ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ಅವರ ಪುಣ್ಯತಿಥಿ ಅಂಗವಾಗಿ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಮಂಗಳವಾರ ನಡೆದ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಅಭಿಮಾನಿ ಗಳು ಆಗಮಸಿದ್ದರಿಂದ ಸುತ್ತ-ಮುತ್ತ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು. ಬೆಳಗ್ಗೆ 11 ಗಂಟೆಗೆ ಅನ್ನಸಂತರ್ಪಣೆ ಕಾರ್ಯಕ್ರಮ ಆರಂಭವಾಗಿದ್ದರಿಂದ ಅರಮನೆ ರಸ್ತೆ, ಬಿಡಿಎಂ ವೃತ್ತ, ಜಿಕೆವಿಕೆ ಮಂಭಾಗ, ಹೆಬ್ಟಾಳ ರಸ್ತೆ, ಟಿವಿ ಟವರ್ ರಸ್ತೆ, ಮೇಖ್ರೀ ಸರ್ಕಲ್ ಹಾಗೂ ಅರಮನೆ ಸುತ್ತ-ಮುತ್ತಲ ರಸ್ತೆಗಳಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು.
ಇದನ್ನೂ ಓದಿ:- ಬಿಎಂಟಿಸಿಗೆ ಕೊರೊನಾ ವಾರಿಯರ್ ಅವಾರ್ಡ್
ಸಾಗರೋಪಾದಿಯಲ್ಲಿ ಜನರು ಆಗಮಿಸಿ ದರಿಂದ ಅರಮನೆ ಮೈದಾನ ಸುತ್ತ-ಮುತ್ತ ಮಂದಗತಿಯಲ್ಲಿ ವಾಹನಗಳು ಸಂಚರಿಸಬೇಕಾಯಿತು. ಈ ಹಿನ್ನೆಲೆಯಲ್ಲಿ ಪ್ರತಿ ರಸ್ತೆಯಲ್ಲೂ ಸಂಚಾರ ಪೊಲೀಸರು ನಿಯೋಜಿಸಿದ್ದು, ಸಾರ್ವಜನಿಕರು, ಗಣ್ಯರಿಗೆ ಪ್ರತ್ಯೇಕವಾಗಿ ಕಾರ್ಯಕ್ರಮ ಸ್ಥಳಕ್ಕೆ ಕಳುಹಿಸಲಾಗಿತ್ತು.
ಬಿಗಿ ಭದ್ರತೆ: ಅರಮನೆ ಮೈದಾನದ ತ್ರಿಪುರವಾಸಿನಿ ಬಳಿ ಅನ್ನಸಂತರ್ಪಣೆ ಕಾರ್ಯಕ್ರಮದ ವೇಳೆ ಜನಸಂಖ್ಯೆಯನ್ನು ನಿಯಂತ್ರಿಸಲು ಪೊಲೀಸರು ಸ್ಥಳದಲ್ಲಿ ಹಾಜರಿದ್ದರು. ಭೋಜನಕ್ಕೆ ಸಾರ್ವಜನಿಕರು ತೆರಳುವ ವೇಳೆ ಪೊಲೀಸರು ಒಳಹೋಗಲು ಅನುವು ಮಾಡಿಕೊಟ್ಟು ಸುವ್ಯವಸ್ಥೆಯನ್ನು ಕಾಪಾಡಿದರು.
ಕಾರ್ಯಕ್ರಮದ ಭದ್ರತೆಗಾಗಿ ಕೇಂದ್ರ ವಿಭಾಗ ಡಿಸಿಪಿ ಎಂ.ಎನ್.ಅನುಚೇತ್ ಅವರ ನೇತೃತ್ವ ದಲ್ಲಿ ಮೂವರು ಎಸಿಪಿ, 32 ಪೊಲೀಸ್ ಇನ್ ಸ್ಪೆಕ್ಟರ್, 70 ಮಂದಿ ಪಿಎಸ್‌ಐ, 100 ಮಂದಿ ಎಎಸ್‌ಐ, 150 ಮಂದಿ ಕಾನ್‌ಸ್ಟೆàಬಲ್, ಆರು ಕೆಎಸ್‌ಆರ್‌ಪಿ ತುಕಡಿಗಳು ಸೇರಿ ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿ ಯನ್ನು ಭದ್ರತೆ ನಿಯೋಜಿಸಲಾಗಿತ್ತು. ಜತೆಗೆ ಗಣ್ಯರು ಮತ್ತು ಸಾರ್ವಜನಿಕರಿಗಾಗಿ ಪ್ರತ್ಯೇಕವಾಗಿ ವಾಹನಗಳ ನಿಲುಗಡೆಗೆ ಸ್ಥಳ ನಿಗದಿ ಮಾಡಲಾಗಿತ್ತು.
ಪುನೀತ್ ಪುಣ್ಯಸ್ಮರಣೆ: ಅನ್ನ ಸಂತರ್ಪಣೆ –
ಮಹದೇವಪುರ: ಪುನೀತ್ ರಾಜ್‌ಕುಮಾರ್ ಯುವಜನರಿಗೆ ಆದರ್ಶ ಮತ್ತು ಸ್ಪೂರ್ತಿದಾಯಕರಾಗಿದ್ದಾರೆ ಎಂದು ಗ್ರಾಪಂ ಸದಸ್ಯ ರಾಕೇಶ್‌ಗೌಡ ತಿಳಿಸಿದರು. ನಟ ದಿವಂಗತ ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ ಅಂಗವಾಗಿ ಮಂಡೂರು ಗ್ರಾಮದಲ್ಲಿ ಓಂ ಶಕ್ತಿ ದೇವಾಲಯ ಟ್ರಸ್ಟ್ ಹಾಗೂ ಮಂಡೂರು ಗ್ರಾಮಸ್ಥರು, ವಿಕಲಚೇತನ ಮಕ್ಕಳೊಂದಿಗೆ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡಿದ ನಂತರ ಮಾತನಾಡಿದರು.
ಪುನೀತ್ ಸಾವಿರಾರು ಜನರ ಬದುಕಿಗೆ ದಾರಿದೀಪವಾದ ಇವರು ತೋರಿಕೆ ಮಾಡದೆ ಸಮಾಜ ಸೇವೆ ಮಾಡುವುದನ್ನು ಸಹ ಅವರಿಂದ ಕಲಿಯಬೇಕಾದ ವಿಷಯ ಎಂದು ತಿಳಿಸಿದರು. ಮಂಡೂರು ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ ಮುನೇಗೌಡ, ಮಾಜಿ ಅಧ್ಯಕ್ಷ ವೇಣು, ಮಹೇಶ್‌ಗೌಡ, ಓಂ ಶಕ್ತಿ ಟ್ರಸ್ಟ್ ಅಧ್ಯಕ್ಷ ಮುನಿಕೃಷ್ಣರಾವ್ ಇತರರಿದ್ದರು.