Advertisement
2015ರಲ್ಲಿ ಪ್ರಾರಂಭಿಸಲಾದ “ಟೊಯೋಟಾ ಪಾರ್ಟ್ಸ್ ಕನೆಕ್ಟ್”ನ ವಿಸ್ತೃತ ಈ ಕ್ರಮವು, ಕಂಪೆನಿಯ ವಿಶ್ವಾಸಾರ್ಹ ಉತ್ಪಾದನೆಯ ಬಿಡಿ ಭಾಗಗಳ ಲಭ್ಯತೆ ಹಾಗೂ ಪ್ರವೇಶದೊಂದಿಗೆ ಗ್ರಾಹಕರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಗುರಿಯನ್ನು ಹೊಂದಿರುವ ಪ್ರಮುಖ ಔಟ್ ರೀಚ್ ಪ್ರೋಗ್ರಾಂ ಆಗಿದೆ.
Related Articles
Advertisement
ಈ ಕಾರ್ಯಕ್ರಮದ ಅಡಿಯಲ್ಲಿ ಕಾರ್ ಕೇರ್ ಗಳು, ಎಂಜಿನ್ ಆಯಿಲ್ ಮತ್ತು ಟೈರ್, ಬ್ಯಾಟರಿ ಮುಂತಾದ ವಿಭಾಗಗಳನ್ನು ಒಳಗೊಂಡಂತೆ ಉತ್ಪನ್ನಗಳ ವ್ಯಾಪ್ತಿಯನ್ನು ಸಂಸ್ಥೆ ವಿಸ್ತರಿಸಿಕೊಂಡಿದೆ. ಸಂಸ್ಥೆಯ ಈ ಸೇವೆಯು ಪ್ರಸ್ತುತ 12 ನಗರಗಳಲ್ಲಿ ಲಭ್ಯವಿದೆ ಮತ್ತು 2021ರ ಅಂತ್ಯದ ವೇಳೆಗೆ ದೇಶದ ಎಲ್ಲಾ ನಗರಗಳಿಗೆ ವಿಸ್ತರಿಸಲಾಗುವುದು ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು, ಈ ಕುರಿತಾಗಿ ಮಾತನಾಡಿದ ಟೊಯೋಟಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ನವೀನ್ ಸೋನಿ, ಈ ಹೋಮ್ ಡೆಲಿವರಿ ಕಸ್ಟಮರ್ ಔಟ್ ರೀಚ್ ಸೌಲಭ್ಯದೊಂದಿಗೆ ಉತ್ಪನ್ನಗಳ ವಿಶ್ವಾಸರ್ಹತೆಯನ್ನು ಉಳಿಸಿಕೊಳ್ಳುವ ನಮ್ಮ ಬದ್ಧತೆಯ ಕಡೆಗೆ ಮತ್ತೊಂದು ಮೈಲುಗಲ್ಲನ್ನು ಸಾಧಿಸಿದ್ದೇವೆ. ಗ್ರಾಹಕರು ಮತ್ತು ವಾಹನಗಳ ಸುರಕ್ಷತೆಯ ಕಡೆಗೆ ಕಂಪೆನಿಯ ನಂಬಿಕಾರ್ಹ ಬಿಡಿ ಭಾಗಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದಿದ್ದಾರೆ.
ಟಿಕೆಎಂ ಉತ್ಪನ್ನಗಳು ಮತ್ತು ಸೇವೆಗಳು ಸರಿಯಾಗಿ ತಲುಪುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಇವೆಲ್ಲ ನಮ್ಮ ಪ್ರಯತ್ನಗಳಾಗಿವೆ ಎಂದು ಹೇಳಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ ಗ್ರಾಹಕರು ಟೊಯೋಟಾ ಪಾರ್ಟ್ಸ್ ಕನೆಕ್ಟ್ www.toyotapartsconnect.in ಭೇಟಿ ನೀಡಬಹುದು ಅಥವಾ ಹತ್ತಿರದ ಟೊಯೋಟಾ ಡೀಲರ್ ಶಿಪ್ ನನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ಅಕ್ಟೋಬರ್ ನಲ್ಲಿ ಮತ್ತೆ ಭಾರತದಲ್ಲಿ ಕೋವಿಡ್ 3ನೇ ಅಲೆ ಸಾಧ್ಯತೆ: ರಾಯಿಟರ್ಸ್ ಸಮೀಕ್ಷೆ