Advertisement
ದೇಶದೆಲ್ಲೆಡೆ ವೈಭವದಿಂದ ಆಚರಿಸಲ್ಪಡುವ ಗಣೇಶ ಹಬ್ಬ ಈಗ ಮತ್ತೆ ಬಂದಿದೆ. ಪ್ರತೀ ವರ್ಷ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ ದಿನ ಆಚರಿಸಲ್ಪಡುವ ಗಣೇಶ ಹಬ್ಬದಂದು ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಮೂರ್ತಿಯನ್ನು ಪೂಜಿಸುತ್ತಾರೆ. ಮೋದಕ, ಕಡುಬು ಸಿಹಿತಿಂದು ಸಂಭ್ರಮಿಸುತ್ತಾರೆ. ಇದೇ ವೇಳೆ ಹೊಸ ಬಟ್ಟೆ ಖರೀದಿಸಿ, ಮಿರ ಮಿರನೆ ಮಿಂಚದೇ ಇದ್ದರೆ ಹಬ್ಬದ ಖುಷಿ ಪೂರ್ಣಗೊಳ್ಳಲಾರದು.
ಹಬ್ಬವೆಂದ ಮೇಲೆ ಪಾಶ್ಚಾತ್ಯ ಬಟ್ಟೆಗಳಿಗಿಂತ ಸಾಂಪ್ರದಾಯಿಕ ಬಟ್ಟೆಗಳಿಗೆ ಮಹತ್ವ ಹೆಚ್ಚು. ಜರಿ ಪಂಚೆಯಲ್ಲಿ ಹಬ್ಬದ ಆಚರಣೆ ಮಾಡಿದರೆ ಅದರ ಗಮ್ಮತ್ತೇ ಬೇರೆ. ಇತ್ತೀಚೆಗೆ ನಗರ ಪ್ರದೇಶದಲ್ಲಿ ಪಂಚೆ ಉಡುವ ಮಂದಿ ಕಡಿಮೆ ಇದ್ದರೂ, ಗ್ರಾಮೀಣ ಪ್ರದೇಶದಲ್ಲಿ ಈ ಪದ್ಧತಿ ಇಂದಿಗೂ ಇದೆ. ಪುರುಷರು ಜರಿಪಂಚೆಯನ್ನು ಉಟ್ಟು ಹಬ್ಬದ ದಿನದಂದು ಕಂಗೊಳಿಸುತ್ತಾರೆ. ಗಣೇಶ ಚತುರ್ಥಿಯ ದಿನದಂದು ಸಾಮಾನ್ಯವಾಗಿ ಗಣಪತಿ ದೇವಸ್ಥಾನಕ್ಕೆ ತೆರಳುತ್ತಾರೆ. ಈ ಸಮಯದಲ್ಲಿಯೂ ಪ್ಯಾಂಟ್-ಟೀಶರ್ಟ್‌ಗಳಿಗಿಂತೂ ಹೆಚ್ಚಿನ ಆಯ್ಕೆ ಅಂದರೆ ಸಾಂಪ್ರದಾಯಿಕ ಬಟ್ಟೆಗಳಾಗಿವೆ.
Related Articles
ಸಾಂಪ್ರದಾಯಿಕ ಉಡುಗೆಯಾದ ಖಾದಿ ಬಟ್ಟೆಗಳು ಹಬ್ಬಕ್ಕೆ ಮತ್ತಷ್ಟು ಕಳೆ ನೀಡುವುದರಲ್ಲಿ ಸಂಶಯವಿಲ್ಲ. ಇದೇ ಕಾರಣದಿಂದಾಗಿ ನಗರದಲ್ಲಿ ಖಾದಿ ಬಟ್ಟೆ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಸೀರೆ, ಶರ್ಟ್, ಜುಬ್ಟಾ, ಪೈಜಾಮ, ವೇಸ್‌ಕೋಟ್, ಪುಟ್ಟ ಮಕ್ಕಳ ಲಂಗ ಜಾಕೀಟು, ಕಾಲೇಜು ಹುಡುಗಿಯರಿಗಾಗಿ ಚೂಡಿದಾರ್, ಆಕರ್ಷಕ ಖಾದಿ ಪರ್ಸ್, ಬ್ಯಾಗ್, ಖಾದಿ ದುಪಟ್ಟಾ, ಟಾಪ್… ಹೀಗೆ ಎಲ್ಲ ವಯೋಮಾನದವರಿಗೂ ಬೇಕಾದ ದರಿಸುಗಳು ಖಾದಿಯಲ್ಲಿರುವಾಗ ಹಬ್ಬಕ್ಕೆ ಇದಕ್ಕಿಂತ ಒಳ್ಳೆಯದು ಮತ್ತೇನು ಬೇಕು ಎನ್ನುತ್ತಿದ್ದಾರೆ ಗ್ರಾಹಕರು.
Advertisement
ಮಹಿಳೆಯರು ಕೂಡ ಹಬ್ಬಕ್ಕೆ ಹೊಸ ಬಟ್ಟೆ ಧರಿಸುತ್ತಿರುತ್ತಾರೆ. ಅದರಲ್ಲೂ ಹಬ್ಬದ ಸಮಯದಲ್ಲಿ ಸಂಬಂಧಿಕರ ಮನೆಗೆ ತೆರಳಿ ಹಿರಿಯರ ಆಶಿರ್ವಾದ ಪಡೆಯುವುದು ಸಾಮಾನ್ಯ. ಸೀರೆಯಲ್ಲಿ ಸಿಲ್ಕ್, ಫ್ಯಾನ್ಸಿ, ಎಂಬ್ರಾಯಿಡರಿ ವರ್ಕ್, ರೇಷ್ಮೆ, ಕಾಂಜೀವರಂ ಸೇರಿದಂತೆ ಮತ್ತಿತರ ಶೈಲಿಯ ಸೀರೆಗಳ ಖರೀದಿ ಹೆಚ್ಚಿದೆ. ಅದೇ ರೀತಿ ಯುವತಿಯರು ಕುರ್ತಾ, ಅನಾರ್ಕಲಿ, ಗೌನ್, ಚೋಲಿ, ಲೆಹಂಗ, ಸಲ್ವಾರ್ ಕಮೀಜ್, ಲಾಂಗ್ ಸ್ಕರ್ಟ್ ಖರೀದಿ ಮಾಡುತ್ತಿದ್ದಾರೆ.
ಹಬ್ಬಕ್ಕೆ ಅನೇಕ ಆಫರ್ಮಾರುಕಟ್ಟೆಯಲ್ಲಿ ಗಣೇಶ ಹಬ್ಬಕ್ಕೆ ಖರೀದಿಸುವ ಬಟ್ಟೆಗಳ ಮೇಳೆ ಅನೇಕ ಆಫರ್‌ಗಳನ್ನು ನೀಡಲಾಗುತ್ತಿದೆ. ಕೆಲವೆಡೆ ಒಂದು ಬಟ್ಟೆ ಕೊಂಡರೆ ಮತ್ತೊಂದು ಉಚಿತವಾಗಿದ್ದರೆ. ಇನ್ನು ಕೆಲವೆಡೆ ಶೇ.15. 20 ಮತ್ತು 30ರಷ್ಟು ಆಫರ್ ನೀಡಲಾಗಿದೆ. ಇವಿಷ್ಟೇ ಅಲ್ಲದೆ, ಆನ್‌ಲೈನ್ ಶಾಪಿಂಗ್ ಪ್ರಿಯರಿಗೂ ಖರೀದಿಸುವ ಬಟ್ಟೆಗಳ ಮೇಲೆ ಆಫರ್‌ಗಳ ಸುರಿಮಳೆಯನ್ನೇ ನೀಡಲಾಗಿದೆ. ಗಣೇಶ ಹಬ್ಬದ ಅಂಗವಾಗಿ ನಗರದ ಟೆಕ್ಸ್‌ಟೈಲ್ಸ್, ಗಾರ್ಮೆಂಟ್ಸ್, ಬಟ್ಟೆ ಅಂಗಡಿಗಳಲ್ಲಿ ಹೆಚ್ಚಿನ ಜನಸಂದಣಿ ಇದೆ. ನಗರದ ಪ್ರಮುಖ ಜವಳಿ ಅಂಗಡಿಗಳಲ್ಲಿ ವಿವಿಧ ಆಫರ್‌ಗಳಿದ್ದು, ಕೆಲವೊಂದು ಕಡೆಗಳಲ್ಲಿ ರಸ್ತೆ ಬದಿಗಳಲ್ಲಿ ಬಟ್ಟೆ ಮಾರುವವರು ಕೂಡ ಹೆಚ್ಚಾಗಿದ್ದಾರೆ. ಹೆಚ್ಚಿನ ಪ್ರಾಶಸ್ತ್ಯ
ಹಬ್ಬಕ್ಕೆ ಒಂದು ವಾರವಿರುವಾಗಲೇ ಬಟ್ಟೆಗಳ ಖರೀದಿ ಪ್ರಾರಂಭವಾಗಿದೆ. ಸಾಂಪ್ರದಾಯಿಕ ಶೈಲಿಯ ಬಟ್ಟೆಗಳಿಗೆ ಗ್ರಾಹಕರು ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾರೆ.
– ಗೌರವ್,
ವ್ಯಾಪಾರಿ ನವೀನ್ ಭಟ್ ಇಳಂತಿಲ