Advertisement

ಸಂಚಾರ ಪೊಲೀಸರ ಎಸ್ ಎಂಎಸ್ ಗೆ ಸ್ಪಂದನೆ : ಮೂರುವರೆ ತಿಂಗಳಲ್ಲಿ 5 ಕೋ.ರೂ. ದಂಡ ಸಂಗ್ರಹ

03:29 PM Mar 29, 2022 | Team Udayavani |

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಕುರಿತು ಸಂಚಾರ ಪೊಲೀಸರ ಮೊಬೈಲ್‌ ಸಂದೇಶಕ್ಕೆ ಪ್ರತಿಕ್ರಿಯಿಸಿರುವ ಲಕ್ಷಾಂತರ ವಾಹನ ಸವಾರರು ಕೇವಲ ಮೂರೂವರೆ ತಿಂಗಳಲ್ಲೇ ಬರೋಬ್ಬರಿ 5 ಕೋಟಿ ರೂ.ಗೂ ಅಧಿಕ ದಂಡ ಪಾವತಿಸಿದ್ದಾರೆ.!

Advertisement

ಹೌದು, ಸಂಚಾರ ಪೊಲೀಸರ ವಿನೂತನ ಪ್ರಯೋಗಕ್ಕೆ ವಾಹನ ಸವಾರರು ಸ್ಪಂದಿಸಿದ್ದು, ತಮ್ಮ ಸಂಚಾರ ಉಲ್ಲಂಘನೆ ದಂಡವನ್ನು ಆನ್‌ಲೈನ್‌ ಮೂಲಕವೇ ಪಾವತಿಸುತ್ತಿದ್ದು, ನಿತ್ಯ ಲಕ್ಷಾಂತರ ರೂ. ದಂಡ ಸಂಗ್ರಹವಾಗುತ್ತಿದೆ. ಈ ಮೊದಲು ಸಂಚಾರ ನಿಯಮ ಉಲ್ಲಂ ಸಿದರೆ, ಫೋಟೋ ಸಮೇತ ವಾಹನ ಮಾಲಿಕರ ಮನೆಗೆ ಅಂಚೆ ಮೂಲಕ ನೋಟಿಸ್‌ ಕಳುಹಿಸಲಾಗುತ್ತಿತ್ತು. ಆದರೆ, ಇದಕ್ಕೆ ಸಾಕಷ್ಟು ವ್ಯಯಿಸಬೇಕಾಗಿತ್ತು. ಸಾರಿಗೆ ಇಲಾಖೆ ವಾಹನಗಳ ನೋಂದಣಿ ಜತೆಗೆ ಸಂಬಂಧಿತ ಮಾಲಿಕರ ಮೊಬೈಲ್‌ ಸಂಖ್ಯೆಗಳನ್ನು ಸಂಗ್ರಹಿಸುತ್ತಿದೆ. ಈ ನಂಬರ್‌ಗಳನ್ನು ಸಾರಿಗೆ ಇಲಾಖೆ ಬೆಂಗಳೂರು ಪೊಲೀಸರ ಜತೆ ಹಂಚಿಕೊಳ್ಳುತ ¤ದೆ. ಈ ಮಾಹಿತಿ ಆಧರಿಸಿ ಯಾವುದೇ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾದರೆ, ಒಂದೆರಡು ದಿನಗಳಲ್ಲಿಯೇ ಅದರ ಮಾಲಿಕರಿಗೆ ನೋಟಿಸ್‌ ಸಂಖ್ಯೆ, ವಾಹನಗಳನೋಂದಣಿಸಂಖ್ಯೆ,ಸಂಚಾರ ನಿಯಮ ಉಲ್ಲಂಘನೆ ಸ್ವರೂಪ, ದಿನಾಂಕ, ಸಮಯ ಮತ್ತು ದಂಡದ ಮೊತ್ತ ಒಳಗೊಂಡ ಎಸ್‌ಎಂಎಸ್‌ ಅನ್ನು ನೋಂದಾಯಿತ ಮೊಬೈಲ್‌ ಸಂಖ್ಯೆಗೆ ರವಾನಿಸಲಾಗುತ ¤ದೆ. ಅಲ್ಲದೆ, ದಂಡ ಪಾವತಿಗೆ 7 ದಿನಗಳ ಕಾಲಾವಕಾಶ ನೀಡಲಾಗುತ್ತಿದ್ದು, ದಂಡ ಪಾವತಿಯ ಲಿಂಕ್‌ಗಳನ್ನು ಎಸ್‌ಎಂಎಸ್‌ ಒಳಗೊಂಡಿರುತ್ತದೆ.

ಐದುಕೋಟಿ ದಂಡ ಸಂಗ್ರಹ: 2021ರ ಡಿಸೆಂಬರ್‌ಲ್ಲಿ ಮೊಬೈಲ್‌ ಸಂದೇಶ ಕಳುಹಿಸುವ ಮೂಲಕ ವಾಹನ ಸವಾರರ ಸಂಚಾರ ಉಲ್ಲಂಘನೆ ಕುರಿತು ಮಾಹಿತಿ ನೀಡಲಾಗುತ್ತಿದೆ. ಹೀಗೆ ನಿತ್ಯ 10ರಿಂದ 20 ಸಾವಿರಕ್ಕೂ ಅಧಿಕ ಸಂದೇಶಗಳನ್ನು ಸಂಚಾರ ನಿರ್ವಹಣಾ ಕೇಂದ್ರ ದಿಂದ ವಾಹನ ಮಾಲಿಕರ ಮೊಬೈಲ್‌ ಸಂಖ್ಯೆಗೆ ಕಳುಹಿ ಸಲಾಗುತ್ತದೆ. ಒಮ್ಮೆ ಸಂಚಾರ ನಿಯಮ ಉಲ್ಲಂಘನೆ, ಪದೇ ಪದೆ ಉಲ್ಲಂಘನೆ ಪ್ರಕರಣಗಳು ಹೀಗೆ ಮೂರೂವರೆ ತಿಂಗಳಲ್ಲಿ ಅಂದಾಜು 40.60 ಲಕ್ಷಕ್ಕೂ ಅಧಿಕ ಸಂದೇಶಗಳು ಕಳುಹಿಸಲಾಗಿದೆ. ಸಂದೇಶ ಸ್ವೀಕರಿಸಿ ರುವ ವಾಹನ ಸವಾರರ ಪೈಕಿ ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ಸಂದೇಶದಲ್ಲಿರುವ ಲಿಂಕ್‌  ಮೂಲಕವೇ ದಂಡ ಪಾವತಿಸಿದ್ದಾರೆ.

ಇದನ್ನೂ ಓದಿ : ಬಂದೂಕು ತೋರಿಸಿ ಅತ್ಯಾಚಾರ: ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ !

ಮೂರೂವರೆ ತಿಂಗಳಲ್ಲಿ ಅಂದಾಜು 5.10 ಕೋಟಿ ರೂ. ಪಾವತಿಸಿದ್ದಾರೆ. ಈ ಮೊದಲು ವೆಬ್‌ಸೈಟ್‌ ಹಾಗೂ ನೇರವಾಗಿ ನಿತ್ಯ 80ರಿಂದ 95 ಲಕ್ಷ ರೂ.ವರೆಗೆ ದಂಡ ಸಂಗ್ರಹಿಸಲಾಗುತ್ತಿತ್ತು. ಆದರೆ, ಇದೀಗ ಎಸ್‌
ಎಂಎಸ್‌ ಮೂಲಕ ದಂಡ ಸಂಗ್ರಹ ಶೇ.4.20ರಷ್ಟು ಹೆಚ್ಚಾಗಿದೆ. ಕೆಲವರಿಗೆ ಈ ರೀತಿಯೂ ದಂಡ ಪಾವತಿಸ ಬಹುದು ಎಂಬ ಬಗ್ಗೆ ತಿಳಿದಿರಲಿಲ್ಲ. ಇದೀಗ ಹಂತ-ಹಂತವಾಗಿ ಗೊತ್ತಾಗುತ್ತಿದೆ ಎಂದು ಸಂಚಾರ
ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

– ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next