Advertisement

ನಗರದ ರಸ್ತೆಗಳ ಸಂಚಾರ ವೇಗ ನಿಗದಿ

09:20 PM Mar 16, 2020 | Lakshmi GovindaRaj |

ಮೈಸೂರು: ನಗರ ವ್ಯಾಪ್ತಿಯ ರಸ್ತೆಗಳಲ್ಲಿ ವಾಹನಗಳು ಸಂಚರಿಸುವ ವೇಗದ ಮಿತಿಯನ್ನು ನಿಗದಿಪಡಿಸಿ, ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ ಅಧಿಸೂಚನೆ ಹೊರಡಿಸಿದ್ದಾರೆ. ಮೈಸೂರು ನಗರಕ್ಕೆ ಪ್ರವೇಶ ಕಲ್ಪಿಸುವ ರಸ್ತೆಗಳಲ್ಲಿ ಹಾಗೂ ನಗರದ ಒಳಗಿನ ರಸ್ತೆಗಳಲ್ಲಿ ವಾಹನಗಳು ಅತಿವೇಗದಿಂದ ಸಂಚರಿಸುತ್ತಿದ್ದು,

Advertisement

ಇದರಿಂದ ಅನೇಕ ಸಂದರ್ಭಗಳಲ್ಲಿ ರಸ್ತೆ ಅಪಘಾತಗಳು ಸಹ ಸಂಭವಿಸಿ ಸಾರ್ವಜನಿಕರ ಸುರಕ್ಷತೆಗೆ ಮತ್ತು ಸುಗಮ ಸಂಚಾರಕ್ಕೆ ಅಡಚಣೆಯುಂಟಾಗುತ್ತಿದೆ. ಆದ್ದರಿಂದ ಮೈಸೂರು ನಗರಕ್ಕೆ ಸಂಪರ್ಕ ಕಲ್ಪಿಸುವ ವಿವಿಧ ರಸ್ತೆಗಳಲ್ಲಿ ಮತ್ತು ನಗರದ ಒಳಗಿರುವ ರಸ್ತೆಗಳಲ್ಲಿನ ವಾಹನ ಸಂಚಾರದ ಸಾಂದ್ರತೆ ಮತ್ತು ರಸ್ತೆಗಳ ಭೌಗೋಳಿಕ ಅಂಶಗಳಿಗೆ ಅನುಗುಣವಾಗಿ ವಾಹನಗಳು ಸಂಚರಿಸುವ ವೇಗಕ್ಕೆ ಮಿತಿ ನಿಗಧಿಪಡಿಸಲಾಗಿದೆ.

ನಗರದ ಹೊರಗೆ- ಒಳಗೆ ವೇಗ ಮಿತಿ
– ಹೊರ ವರ್ತುಲ ರಸ್ತೆಯಿಂದ ಒಳಭಾಗದ ರಸ್ತೆಗಳಲ್ಲಿ ಕಾರು (ಎಲ್‌ಎಂ)40 ಕಿ.ಮೀ, ಬಸ್‌ ಮತ್ತು ದ್ವಿ ಚಕ್ರ ವಾಹನ 30 ಕಿ.ಮೀ ,ಆಟೋ ರಿಕ್ಷಾ ಮತ್ತು ಸರಕು ಸಾಗಣೆ ವಾಹನ 30 ಕಿ.ಮೀ, ಟ್ರ್ಯಾಕ್ಟರ್‌- 20 ಕಿ.ಮೀ.

– ಹೊರ ವರ್ತುಲ ರಸ್ತೆಯಲ್ಲಿ ಕಾರು (ಎಲ್‌ಎಂ)60 ಕಿ.ಮೀ, ಬಸ್‌ ಮತ್ತು ದ್ವಿ ಚಕ್ರ ವಾಹನ 50 ಕಿ.ಮೀ, ಆಟೋ ರಿಕ್ಷಾ ಮತ್ತು ಸರಕು ಸಾಗಣೆ ವಾಹನ 40 ಕಿ.ಮೀ, ಟ್ರ್ಯಾಕ್ಟರ್‌ 20 ಕಿ.ಮೀ.

– ನಗರದ ಹೊರ ವರ್ತುಲ ರಸ್ತೆಗೆ ಹೊರ ಊರುಗಳಿಂದ ಸಂಪರ್ಕ ಕಲ್ಪಿಸುವ ಮೈಸೂರು – ಹುಣಸೂರು ರಸ್ತೆಯಲ್ಲಿ ಹೊರ ವರ್ತುಲ ರಸ್ತೆಯಿಂದ ನಗರ ಸರಹದ್ದಿನ ಅಂತ್ಯದವರೆಗೆ, ಗದ್ದಿಗೆ ರಸ್ತೆಯಲ್ಲಿ ಹೊರ ವರ್ತುಲ ರಸ್ತೆಯಿಂದ ನಗರ ಸರಹದ್ದಿನ ಅಂತ್ಯದವರೆಗೆ, ತಿ. ನರಸೀಪುರ ರಸ್ತೆಯಲ್ಲಿ ಹೊರ ವರ್ತುಲ ರಸ್ತೆಯಿಂದ ನಗರ ಸರಹದ್ದಿನ ಅಂತ್ಯದವರೆಗೆ, ಬನ್ನೂರು ರಸ್ತೆಯಲ್ಲಿ ಹೊರ ವರ್ತುಲ ರಸ್ತೆಯಿಂದ ನಗರ ಸರಹದ್ದಿನ ಅಂತ್ಯದವರೆಗೆ, ಮಹದೇವಪುರ ರಸ್ತೆಯಲ್ಲಿ ಹೊರ ವರ್ತುಲ ರಸ್ತೆಯಿಂದ ನಗರ ಸರಹದ್ದಿನ ಅಂತ್ಯದವರೆಗೆ ಹಾಗೂ ಕೆಆರ್‌ಎಸ್‌ ರಸ್ತೆಯಲ್ಲಿ ಹೊರ ವರ್ತುಲ ರಸ್ತೆಯಿಂದ ನಗರ ಸರಹದ್ದಿನ ಅಂತ್ಯದವರೆಗೆ- ಕಾರು (ಎಲ್‌.ಎಂ.) 40 ಕಿ.ಮೀ, ಬಸ್‌ ಮತ್ತು ದ್ವಿ ಚಕ್ರ ವಾಹನ 30 ಕಿ.ಮೀ, ಆಟೋ ರಿಕ್ಷಾ ಮತ್ತು ಎಲ್ಲಾ ಮಾದರಿಯ ಸರಕು ಸಾಗಣೆ ವಾಹನ 30 ಕಿ.ಮೀ, ಟ್ರ್ಯಾಕ್ಟರ್‌ 20 ಕಿ.ಮೀ.

Advertisement

– ಮೈಸೂರು ನಗರದ ಹೊರ ವರ್ತುಲ ರಸ್ತೆಗೆ ಹೊರ ಊರುಗಳಿಂದ ಸಂಪರ್ಕ ಕಲ್ಪಿಸುವ ಮೈಸೂರು-ಬೆಂಗಳೂರು ರಸ್ತೆಯಲ್ಲಿ ನಗರ ಸರಹದ್ದು ಪ್ರಾರಂಭದಿಂದ ಹೊರ ವರ್ತುಲ ರಸ್ತೆವರೆಗೆ ಕಾರು 60 ಕಿ.ಮೀ, ಬಸ್‌ ಮತ್ತು ದ್ವಿಚಕ್ರ ವಾಹನ 50 ಕಿ.ಮೀ, ಆಟೋ ರಿಕ್ಷಾ ಮತ್ತು ಎಲ್ಲಾ ಮಾದರಿಯ ಸರಕು ಸಾಗಣೆ ವಾಹನ 40 ಕಿ.ಮೀ ಹಾಗೂ ಟ್ರ್ಯಾಕ್ಟರ್‌ 30 ಕಿ.ಮೀ ವೇಗದ ಮಿತಿ ನಿಗದಿಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next