ಬಂಟ್ವಾಳ: ಹೊಂಡ ಗುಂಡಿಗಳಿಂದ ತುಂಬಿದ್ದ ರಾಷ್ಟ್ರೀಯ ಹೆದ್ದಾರಿ 75ರ ಡಾಮರೀಕರಣ ಕಾಮಗಾರಿಯ ಹಿನ್ನೆಲೆಯಲ್ಲಿ ಕಲ್ಲಡ್ಕ-ಮೆಲ್ಕಾರ್ ಭಾಗದಲ್ಲಿ ಗುರುವಾರ ಬೆಳಗ್ಗಿನಿಂದಲೇ ಟ್ರಾಫಿಕ್ ಜಾಮ್ ಉಂಟಾಗಿದೆ.
ಡಾಮಾರು ಕಾಮಗಾರಿಯ ವೇಳೆ ವಾಹನಗಳಿಗೆ ಸರಾಗವಾಗಿ ಸಾಗುವುದಕ್ಕೆ ತೊಂದರೆಯಾಗಿದ್ದು, ಆದರೆ ಹದಗೆಟ್ಟ ಹೆದ್ದಾರಿ ದುರಸ್ತಿ ಅನಿವಾರ್ಯವಾಗಿರುವುದರಿಂದ ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಪಾಣೆಮಂಗಳೂರು ಹೊಸ ಹಾಗೂ ಹಳೆ ಸೇತುವೆಯಲ್ಲೂ ಟ್ರಾಫಿಕ್ ಜಾಮ್ ಕಂಡುಬಂದಿತ್ತು.
ಇದನ್ನೂ ಓದಿ:ಉದ್ಯೋಗ ಕೊಡಿಸುವುದಾಗಿ ಕೋಟ್ಯಾಂತರ ರೂ. ವಂಚನೆ: ಐಷಾರಾಮಿ ವಂಚಕ ಪೊಲೀಸ್ ಬಲೆಗೆ
ಕಲ್ಲಡ್ಕದಿಂದ ಬಿ.ಸಿ.ರೋಡುವರೆಗೂ ಬ್ಲಾಕ್ ಮುಂದುವರಿದಿದ್ದು, ಹೆಚ್ಚಿನ ವಾಹನಗಳು ಪಾಣೆಮಂಗಳೂರು ಕಲ್ಲುರ್ಟಿ ದೇವಸ್ಥಾನದ ಬಳಿಯಿಂದ ಶಂಭೂರು- ದಾಸಕೋಡಿ ಮಾರ್ಗವಾಗಿ ಸಂಚರಿಸುತ್ತಿವೆ.