Advertisement

ಹಳೆಯಂಗಡಿ-ಪಕ್ಷಿಕೆರೆ ರಸ್ತೆಯ ರೈಲ್ವೇಗೇಟ್‌ ಬಳಿ ಸಂಚಾರ ದುಸ್ತರ

12:11 PM Dec 31, 2022 | Team Udayavani |

ಹಳೆಯಂಗಡಿ: ಹಳೆಯಂಗಡಿಯ ಹೆದ್ದಾರಿಯಿಂದ ಪಕ್ಷಿಕೆರೆಯಾಗಿ ಪುನರೂರು ಎಸ್‌ಕೋಡಿ ವರೆಗಿನ ರಸ್ತೆಯ ಅಭಿವೃದ್ಧಿ ಕಾಮಗಾರಿಯೂ ನಿಧಾನಗತಿಯಿಂದ ನಡೆಯುತ್ತಿರುವ ಕಾರಣ ಹಳೆಯಂಗಡಿ ರೈಲ್ವೇ ಗೇಟ್‌ ನ ಬಳಿಯಲ್ಲಿ ಜನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.

Advertisement

ಸುಮಾರು ಮೂರು ಕಿಲೋ ಮೀಟರ್‌ ಉದ್ದದ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಕಳೆದ ನಾಲ್ಕು ತಿಂಗಳಿಗಳಿಂದ ಕಾಮಗಾರಿ ನಡೆಯುತ್ತಿದೆ. ಈ ನಡುವೆ ಕಳೆದ ಹತ್ತು ಹದಿನೈದು ದಿನಗಳ ಹಿಂದೆ ಲೈಟ್‌ಹೌಸ್‌ನ ಇಂದಿರಾನಗರದ ತಿರುವಿನಿಂದ ಹಳೆಯಂಗಡಿ ರೈಲ್ವೇ ಗೇಟ್‌ನವರೆಗೆ ಇದ್ದ ಸುಮಾರು 300 ಮೀ. ರಸ್ತೆಯ ಡಾಮರನ್ನು ತೆಗೆದು ಜಲ್ಲಿ ಹಾಕಿರುವುದರಿಂದ ಈ ರಸ್ತೆಯಲ್ಲಿ ದೊಡ್ಡ ದೊಡ್ಡ ಜಲ್ಲಿಕಲ್ಲು ಎದ್ದು ಬಂದು ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ.

ರಿಕ್ಷಾ ಹಾಗೂ ದ್ವಿಚಕ್ರ ವಾಹನಗಳಿಗೆ ಹೆಚ್ಚು ತೊಂದರೆ ಆಗುತ್ತಿದೆ ಎಂದು ವಾಹನಗಳ ಸವಾರರು ಆರೋಪಿಸುತ್ತಿದ್ದಾರೆ. ಈ ರಸ್ತೆಯ ಬೇರೆ ಬೇರೆ ಪ್ರದೇಶಗಳಲ್ಲಿ ವಿಸ್ತರಣೆ ಕಾಮಗಾರಿ ನಡೆಯು ತ್ತಿರುವಾಗಲೇ ರೈಲ್ವೇ ಗೇಟ್‌ ರಸ್ತೆಯನ್ನು ಅಗೆದು ಹಾಕಿರುವುದರಿಂದ ಟಯರ್‌ ಪಂಕ್ಚರ್‌ ಆಗುತ್ತಿದೆ. ಜತೆಗೆ ದೊಡ್ಡ ದೊಡ್ಡ ಜಲ್ಲಿ ಕಲ್ಲುಗಳು ಟಯರ್‌ ನಿಂದ ಸಿಡಿದು ಪಾದಚಾರಿಗಳಿಗೆ ಬೀಳುತ್ತಿದೆ ಇದರಿಂದ ವಾಹನಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಜಲ್ಲಿ ಹುಡಿಯ ರಸ್ತೆ ಧೂಳೆದ್ದು ಉಸಿ ರಾಡಲು ತೊಂದರೆಯಾಗುತ್ತಿದೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯನ್ನು ಕೂಡಲೇ ಡಾಮರು ನಡೆಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಬಗ್ಗೆ ಉದಯವಾಣಿ ಪ್ರತಿನಿಧಿ ಲೋಕೋಪಯೋಗಿ ಇಲಾಖೆಯ ಎಂಜಿನಿಯರನ್ನು ಸಂಪರ್ಕಿಸಲು ದೂರವಾಣಿ ಕರೆ ಮಾಡಿದರೂ ಅವರು ಕರೆಯನ್ನು ಸ್ವೀಕರಿಸಲಿಲ್ಲ.

ಸಂಚರಿಸಲು ಕಷ್ಟವಾಗುತ್ತಿದೆ
ನಿತ್ಯ ಈ ರಸ್ತೆಯನ್ನೇ ಅವಲಂಬಿಸಿರುವ ನಮಗೆ ಇಲ್ಲಿ ಸಂಚರಿಸುವುದೇ ಕಷ್ಟವಾಗಿದೆ. ವಾಹನಕ್ಕೂ ತೊಂದರೆಯಾಗುತ್ತದೆ. ಜಲ್ಲಿ ಕಲ್ಲುಗಳ ರಸ್ತೆಯನ್ನು ನಿರ್ಮಿಸಿ ಹದಿನೈದು ದಿನಗಳದರೂ ಸರಿಪಡಿಸಿಲ್ಲ, ಒಂದೆರಡು ದಿನವಾದರೇ ಹೇಗೂ ಸಂಚರಿಸಬಹುದು ಆದರೆ ಇಷ್ಟು ದಿನಗಳಿಂದ ಡಾಮರು ಹಾಕದೇ, ಕಾಮಗಾರಿಯನ್ನು ನಡೆಸದೇ ಯಾರೂ ಸ್ಪಂದಿಸದೇ ಇರುವುದರಿಂದ ಬಹಳ ಕಷ್ಟವಾಗಿದೆ.
-ದಿನೇಶ್‌, ರಿಕ್ಷಾ ಚಾಲಕ ಹಳೆಯಂಗಡಿ

Advertisement

ಇಲಾಖೆಗೆ ಪತ್ರ ಬರೆಯಲಾಗುವುದು ಸಾರ್ವಜನಿಕರು ಈ ಗಂಭೀರ ಸಮಸ್ಯೆಯ ಬಗ್ಗೆ ಗಮನ ತಂದಿದ್ದಾರೆ. ನಾನು ಸಹ ಸ್ವತಃ ನೋಡಿದ್ದೇನೆ, ಈ ಬಗ್ಗೆ ಒಂದೆರಡು ದಿನದಲ್ಲಿ ಡಾಮರು ಹಾಕಬಹುದೆಂದು ನಿರೀಕ್ಷಿಸಿದ್ದೇ, ಇದೀಗ ತತ್‌ಕ್ಷಣ ಸಂಬಂಧಿಸಿದ ಇಲಾಖೆಗೆ ಪತ್ರವನ್ನು ಬರೆದು ಇಲ್ಲಿನ ವಾಸ್ತವ ಸ್ಥಿತಿಗತಿಯ ಬಗ್ಗೆ ಗಮನ ಸೆಳೆಯಲಾಗುವುದು.
-ಮುತ್ತಪ್ಪ ಡವಲಗಿ,
ಪಿಡಿಒ, ಹಳೆಯಂಗಡಿ ಗ್ರಾಮ ಪಂಚಾಯತ್‌

*ನರೇಂದ್ರ ಕೆರೆಕಾಡು

Advertisement

Udayavani is now on Telegram. Click here to join our channel and stay updated with the latest news.

Next