Advertisement

“ಸಾಂಪ್ರದಾಯಿಕ ವಿಜ್ಞಾನ ತನ್ನ ಮೌಲ್ಯ ಕಳೆದುಕೊಂಡಿಲ್ಲ’

04:30 PM Feb 23, 2017 | Team Udayavani |

ಸುಳ್ಯ: ಪಾಶ್ಚಾತ್ಯ ಸಮಾಜದ ನಾಗರಿಕತೆಯಿಂದ ಇಂದಿನ ಆಧುನಿಕ ವಿಜ್ಞಾನದ ವರೆಗೆ ಸಾಂಪ್ರದಾಯಿಕ ವಿಜ್ಞಾನ ಮೌಲ್ಯ ಕಳೆದುಕೊಂಡಿಲ್ಲ. ಇದು ಹೊಸ ಆವಿಷ್ಕಾರಕ್ಕೆ ಬುನಾದಿಯಾಗುತ್ತದೆ. ಮುಂದಿನ ಜನಾಂಗದ ಬೆಳವಣಿಗೆಗೆ ಸಹಕಾರಿಯಾಗುವಂತಹ ಉತ್ತಮ ಪರಿಸರದ ಸಮಾಜ ಸೃಷ್ಟಿಯಾಗಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ|  ಕೆ.ಆರ್‌. ಚಂದ್ರಶೇಖರ್‌ ಹೇಳಿದರು.

Advertisement

ಅವರು  ಸುಳ್ಯದ ನೆಹರೂ ಸ್ಮಾರಕ ಕಾಲೇಜಿನಲ್ಲಿ  ಸಾಂಪ್ರದಾಯಿಕ ವಿಜ್ಞಾನ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಸುಳ್ಯದ ನೆಹರೂ ಮೆಮೋರಿಯಲ್‌ ಕಾಲೇಜು, ಸುಳ್ಯ ಇದರ ವಿಜ್ಞಾನ ವಿಭಾಗದ ಆಶ್ರಯದಲ್ಲಿ ಕೆ.ವಿ.ಜಿ. ಆಯುರ್ವೇದ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಸಸ್ಯಶಾಸ್ತ್ರ ಅಧ್ಯಾಪಕರ ಸಂಘ ವನಶ್ರೀ ಇವುಗಳ ಸಂಯೋಜಕತ್ವದಲ್ಲಿ ಸಾಂಪ್ರದಾಯಿಕ ವಿಜ್ಞಾನ ಎಂಬ ವಿಷಯದ ಬಗ್ಗೆ ಬುಧವಾರ ಯುಜಿಸಿ ಪ್ರಾಯೋಜಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಮಾನವನ ಜೀವನ ಆರಂಭವಾದಂದಿನಿಂದ ಸಾಂಪ್ರದಾಯಿಕ ವಿಜ್ಞಾನ ಆರಂಭಗೊಂಡಿದೆ. ಸಂಸ್ಕೃತಿ ಬೆಳವಣಿಗೆ ಆದಂತೆ ಈ ವಿಜ್ಞಾನವು ಅಭಿವೃದ್ಧಿ ಹೊಂದುತ್ತಾ ಜೀವ ಸಂಕುಲದ ಕೊಂಡಿಯಾಗಿ ಬೆಳವಣಿಗೆ ಆಗಿದೆ. ಸಾಂಪ್ರದಾಯಿಕ ವಿಜ್ಞಾನವು ಆಧುನಿಕ ವಿಜ್ಞಾನಕ್ಕೆ ನೀಡಿದ ಕೊಡುಗೆ ಅನನ್ಯ ಎಂದರು.

ಅಕಾಡೆಮಿ ಆಫ್‌ ಲಿಬರಲ್‌ ಎಜುಕೇಶನ್‌ಇದರ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ  ಅವರು ಅಧ್ಯಕ್ಷತೆಯನ್ನು ವಹಿಸಿ, ಈಗಿನ ವಿಜ್ಞಾನ ಹೊಸತೇನಲ್ಲ ಅದು ಹಿಂದಿನ ಕಾಲದಲ್ಲೂ ಇತ್ತು. ಉಪನಿಷತ್‌, ವೇದಗಳಲ್ಲಿ ಅವುಗಳ ಬಗ್ಗೆ ಉಲ್ಲೇಖವಿದೆ. ಪುರಾಣದ ಪುಷ್ಪಕ ವಿಮಾನ ಇದಕ್ಕೊಂದು ಉದಾಹರಣೆ. ಗಣಪತಿ ದೇವರ ತಲೆ ಜೋಡಣೆ  ಈಗಿನ ಅಂಗ ಜೋಡಣೆ ಶಸ್ತ್ರಕ್ರಿಯೆಯಾಗಿದೆ ಎಂದರು.

Advertisement

ಪ್ರಥಮ ಗೋಷ್ಠಿಯಲ್ಲಿ ಸರಕಾರಿ ಸ್ವಾಯತ್ತ ಕಲಾ ಮತ್ತು ವಿಜ್ಞಾನ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಜಯಕರ ಭಂಡಾರಿ ಅವರು ಸಾಂಪ್ರದಾಯಿಕ ವಿಜ್ಞಾನ – ಪ್ರಸ್ತುತ ಮತ್ತು ಭವಿಷ್ಯದ ನಿರೀಕ್ಷೆಗಳು ಎಂಬ ವಿಷಯವಾಗಿ, ದ್ವಿತೀಯ ಗೋಷ್ಠಿಯಲ್ಲಿ ಔಷಧೀಯ ಕ್ಷೇತ್ರದ ಬೆಳವಣಿಗೆಯಲ್ಲಿ ಸಾಂಪ್ರದಾಯಿಕ ವಿಜ್ಞಾನದ ಪಾತ್ರ ಎಂಬ ವಿಷಯವಾಗಿ ಕೇರಳದ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ| ಗುರುಶಂಕರ ಪಿ. ಅವರು ವಿಚಾರ ಮಂಡಿಸಿದರು.

ಅಪರಾಹ್ನದ ಗೋಷ್ಠಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕೈಗಾರಿಕಾ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ ಪೊÅ| ಬಿ.ಕೆ. ಸರೋಜಿನಿ ಅವರು ಸಾಂಪ್ರದಾಯಿಕ ವಿಜ್ಞಾನದಲ್ಲಿ ಸಂಶೋಧನಾ ಸಾಧ್ಯತೆಗಳು ಎಂಬ ವಿಷಯದಲ್ಲಿ ಮಾತನಾಡಿದರು.

ಕಾರ್ಯಕ್ರಮ ಸಂಯೋಜಕ ಕುಲದೀಪ್‌ ಪೆಲ್ತಡ್ಕ, ಕಾಲೇಜಿನ ಉಪನ್ಯಾಸಕ ಡಾ| ಪೂವಪ್ಪ ಕಣಿಯೂರು, ವಿದ್ಯಾರ್ಥಿ ಕ್ಷೇಮಾಭಿವೃದ್ದಿ ಅಧಿಧಿಕಾರಿ ಡಾ| ಶಕೀರಾ ಜಬೀನ್‌ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲ ಡಾ| ಗಿರೀಧರ ಗೌಡ ಸ್ವಾಗತಿಸಿ, ವನಶ್ರೀ ವಿವಿಯ ಕಾರ್ಯದರ್ಶಿ ಡಾ| ಶೋಭಾ ವಂದಿಸಿದರು. ಪ್ರಣೀತಾ ಮತ್ತು ಅಶ್ವಿ‌ತಾ ಕಾರ್ಯಕ್ರಮ ನಿರೂಪಿಸಿದರು.

ಪಾರಂಪರಿಕ ಜ್ಞಾನ ಹೇರಳ
ಭಾರತೀಯ ಜೀವನ ವಿಧಾನದಲ್ಲಿ ಪಾರಂಪರಿಕ ಜ್ಞಾನ ಹೇರಳವಾಗಿದೆ. ಅನುಭವಾಧಾರಿತ ಜ್ಞಾನ ಹಾಗೂ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯ ಮೂಲಕ ವೈಜ್ಞಾನಿಕ ಅಭಿವೃದ್ಧಿಯಲ್ಲಿ ಅವುಗಳ ಸಮರ್ಪಕ ಬಳಕೆಗೆ ಇನ್ನೂ  ಅವಕಾಶಗಳಿವೆ.  ಸಾಂಪ್ರದಾಯಿಕ ವಿಜ್ಞಾನದ ಬದಲು ಅದೊಂದು ಸಂಸ್ಕೃತಿ ಆಗಿದೆ. ಮೌಲ್ಯಯುತವಾದ ಸಸ್ಯಸಂಪತ್ತು ನಾಶದ ಅಂಚಿಗೆ ಬಂದು ತಲುಪಿದೆ ಂದು ಮಂಗಳೂರು ವಿಶ್ವವಿದ್ಯಾನಿಲಯದ ಆನ್ವಯಿಕ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ|  ಕೆ.ಆರ್‌. ಚಂದ್ರಶೇಖರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next