Advertisement
ಮೀನುಗಾರಿಕೆಗೆ ರೆಡಿಯಾಂತ್ರೀಕೃತ ಮೀನುಗಾರಿಕೆ ಅವಧಿ ಮುಗಿಯುತ್ತಿದ್ದಂತೆ ಕರಾವಳಿ ಭಾಗದಲ್ಲಿ ಸಾಂಪ್ರ ದಾಯಿಕ ನಾಡದೋಣಿ ಮೀನು ಗಾರಿಕೆ ಪದ್ಧತಿ ಆರಂಭಗೊಳ್ಳು ತ್ತದೆ. ಈಗಾಗಲೇ ಮೀನು ಗಾರಿಕೆಗೆ ಬಳಸುವ ಬಲೆಗಳನ್ನು ಜೋಡಿಸುವ ಕಾಯಕ ಧಾರವನ್ನು ಮುಗಿಸಿ ಬಲೆಗಳನ್ನು ದೋಣಿಗೆ ತುಂಬಿಸಿ ಕಡಲಿಗಿಳಿಯಲು ಸಜ್ಜಾಗಿ ನಿಂತಿದ್ದಾರೆ.
ಸಹಕಾರಿ ತತ್ತ Ì
ಉಡುಪಿಯ ಮಲ್ಪೆ, ಕಾಪು, ಉಚ್ಚಿಲ, ಮಟ್ಟು, ಪಡುಕರೆ, ತೊಟ್ಟಂ, ಹೂಡೆ ಬೆಂಗ್ರೆ ಮುಂತಾದೆಡೆಗಳಲ್ಲಿ ನಾಡದೋಣಿ ಮೀನುಗಾರಿಕೆ ಹರಡಿಕೊಂಡಿದೆ. ಪ್ರತಿನಿತ್ಯ ಬೆಳಗ್ಗೆ ಮೀನುಗಾರಿಕೆಗೆ ತೆರಳುವ ಅವರು ಅದೇ ದಿನ ಸಂಜೆ ವಾಪಸಾಗುತ್ತಾರೆ. ವರ್ಷದ 10 ತಿಂಗಳು ಯಾಂತ್ರೀಕೃತ ಬೋಟ್‌ಗಳಲ್ಲಿ ಕಾರ್ಮಿಕರಾಗಿ ದುಡಿ ಯುವ ಇವರು ಮಳೆಗಾಲದ ಎರಡು ತಿಂಗಳು ನಾಡದೋಣಿಯಲ್ಲಿ ಮಾಲಕ ರಾಗಿ ಮೀನುಗಾರಿಕೆ ನಡೆಸುತ್ತಾರೆ. ಈ ಮೀನುಗಾರಿಕೆಯಿಂದ ಬಂದ ಲಾಭವನ್ನು ಎಲ್ಲರೂ ಸಮಾನವಾಗಿ ಹಂಚಿಕೊಳ್ಳುತ್ತಾರೆ. ಸಹಕಾರಿ ತತ್ವದಡಿಯಲ್ಲಿ ಮೀನುಗಾರಿಕೆ ಮಂಗಳೂರಿನಿಂದ ಗಂಗೊಳ್ಳಿಯ ವರೆಗೆ ನಡೆಯುತ್ತಿದೆ.
ಕಾಪುವಿನಿಂದ ಕೋಡಿಬೆಂಗ್ರೆಯ ವರೆಗೆ ಒಟ್ಟು 40 ಡಿಸ್ಕೋ ಫಂಡ್‌ಗಳಿವೆ. ಅಂದರೆ 40 ಗುಂಪುಗಳು ಮೀನುಗಾರಿಕೆ ನಡೆಸುತ್ತವೆ. ಒಂದು ಗುಂಪಿನಲ್ಲಿ ಕನಿಷ್ಠ 35 ಗರಿಷ್ಠ 60 ಮಂದಿ ಇರುತ್ತಾರೆ. 800ಕ್ಕೂ ಅಧಿಕ ಟ್ರಾಲ್‌ದೋಣಿಗಳು, 30 ಕೈರಂಪಣಿ ದೋಣಿಗಳು ಮಳೆಗಾಲದಲ್ಲಿ ಮೀನುಗಾರಿಕೆ ನಡೆಸುತ್ತವೆ. ಸುಮಾರು 30 ಸಾವಿರ ಮಂದಿ ಮೀನುಗಾರರು ನೇರವಾಗಿ ನಾಡದೋಣಿ ಮೀನುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕರ ರಹಿತ ಸೀಮೆಎಣ್ಣೆ ಪ್ರಮಾಣ ಹೆಚ್ಚಳಕ್ಕೆ ಆಗ್ರಹ
ನಾಡದೋಣಿ ಮೀನುಗಾರಿಕೆಗೆ ಸರಕಾರ ನೀಡುತ್ತಿರುವ ಕರರಹಿತ ಸೀಮೆಎಣ್ಣೆಯ ಪ್ರಮಾಣವನ್ನು ತಿಂಗಳಿಗೆ 400 ಲೀ.ಗೆ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇದುವರೆಗೂ ಈಡೇರಲಿಲ್ಲ. ಪ್ರಸ್ತುತ ತಿಂಗಳಿಗೆ 185 ಲೀ. ಮಾತ್ರ ನೀಡಲಾಗುತ್ತಿದ್ದು ನಾಡದೋಣಿ ಒಂದು ಟ್ರಿಪ್ ಮೀನುಗಾರಿಕೆ ನಡೆಸಬೇಕಿದ್ದರೂ ಕನಿಷ್ಠ 100ರಿಂದ 150 ಲೀ. ಅಗತ್ಯವಿದೆ. ಹೊಸ ಸರಕಾರ ಮೀನುಗಾರರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಕರರಹಿತ ಸೀಮೆ ಎಣ್ಣೆಯ ಪ್ರಮಾಣವನ್ನು ಹೆಚ್ಚಳ ಮಾಡುವಂತೆ ಆಗ್ರಹಿಸಿದ್ದಾರೆ.
Related Articles
ಕಳೆದ ವರ್ಷ ನಾಡದೋಣಿ ಮೀನುಗಾರಿಕೆ ಹೆಚ್ಚು ಆಶಾದಾಯಕವಾಗಿರಲಿಲ್ಲ. ಮಳೆಗಾಲದಲ್ಲಿ ನಾಡದೋಣಿ ಮೀನುಗಾರಿಕೆ ನಡೆಸಲು ಸಿಗುವ ದಿನ ಬಹಳ ಕಡಿಮೆ. ಬೆಲೆಬಾಳುವ ಸಿಗಡಿ ಮೀನು ದೊರೆತರೆ ಲಾಭದಾಯಕ ಮೀನುಗಾರಿಕೆ. ಉಳಿದಂತೆ ಬಂಗುಡೆ, ಬೂತಾಯಿ ಇನ್ನಿತರ ಸಣ್ಣಪುಟ್ಟ ಮೀನುಗಳು ದೊರೆತರೆ ಪ್ರಯೋಜನವಿಲ್ಲ. ಈ ಸಲದ ವಾತಾವರಣವನ್ನು ನೋಡುವಾಗ ಸಿಗಡಿ ಮೀನು ಸಿಗುವ ನಿರೀಕ್ಷೆ ಇದೆ.
– ಕೃಷ್ಣ ಸುವರ್ಣ, ಪಡುತೋನ್ಸೆ ಬೆಂಗ್ರೆ
Advertisement
ಸಮುದ್ರಪೂಜೆ ಆದ ಮೇಲೆ ಮೀನುಗಾರಿಕೆಮಲ್ಪೆಯ ನಾಡದೋಣಿ ಮೀನುಗಾರ ಸಂಘದ ವತಿಯಿಂದ ಶುಕ್ರವಾರ ಸಮುದ್ರಪೂಜೆ ನಡೆಸಲಾಗಿದೆ. ಆ ದಿನದಿಂದ ಯಾವತ್ತು ಬೇಕಾದರೂ ಮೀನುಗಾರಿಕೆಗೆ ತೆರಳಬಹುದಾಗಿದೆ.
– ಜನಾರ್ದನ ತಿಂಗಳಾಯ, ಅಧ್ಯಕ್ಷರು, ಮಲ್ಪೆ ನಾಡದೋಣಿ ಮೀನುಗಾರರ ಸಂಘ – ನಟರಾಜ್ ಮಲ್ಪೆ