಿತ್ತು.
ಅರುಣ್ ಚತುರ್ವೇದಿ, ರಾಜಸ್ಥಾನದ ಬಿಜೆಪಿ ನಾಯಕ