Advertisement

ಟೌನ್‌ಶಿಪ್‌ಗೆ 800 ಎಕರೆ ಭೂಸ್ವಾಧೀನ!

04:36 PM May 07, 2020 | mahesh |

ರಾಮನಗರ: ಬಿಡದಿ ಇಂಟಗ್ರೇಟೆಡ್‌ ಟೌನ್‌ಶಿಪ್‌ಗೆಂದು ಗುರುತಿಸಿರುವ ಭೂಮಿ ಕೆಂಪು ವಲಯದಲ್ಲಿದ್ದು, ಈ ಪೈಕಿ 800 ಎಕರೆ ಮಾತ್ರ ಸರ್ಕಾರ ಕೆಐಎಡಿಬಿ ಮೂಲಕ ಭೂ ಸ್ವಾಧೀನಕ್ಕೆ ಮುಂದಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹೀಗಾಗಿ ತಕ್ಷಣ ಭೂಸ್ವಾಧೀನ ಪ್ರಕ್ರಿಯೆ ನಿಲ್ಲಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ವಾದೀತು ಎಂದು ಮಾಗಡಿ ಮಾಜಿ ಶಾಸಕ ಎಚ್‌.ಸಿ. ಬಾಲಕೃಷ್ಣ ಎಚ್ಚರಿಸಿದರು. ತಾಲೂಕಿನ ಬಿಡದಿ ಹೋಬಳಿ ಕಂಚು ಗಾರನಹಳ್ಳಿ ಗ್ರಾಪಂ ವ್ಯಾಪ್ತಿಯ ಹೊಸೂರು ತೋಪು, ಮದ್ದೂರಮ್ಮ ದೇವಾಲಯದ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು

Advertisement

ಎಚ್‌ಡಿಕೆ ಕನಸಿನ ಕೂಸು: 2006ರಲ್ಲಿ ಅಂದಿನ ಸಿಎಂ ಎಚ್‌.ಡಿ. ಕುಮಾರ ಸ್ವಾಮಿ, ಬಿಡದಿ ಸೇರಿ ನಂದಗುಡಿ, ಸೋಲೂರು, ಸಾತನೂರಿ ನಲ್ಲಿ ಹೀಗೆ 4 ಕಡೆ ಟೌನ್‌ಶಿಪ್‌ ನಿರ್ಮಾಣದ ಯೋಜನೆ ರೂಪಿಸಿದ್ದರು. ಬಿಡದಿ ಹೋಬಳಿ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಪಂಗಳ ವ್ಯಾಪ್ತಿಯಲ್ಲಿ 9600 ಎಕರೆ ಭೂಮಿ ಗುರುತಿಸಿ, ಡಿಎಲ್‌ಎಫ್ ಸಂಸ್ಥೆಗೆ ಅಭಿವೃದ್ಧಿಗಾಗಿ ಎಂದು ಸರ್ಕಾರ ಕೊಟ್ಟಿತ್ತು. ಹೀಗೆ ಗುರುತಿಸಿರುವ ಭೂಮಿಯನ್ನು ಖಾಸಗಿ ಮಾಲಿಕರು ಅಭಿವೃದ್ಧಿ, ಮಾರಾಟ ಇತ್ಯಾದಿಗೆ ಅವಕಾಶ ವಾಗದಂತೆ ಗುರುತಿಸಿರುವ ಎಲ್ಲಾ 9600 ಎಕರೆ ಭೂಮಿಯನ್ನು ಕೆಂಪು ವಲಯ ಎಂದು ಗುರುತಿಸಿತ್ತು.

ಬಿಡದಿ ಹೊರತುಪಡಿಸಿ ಉಳಿದ ಟೌನ್‌ಶಿಪ್‌ ರದ್ದು: ಬಳಿಕ ಬಿಜೆಪಿ ಸರ್ಕಾರದಲ್ಲಿ ಸಿಎಂ ಆಗಿದ್ದ ಸದಾನಂದ ಗೌಡರು ಬಿಡದಿ ಟೌನ್‌ಶಿಪ್‌ ಹೊರತು ಪಡಿಸಿ, ಉಳಿದ 4 ಟೌನ್‌ಶಿಪ್‌
ರದ್ದುಗೊಳಿಸಿದ್ದರು. ಆದರೆ ನಿರ್ಮಾಣಕ್ಕೆ ಮುಂದಾಗಲಿಲ್ಲ. ಬಿಡದಿ ಟೌನ್‌ಶಿಪ್‌ನ ಭೂಮಿ ರೆಡ್‌ ಜೋನ್‌ನಲ್ಲಿದ್ದಿದ್ದರಿಂದ ಈ ಭಾಗದ ರೈತರು ತಮ್ಮ ಭೂಮಿ ಮಾರುಕಟ್ಟೆ ಬೆಲೆಗೆ
ಮಾರಲಾಗದೆ, ಕನ್‌ವರ್ಷನ್‌, ಕಟ್ಟಡ ನಿರ್ಮಿಸಿಕೊಳ್ಳಲಾಗದೆ, 14 ವರ್ಷಗಳಿಂದ ಪರಿತಪಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 2018ರಲ್ಲಿ ಎಚ್‌ಡಿಕೆ ಮತ್ತೆ ಸಿಎಂ ಆಗಿದ್ದಾಗ ಟೌನ್‌ಶಿಪ್‌ಗೆ ಜೀವ ನೀಡುವುದಾಗಿ ಹೇಳಿದ್ದರು. ಈ ಭಾಗದ ರೈತರಲ್ಲಿ ಮತ್ತೆ ಉತ್ಸಾಹ ಚಿಗುರಿತ್ತು. ಆದರೆ ಎಚ್‌ಡಿಕೆ ಅಧಿಕಾರ ಕಳೆದು ಕೊಂಡಿದ್ದರಿಂದ ಭೂ ಮಾಲೀಕರು ಮತ್ತೆ ಕುಸಿದರು ಎಂದರು.

ಕೆಂಪು ವಲಯ ಕಾನೂನು ಉಲ್ಲಂಘನೆ!: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದು, ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಕೆಂಪು ವಲಯದ ಒಟ್ಟು ಭೂಮಿ ಪೈಕಿ 800 ಎಕರೆ ಭೂಮಿ ಸ್ವಾಧೀನಕ್ಕೆ ಮುಂದಾಗಿದೆ. ಎಕರೆಗೆ ಸುಮಾರು 1.20 ಕೋಟಿ ಬೆಲೆ ಕಟ್ಟಲಾಗಿದೆ ಎಂದು ಗೊತ್ತಾಗಿದೆ. 800 ಎಕರೆ ಪೈಕಿ ದೊಡ್ಡ ಪ್ರಮಾಣದ ಭೂಮಿ ಎಸ್‌ಪಿಆರ್‌ ತಿಮ್ಮೇಗೌಡರಿಗೆ ಸೇರಿದ್ದು ಎಂದು ಗೊತ್ತಾಗಿದೆ. ಎಲ್ಲಾ 9,600 ಎಕರೆ ಭೂಮಿ ಸ್ವಾಧೀನಕ್ಕೆ ತೆಗೆದುಕೊಳ್ಳುವುದನ್ನು ಬಿಟ್ಟು ಕೇವಲ 800 ಎಕರೆ ಭೂಮಿ ಮಾತ್ರ ತೆಗೆದುಕೊಳ್ಳುವುದು
ಯಾವ ನ್ಯಾಯ ಎಂದು ಪ್ರಶ್ನಿಸಿದರು.

ರೆಡ್‌ ಜೋನ್‌ನಿಂದ ಮುಕ್ತಿ: ಸರ್ಕಾರ ತಕ್ಷಣ ಎಲ್ಲ ಭೂಮಿ ಸ್ವಾಧೀನಕ್ಕೆ ಪಡೆಯಬೇಕು. ಇಲ್ಲವೇ ರೆಡ್‌ ಜೋನ್‌ನಿಂದ ಮುಕ್ತಗೊಳಿಸ ಬೇಕು. ರೆಡ್‌ ಜೋನ್‌ನಿಂದ ಮುಕ್ತವಾದರೆ ರೈತರು ತಮ್ಮ ಭೂಮಿಯನ್ನು ತಾವೇ ಅಭಿವೃದ್ಧಿ ಪಡಿಸಿಕೊಳ್ಳುತ್ತಾರೆ. ಸರ್ಕಾರ ಇವೆರಡನ್ನು ಮಾಡದಿದ್ದರೆ ಹೋರಾಟ ಹಾಗೂ ಸಿಎಂ ಮನೆ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

Advertisement

ಎಂಎಲ್‌ಸಿ ಸಿ.ಎಂ.ಲಿಂಗಪ್ಪ, ತಾಪಂ ನಿರ್ಗಮಿತ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಗಾಣಕಲ್‌ ನಟರಾಜ್‌, ಸದಸ್ಯ ಎಚ್‌.ಜಿ.ಪ್ರಕಾಶ್‌, ಬಿಡದಿ ಪುರಸಭಾ ಸದಸ್ಯ ವೈ.ರಮೇಶ್‌, ಪ್ರಮುಖ ಹೊಸೂರು ರಾಜಣ್ಣ, ಅಬ್ಬನಕುಪ್ಪೆ ರಮೇಶ್‌, ಜೀವನ್‌, ಸ್ವಾಮಿ, ಕೃಷ್ಣಮೂರ್ತಿ, ಮಧು, ನಾರಾಯಣ ರೆಡ್ಡಿ ಮುಂತಾದವರು ಹಾಜರಿದ್ದರು.

ಕುಮಾರಸ್ವಾಮಿ ನೇತೃತ್ವದಲ್ಲೇ ಹೋರಾಟಕ್ಕೆ ಸಿದ್ಧ!
ಬಿಡದಿ ಟೌನ್‌ಶಿಪ್‌ ಮಾಜಿ ಸಿಎಂ ಎಚ್‌. ಡಿ. ಕುಮಾರಸ್ವಾಮಿ ಕನಸಿನ ಕೂಸು. ಹೀಗಾಗಿ ಅವರು ಈ ವಿಚಾರದಲ್ಲಿ ಹೆಚ್ಚು ಆಸಕ್ತಿವಹಿಸ ಬೇಕಾಗಿದೆ. ಬಿಡದಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಭೂಮಿಯಾದ್ದರಿಂದ ಈ ಭಾಗದ ಹಾಲಿ ಶಾಸಕರು (ಎ.ಮಂಜುನಾಥ್‌) ಈ ಬಗ್ಗೆ ಹೆಚ್ಚು ಕಾಳಜಿವಹಿಸಬೇಕಿತ್ತು. ಈ ವಿಚಾರದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹೋರಾಟ ನಡೆಸುವುದಾದರೆ ಅವರ ನೇತೃತ್ವದಲ್ಲೇ ಹೋರಾಟಕ್ಕೆ ತಾವು ಸಿದ್ಧ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next