ಮೂಡಿಗೆರೆ: ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೊರಟಿದ್ದ ಯಾತ್ರಿಕನೊರ್ವ ಶೌಚಾಲಯದಲ್ಲೇ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಸಂಭವಿಸಿದೆ.
ಮೃತ ದುರ್ದೈವಿಯನ್ನು ಬೆಂಗಳೂರು ನಿವಾಸಿ ಮಧುಸೂಧನ್ (52) ಎನ್ನಲಾಗಿದೆ.
ಬೆಂಗಳೂರಿನಿಂದ 12 ಜನರ ತಂಡ ಟಿಟಿ ವಾಹನದಲ್ಲಿ ಧರ್ಮಸ್ಥಳಕ್ಕೆ ಹೊರಟಿದ್ದರು ಈ ವೇಳೆ ಕೊಟ್ಟಿಗೆಹಾರ ತಲುಪಿದ ಯಾತ್ರಿಕರ ತಂಡ ವಿಶ್ರಾಂತಿಗಾಗಿ ನಿಂತಿದ್ದಾರೆ ಈ ವೇಳೆ ಮಧುಸೂಧನ್ ಶೌಚಾಲಯಕ್ಕೆ ತೆರಳಿದ್ದು ಅಲ್ಲೇ ಹೃದಯಾಘಾತಕ್ಕೆ ಒಳಗಾಗಿದ್ದಾರೆ, ಘಟನೆ ನಡೆದ ಕೂಡಲೇ ಮಧುಸೂಧನ್ ಅವರನ್ನು ಸಮಾಜ ಸೇವಕ ಆರೀಫ್ ಅಂಬುಲೆನ್ಸ್ ನಲ್ಲಿ ಬಣಕಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನೆ ಸಂಬಂಧ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Bihar: ಟಿಕೆಟ್ ನೀಡಿದರೆ ಪಕ್ಷಕ್ಕೆ ಸೇರುವೆ… BJP ಸೇರುವ ಸುಳಿವು ನೀಡಿದ ಕಾಂಗ್ರೆಸ್ ಶಾಸಕಿ