Advertisement
ಬುಧವಾರ 10 ಗಂಟೆಯ ಅನಂತರ ನಗರ ಬಹುತೇಕ ಸ್ತಬ್ಧವಾಗಿತ್ತು. ತುರ್ತುಸೇವೆಯ ವಾಹನಗಳ ಓಡಾಟ ಮಾತ್ರ ಕಂಡುಬಂದಿತ್ತು. ಆದರೆ ಬುಧ ವಾರಕ್ಕೆ ಹೋಲಿಸಿದರೆ ಗುರುವಾರ ನಗರದ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಅಧಿಕವಾಗಿತ್ತು. ಈ ಹಿಂದೆ ಲಾಕ್‌ಡೌನ್ ಘೋಷಣೆ ಮಾಡಿದ್ದಾಗ ಇದ್ದಂತೆ ವಾಹನಗಳ ಓಡಾಟದ ಮೇಲೆ ಅತಿಯಾದ ನಿರ್ಬಂಧ ಗುರುವಾರ ಕಂಡುಬರಲಿಲ್ಲ. ಕೆಲವೆಡೆ ವಾಹನಗಳನ್ನು ತಪಾಸಣೆ ನಡೆಸದೆ ಕಳುಹಿಸಿಕೊಡುತ್ತಿರುವುದು ಕಂಡುಬಂದಿದೆ. ತುರ್ತುಸೇವೆಗಳು, ಕೆಲವು ಕೈಗಾರಿಕೆಗಳ ಉದ್ಯೋಗಿಗಳು, ಬ್ಯಾಂಕ್ ಸಹಿತ ಸರಕಾರಿ ಸಂಸ್ಥೆಗಳ ಉದ್ಯೋಗಿಗಳು ಮಾತ್ರವಲ್ಲದೆ ಕೆಲವು ಸಾರ್ವಜನಿಕರು ಕೂಡ ಓಡಾಟ ನಡೆಸಿರುವುದು ಕಂಡು ಬಂದಿದೆ.
Related Articles
Advertisement
28 ವಾಹನಗಳು ವಶಕ್ಕೆ :
ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯಡಿ ಗುರುವಾರ 4 ಪ್ರಕರಣ, ಮಾಸ್ಕ್ ಧರಿಸದೇ ಇದ್ದ 154 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 28 ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮಾರ್ಗಸೂಚಿ ಉಲ್ಲಂಘನೆ ಹಿನ್ನೆಲೆಯಲ್ಲಿ ಅಂಗಡಿ, ಬಾರ್, ರೆಸ್ಟೋರೆಂಟ್ ಸಹಿತ ವಾಣಿಜ್ಯ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.