Advertisement

ರೈತರ ಚಿತ್ತ ಕೃಷಿ ಚಟುವಟಿಕೆಯತ್ತ

09:35 PM Jul 05, 2021 | Girisha |

ಸಿಂದಗಿ: ಮಳೆ ಕೊರತೆಯಿಂದ ಜಮೀನು ಹದಗೊಳ್ಳದೆ, ಬಿತ್ತನೆ ಆಗದಿರುವುದರಿಂದ ಚಿಂತೆಯಲ್ಲಿ ತೊಡಗಿದ್ದ ಅನ್ನದಾತನಿಗೆ ಕಳೆದ ವಾರ ವರುಣ ಕೃಪೆ ತೋರಿದ್ದು ತಾಲೂಕಾದ್ಯಂತ 2.7 ಸೆ.ಮೀ. ಮಳೆ ಪ್ರಮಾಣ ದಾಖಲಾಗಿದೆ. ಜೂನ್‌ ಆರಂಭದಲ್ಲಿ ಸುರಿದಿದ್ದ ಮಳೆ ಎರಡು ವಾರಗಳ ಬಿಡುವು ನೀಡಿತ್ತು. ಇದರಿಂದ ಬಿತ್ತನೆಗೆ ಹಿನ್ನಡೆಯಾಗಿತ್ತು.

Advertisement

ಕಳೆದ ವಾರ ಮಳೆ ಸುರಿದು ಕೃಷಿ ಚಟುವಟಿಕೆಗಳಿಗೆ ಅನಕೂಲಕರವಾಗಿದೆ. ಈಗಾಗಲೇ ಸಜ್ಜುಗೊಳಿಸಿರುವ ಜಮೀನುಗಳಲ್ಲಿ ತೊಗರಿ, ಸೂರ್ಯಕಾಂತಿ, ಮೆಕ್ಕೆಜೋಳ, ಸಜ್ಜೆ ಬಿತ್ತನೆ ಕಾರ್ಯ ಚುರುಕು ಪಡೆದುಕೊಂಡಿದೆ. ಸಿಂದಗಿ, ಆಲಮೇಲ ಮತ್ತು ದೇವರಹಿಪ್ಪರಗಿ ರೈತ ಸಂಪರ್ಕ ಕೇಂದ್ರಗಳಿಂದ ರೈತರು ರಿಯಾಯ್ತಿ ದರದಲ್ಲಿ ಬಿತ್ತನೆ ಬೀಜಗಳನ್ನು ಖರೀದಿಸಿ ಬಿತ್ತನೆ ಕಾರ್ಯದಲ್ಲಿ ತೋಡಗಿದ್ದಾರೆ. ಸಿಂದಗಿ, ಆಲಮೇಲ ಮತ್ತು ದೇವರಹಿಪ್ಪರಗಿ ವಲಯಗಳಲ್ಲಿ ಕೃಷಿ ಅ ಧಿಕಾರಿಗಳು ಜಮೀನುಗಳಿಗೆ ಹೋಗಿ ರೈತರಿಗೆ ಸಮಗ್ರ ಕೃಷಿ ಪದ್ಧತಿ, ಸಾವಯವ ಕೃಷಿ ಪದ್ಧತಿ, ಹನಿ ನೀರಾವರಿ ಪದ್ದತಿ ಸೇರಿದಂತೆ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಮಾಡುವ ಮೂಲಕ ಆಹಾರ ಧಾನ್ಯಗಳನ್ನು ಬೆಳೆಯಲು ಸಲಹೆ ಸೂಚನೆಗಳನ್ನು ನಿಡುತ್ತಿದ್ದಾರೆ.

ಕೃಷಿ ಉತ್ಪಾದನೆ, ರೈತರ ಆರ್ಥಿಕ ಪರಿಸ್ಥಿತಿ ಹಾಗೂ ಜೀವನಮಟ್ಟ ಸುಧಾರಿಸಲು ಸಮಗ್ರ ಕೃಷಿ ಪದ್ಧತಿಗಳು ತುಂಬಾ ಸಹಕಾರಿಯಾಗಿದೆ. ಅನಿಶ್ಚಿತ ಮಳೆ, ಹವಾಮಾನ ವೈಪರಿತ್ಯಗಳಿಂದ ಕೃಷಿ ಉತ್ಪಾದನೆಯ ಸುಸ್ಥಿರತೆಯನ್ನು ಕಳೆದುಕೊಳ್ಳುತ್ತಿದ್ದು, ಕೇವಲ ಬೆಳೆಗಳಿಂದ ಬರುತ್ತಿರುವ ಉತ್ಪಾದನೆಯು ಹಾಗೂ ಆದಾಯ ಕುಂಠಿತಗೊಳ್ಳುತ್ತಿದ್ದು, ಕಾರಣ ಬೆಳೆಗಳ ಜೊತೆಗೆ ಕೃಷಿ ಅವಲಂಬಿತ ಉಪ ಕಸುಬುಗಳ ಸೂಕ್ತ ಸಂಯೋಜನೆಯಿಂದ ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಥ ರೀತಿಯಲ್ಲಿ ಬಳಸಿಕೊಂಡು ಸುಸ್ಥಿರ ಉತ್ಪಾದನೆ ಪಡೆದು ಆದಾಯವನ್ನು ಉತ್ತಮಪಡಿಸುವುದರ ಜೊತೆಗೆ ವರ್ಷ ಪೂರ್ತಿ ರೈತರ ಕುಟುಂಬಕ್ಕೆ ಉದ್ಯೋಗ ಸƒಷ್ಟಿಸಿ ಸ್ವಾವಲಂಬಿ ಜೀವನೋಪಾಯ ಪಡೆಯುವುದೇ ಸಮಗ್ರ ಕೃಷಿ ಪದ್ಧತಿ ತತ್ವವಾಗಿದೆ ಎಂದು ಕೃಷಿ ಅ ಧಿಕಾರಿಗಳು ರೈತರಿಗೆ ಮಾಹಿತಿ ನೀಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next