Advertisement
ಕೋವಿಡ್ ಮೂರು ಅಲೆಗಳಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಸಂಪೂರ್ಣ ನೆಲ ಕಚ್ಚಿತ್ತು. ನಿಸರ್ಗ ಪ್ರಿಯರು ಇಲ್ಲದೆ ಪ್ರವಾಸಿ ತಾಣಗಳು ಭಣಗುಡುತ್ತಿದ್ದವು. ಕೋವಿಡ್ ಕ್ಷೀಣಗೊಂಡ ಬಳಿಕ ಪ್ರವಾಸಿ ತಾಣಗಳತ್ತ ಪ್ರವಾಸಿಗರು ಮುಖ ಮಾಡಿದ್ದಾರೆ. ಪ್ರವಾಸಿ ತಾಣಗಳು ವಾರಾಂತ್ಯದಲ್ಲಿ ಜನಜಂಗುಳಿಯಿಂದ ತುಂಬಿರುತ್ತವೆ.
Related Articles
Advertisement
ಈ ವರ್ಷದ ಜನವರಿಯಲ್ಲಿ ಒಟ್ಟು 3,13,495 ಪ್ರವಾಸಿಗರು ಭೇಟಿ ನೀಡಿದ್ದರೆ, ಶೃಂಗೇರಿಗೆ 1,25,445 ಪ್ರವಾಸಿಗರು, ಹೊರನಾಡಿಗೆ 1,12,500, ಕಳಸಕ್ಕೆ 19,400, ದತ್ತಪೀಠಕ್ಕೆ 36,150, ಕೆಮ್ಮಣ್ಣುಗುಂಡಿ ಗಿರಿಧಾಮಕ್ಕೆ 20 ಸಾವಿರ ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ.
ಫೆಬ್ರವರಿಯಲ್ಲಿ ಒಟ್ಟು 3,37,893 ಪ್ರವಾಸಿಗರು ಭೇಟಿ ನೀಡಿ ವಿವಿಧ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಿದ್ದಾರೆ. ಶೃಂಗೇರಿಗೆ 1,37,793, ಹೊರನಾಡು 1.20 ಲಕ್ಷ, ಕಳಸಕ್ಕೆ 35 ಸಾವಿರ, ದತ್ತಪೀಠಕ್ಕೆ 27 ಸಾವಿರ, ಕೆಮ್ಮಣ್ಣುಗುಂಡಿಗೆ 18,100 ಮಂದಿ ಭೇಟಿ ನೀಡಿದ್ದಾರೆ.
ಮಾರ್ಚ್‌ನಲ್ಲಿ ಒಟ್ಟು 3,10,840 ಪ್ರವಾಸಿಗರು ಭೇಟಿ ನೀಡಿದ್ದಾರೆ. ಅದರಲ್ಲಿ ಶೃಂಗೇರಿಗೆ 1.38ಲಕ್ಷ, ಹೊರನಾಡಿಗೆ 1,17,100, ಕಳಸಕ್ಕೆ 11,200, ದತ್ತಪೀಠಕ್ಕೆ 28,440, ಕೆಮ್ಮಣ್ಣು ಗುಂಡಿಗೆ 16,100 ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ. ಕೋವಿಡ್ ಬಳಿಕ ಪ್ರವಾಸಿಗರ ದಂಡು ಪ್ರವಾಸಿ ತಾಣಗಳತ್ತ ಮುಖ ಮಾಡಿದ್ದು ಕಳೆಗುಂದಿದ್ದ ಪ್ರವಾಸಿ ತಾಣಗಳು ಕಳೆಗಟ್ಟುತ್ತಿವೆ.
ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ರಸ್ತೆಗಳ ಅಭಿವೃದ್ಧಿಗೆ 33.33ಕೋಟಿ, ಕಟ್ಟಡ ನಿರ್ಮಾಣಕ್ಕೆ 11ಕೋಟಿ, ಕೆಆರ್‌ಐಡಿಎಲ್‌ಗೆ 8 ಕೋಟಿ ರೂ., ಪುರಾತತ್ವ ಇಲಾಖೆಗೆ 85ಲಕ್ಷ ರೂ. ಬಿಡುಗಡೆಗೊಂಡಿದ್ದು, 81.14ಕೋಟಿ ರೂ. ಅನುದಾನ ಬಿಡುಗಡೆಗೊಳ್ಳಬೇಕಿದೆ. -ಆರ್. ಶಿವಕುಮಾರ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ.