Advertisement

ಸಾಂಪ್ರದಾಯಿಕ ಶೈಲಿಯ ಗೂಡು ದೀಪಗಳು

10:05 AM Nov 02, 2021 | Team Udayavani |

ಕಟಪಾಡಿ: ದೀಪಾವಳಿಯ ಸಡಗರದಲ್ಲಿ ಗೂಡು ದೀಪವೂ ಒಂದು ಭಾಗವಾಗಿದೆ. ಹಣತೆಯನ್ನು ಹಚ್ಚಿ ಬೆಳಗುವ ದೀಪಗಳ ನಡುವೆ ಬಾನೆತ್ತರದಲ್ಲಿ ರಾರಾಜಿಸುವ ಗೂಡಿನೊಳಗಿನ ಆಕಾಶ ದೀಪಗಳು ಮತ್ತಷ್ಟು ಮನಸಿಗೆ ಖುಷಿಯನ್ನು ನೀಡುತ್ತದೆ.
ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಶುರುವಾದಂತೆ ವಿವಿಧ ಮಾದರಿಯ ಗೂಡುದೀಪಗಳು ಮಾರುಕಟ್ಟೆಯಲ್ಲಿ ರಾರಾಜಿಸಲಿದೆ.

Advertisement

ಈ ನಡುವೆ ಅಂತಹ ಬೇಡಿಕೆಯುಕ್ತ ಸಾಂಪ್ರದಾಯಿಕ ಶೈಲಿಯ ಗೂಡು ದೀಪವನ್ನು ತಯಾರಿಸಿ ಕಲಾವಿದರು ತಮ್ಮ ಕಲಾ ಪ್ರದರ್ಶನದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಕಂಡು ಬಂದಿದೆ. ಗೂಡುದೀಪ ರಾರಾಜಿಸಿದಂತೆ ಕಲಾವಿದರ ಕಲಾಪ್ರೌಢಿಮೆಯು ರಾರಾಜಿಸಲು ಶುರುವಾಗಲಿದೆ ಎಂಬ ಸುಂದರ ಕನಸು ಚಂದ್ರಚಿತ್ರ ಕಲಾವಿದರದ್ದು.
ಬೆಳಕಿನ ಹಬ್ಬ ದ ದೀಪಾವಳಿಯ ಸಡಗರಕ್ಕೆ ಮೆರುಗು ನೀಡಲು ಚಂದ್ರಚಿತ್ರ ತಂಡದ ಕಲಾವಿದರು ಆಕಾಶ ದೀಪಗಳ ತಯಾರಿಯಲ್ಲಿ ನಿರತರಾಗಿದ್ದು, ಇನ್ನೇನು ಮಾರುಕಟ್ಟೆಯಲ್ಲಿ ವರ್ಣರಂಜಿತ ಆಕರ್ಷಣೀಯ ಬೇಡಿಕೆಯುಕ್ತ ಗೂಡು ದೀಪಗಳು ರಾರಾಜಿಸಲಿದೆ.

ಇದನ್ನೂ ಓದಿ:- ಏಕೀಕರಣದ ಒಗಟ್ಟು ಅಭಿವೃದ್ಧಿಗೂ ತೋರೋಣ
ಆ ನಿಟ್ಟಿನಲ್ಲಿ ಕುತ್ಪಾಡಿಯ ಚಂದ್ರಚಿತ್ರ, ಚೇತನ್ ಮಟ್ಟು ಹಾಗೂ ಕಲಾವಿದರು ಕೂಡಿಕೊಂಡು ಬೇಕಾದ ಸಲಕರಣೆಗಳನ್ನು ಸಿದ್ಧಪಡಿಸಿಕೊಂಡು ಕಳೆದ 25 ದಿನಗಳಿಂದ ಸುಮಾರು 400ರಕ್ಕೂ ಅಧಿಕ ಆಕರ್ಷಣೀಯ ಗೂಡು ದೀಪ ತಯಾರಿಯಲ್ಲಿ ನಿರತರಾಗಿದ್ದಾರೆ. ಇಲ್ಲಿ ಅಷ್ಟಪಟ್ಟಿ, ತುಳಸಿಕಟ್ಟೆ, ಮಂಟಪ, ಸ್ಪೀಡ್ ಬೋಟ್ ಮತ್ತಿತರ ಶೈಲಿಯ ಗೂಡು ದೀಪಗಳು ಸಾಂಪ್ರದಾಯಿಕ ಶೈಲಿಯಲ್ಲಿ ಮೂಡಿ ಬರುತ್ತಿದೆ.

ಉದ್ಯಾವರ, ಕಡೆಕಾರು, ಕಟಪಾಡಿ, ಸುಭಾಸ್ ನಗರ, ಮಲ್ಪೆ ಭಾಗದಲ್ಲಿ ಗ್ರಾಹಕರ ಸ್ವತಃ ಅಭಿರುಚಿಗೆ ತಕ್ಕ ಗೂಡುದೀಪಗಳನ್ನು ಸಿದ್ಧಪಡಿಸಿ ನೀಡಲಾಗುತ್ತಿದೆ. ಚಂದ್ರಮಿತ್ರ ಕಲಾವಿದರ ಕೈ ಚಳಕದಲ್ಲಿ 5 ಅಡಿ ಎತ್ತರದ ಮಂಟಪ ಮತ್ತು ತುಳಸಿ ಕಟ್ಟೆ ಗೂಡು ದೀಪಗಳೂ ಸಿದ್ಧಗೊಳ್ಳುತ್ತಿದ್ದು, 11 ಅಡಿ ಬಾಲವನ್ನು ಕೂಡಿಕೊಂಡು ಸುಮಾರು 20 ಅಡಿಗಳಿಗೂ ಅಧಿಕ ಎತ್ತರದಲ್ಲಿ ಈ ಆಕಾಶ ದೀಪಗಳು ಹಾರಾಡಿ ಜನಮನ ಗೆಲ್ಲಲಿದೆ ಎಂಬ ವಿಶ್ವಾಸವನ್ನು ಚಂದ್ರಚಿತ್ರ ಕಲಾವಿದರ ತಂಡ ವ್ಯಕ್ತಪಡಿಸುತ್ತಿದೆ.ಕಳೆದ 20 ವರ್ಷಗಳಿಂದ ಸಾಂಪ್ರದಾಯಿಕ ಗೂಡು ದೀಪಗಳನ್ನು ಬಿದಿರಿನ ಕಡ್ಡಿಗಳನ್ನು ಬಳಸಿ ಸಿದ್ಧಪಡಿಸಿದ್ದೆವು. ಅದು ವೆಚ್ಚದಾಯಕ ಮತ್ತು ತಯಾರಿಗೆ ಸಮಯವೂ ಹೆಚ್ಚು ತೆಗೆದುಕೊಳ್ಳುತ್ತದೆ. ಬೇಡಿಕೆಯಂತೆ ಹೆಚ್ಚಿನ ಸಂಖ್ಯೆಯಲ್ಲಿ ತಯಾರಿಸಲು ವಿಫಲರಾಗಿದ್ದೆವು. ಇದೀಗ ಸಾಂಪ್ರದಾಯಿಕ ಶೈಲಿಗೆಯೇ ಒತ್ತು ಕೊಟ್ಟು ವಿನೂತನ ಮಾದರಿಯಲ್ಲಿ ಕಲಾವಿದರು ಒಗ್ಗೂಡಿಕೊಂಡು ಗೂಡು ದೀಪವನ್ನು ವಿಶೇಷವಾಗಿ ಸಿದ್ಧಪಡಿಸಲಾಗುತ್ತಿದೆ ಎನ್ನತ್ತಾರೆ ಚಂದ್ರಚಿತ್ರ.

Advertisement
Advertisement

Udayavani is now on Telegram. Click here to join our channel and stay updated with the latest news.

Next