Advertisement

ವಿಧಿವಿಜ್ಞಾನದಲ್ಲಿ ವಿಷ ಶಾಸ್ತ್ರಕ್ಕೆ ಹೆಚ್ಚಿನ ಮಹತ್ವ: ಎನ್‌. ಶಶಿ ಕುಮಾರ್‌

11:29 PM Nov 06, 2022 | Team Udayavani |

ಮಂಗಳೂರು: ವಿಧಿ ವಿಜ್ಞಾನ ವೈದ್ಯಕೀಯದಲ್ಲಿ (ಫೂರೆನ್ಸಿಕ್‌ ಮೆಡಿ ಸಿನ್‌) ವಿಷ ಶಾಸ್ತ್ರ (ಟೋಕ್ಸಿ ಕೋಲಜಿ) ಅತ್ಯಂತ ಸಂಕೀರ್ಣ ವಿಷಯವಾಗಿದ್ದು, ಪ್ರಮುಖ ಅಂಗವಾಗಿದೆ. ಪ್ರಸ್ತುತ ಈ ವಿಭಾಗ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ ಎಂದು ಪೊಲೀಸ್‌ ಆಯುಕ್ತ ಎನ್‌. ಶಶಿ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ನಗರದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಫೂರೆನ್ಸಿಕ್‌ ಮೆಡಿಸಿನ್‌ ಮತ್ತು ಟೋಕ್ಸಿಕೋಲಜಿ ವಿಭಾಗದ ಆಶ್ರಯದಲ್ಲಿ ಇಂಡಿಯನ್‌ ಸೊಸೈಟಿಆಫ್‌ ಟೋಕ್ಸಿಕೋಲಜಿಯ (ಐಎಸ್‌ಟಿ) 16ನೇ ವಾರ್ಷಿಕ ರಾಷ್ಟ್ರೀಯ ಸಮಾ ವೇಶವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಜ್ಞಾನವನ್ನು ಉನ್ನತೀಕರಿಸಿಕೊಳ್ಳಿ
ಅಧ್ಯಕ್ಷತೆ ವಹಿಸಿದ್ದ ಮಾಹೆ ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಮಾತನಾಡಿ, ವಿಧಿವಿಜ್ಞಾನ
ವಿಭಾಗ ವೈದ್ಯಕೀಯ ಕ್ಷೇತ್ರದ ಮಹತ್ವದ ಭಾಗವಾಗಿದ್ದು ವಿಷಶಾಸ್ತ್ರ ಇದರ ಪ್ರಮುಖ ಅಂಗವಾಗಿ ಗುರುತಿಸಿಕೊಂಡಿದೆ. ಈ ಕ್ಷೇತ್ರದಲ್ಲಿ ಆಗಿರುವ, ಆಗುತ್ತಿರುವ ಆವಿಷ್ಕಾರಗಳು, ಸಂಶೋಧನೆಗಳ ಬಗ್ಗೆ ಜ್ಞಾನದ ಉನ್ನತೀಕರಣಕ್ಕೆ ಈ ರೀತಿಯ ಸಮಾವೇಶಗಳು ಮಹತ್ವದ ಪಾತ್ರವನ್ನು ವಹಿಸುತ್ತಿವೆ ಎಂದರು.

ಮಾಹೆ ಸಹ ಉಪಕುಲಪತಿ (ಮಂಗಳೂರು ಕ್ಯಾಂಪಸ್‌) ಡಾ| ದಿಲೀಪ್‌ ಜಿ. ನಾೖಕ್‌ ಮಾತನಾಡಿದರು. ಮಂಗಳೂರು ಕೆಎಂಸಿ ಡೀನ್‌ ಡಾ| ಬಿ. ಉಣ್ಣಿಕೃಷ್ಣನ್‌, ಇಂಡಿ ಯನ್‌ ಸೊಸೈಟಿ ಆಫ್‌ ಟೋಕ್ಸಿಕೋಲಜಿ ಅಧ್ಯಕ್ಷ ಡಾ| ಸುರೇಂದ್ರನಾಥ್‌ ಜೆನಾ ಸಂಸ್ಥೆಯ ಬಗ್ಗೆ ವಿವರಿಸಿದರು.

ಮಾಹೆ ಸಹ ಉಪಕುಲಪತಿ (ಮಣಪಾಲ ಕ್ಯಾಂಪಸ್‌) ಡಾ| ವೆಂಕಟ್ರಾಯ ಪ್ರಭು, ಮಂಗಳೂರು ಕೆಎಂಸಿ ಅಸೋಸಿಯೇಟೆಡ್‌ ಡೀನ್‌ ಡಾ| ಸುರೇಶ್‌ ಕುಮಾರ್‌ ಶೆಟ್ಟಿ, ಡಾ| ಪ್ರಮೋದ್‌ ಕುಮಾರ್‌, ಎಂಕಾಡ್ಸ್‌ ಡೀನ್‌ ಡಾ| ಅಶಿತಾ ಉಪ್ಪೂರು, ಅಸೋಸಿಯೇಟೆಡ್‌ ಡೀನ್‌ಗಳಾದ ಡಾ| ಪ್ರೇಮಲತಾ ಶೆಟ್ಟಿ, ಡಾ| ಜುನೈದ್‌ ಅಹಮ್ಮದ್‌, ಐಎಸ್‌ಟಿ ಕಾರ್ಯದರ್ಶಿ ಸೆಂಥಿಲ್‌ ಕುಮಾರ್‌, ಡಾ| ವಿ. ಪಿಳ್ಳೈ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next