Advertisement
ವಿಶಿಷ್ಟ ಶೈಲಿ: ಗುಡಿಬಂಡೆ ಭೈರಸಾಗರ ಕೆರೆ ಭಾರತದ ಭೂಪಟ ಹೋಲುವ ರೀತಿ ಹಾಗೂ ಸಂಜೆ ಸೂರ್ಯಸ್ತದ ದೃಶ್ಯ ನೋಡಲು ನೂರಾರು ಪ್ರವಾಸಿಗರು ಬರುತ್ತಿದ್ದಾರೆ. ಸುತ್ತಲೂ ಹಸಿರ ಮಧ್ಯೆ ಇರುವ ವಿಶಾಲವಾದ ನೀರಿನ ಸಾಗರ, ಏರಿ ಮೇಲೆ ಸಾಗಿದರೆ ಸಾಗರದಂತೆಕಾಣುವಕೆರೆ ಎಂಥವರಿಗೂ ಮೈಜುಮ್ಮೆನ್ನುವ ಅನುಭವ ಆಗುತ್ತದೆ. ಅಮಾನಿಬೈ ರಸಾಗರ ಕೆರೆ ಎತ್ತರಪ್ರ ದೇಶದಿಂದ ನೋಡಿದರೆ ಭಾರತದ ಭೂಪಟದಂತೆ ಗೋಚರಿಸುವುದು ಬಹು ವಿಶಿಷ್ಟ ಶೈಲಿಯಲ್ಲಿ ಕೆರೆ ಕಟ್ಟೆಯನ್ನು ನಿರ್ಮಾಣ ಮಾಡಿರುವುದಕ್ಕೆ ಸಾಕ್ಷಿಯಾಗಿದೆ.
Related Articles
Advertisement
ಮೂಲಸೌಕರ್ಯ ಕಲ್ಪಿಸಿದರೆ ಉತ್ತಮ : ಬೆಂಗಳೂರಿಗೆ ಹತ್ತಿರದಲ್ಲಿ ಇರುವ ಗುಡಿಬಂಡೆಯಲ್ಲಿ ಅನೇಕ ಪ್ರವಾಸಿ ತಾಣಗಳಿವೆ ಎಂದು ನಮಗೆ ಗೊತ್ತೆ ಇರಲಿಲ್ಲ.ಸಾಮಾಜಿಕಜಾಲತಾಣದಲ್ಲಿಅಮಾನಿಬೈರಸಾಗರ ಕೆರೆಯ ಮತ್ತು ಗುಡಿಬಂಡೆ ಸುರಸದ್ಮಗಿರಿ ಬೆಟ್ಟದ ಫೋಟೋ ಮತ್ತು ವಿಡಿಯೋ ಹಾಕಿದ್ದರು. ಅದನ್ನು ನೋಡಿದ ಬಳಿಕ ನೋಡಲೇ ಬೇಕೆನಿಸಿ ನಾನು ಮತ್ತು ಕುಟುಂಬಸ್ಥರು ಆಗಮಿಸಿ ಸಂತೋಷದಿಂದ ಕಳೆದಿದ್ದೇವೆ. ಆದರೆ ಕೆಲ ಮೂಲ ಸೌಕರ್ಯಗಳ ಕೊರತೆಯಿದ್ದು, ಸರಿಪಡಿಸಿದರೆ ಉತ್ತಮವಾಗಿರುತ್ತದೆ ಎಂದು ಬೆಂಗಳೂರು ನಿವಾಸಿ ಸಾಗರ್ ಎಂಬುವವರು ಪ್ರತಿಕ್ರಿಯಿಸಿದರು.
ಬೋಟಿಂಗ್ ಮಾಡುವುದಾಗಿ ಹೇಳಿ 5 ವರ್ಷ ಕಳೆದವು : ಗುಡಿಬಂಡೆ ಅಮಾನಿಬೈರಸಾಗರ ಕೆರೆ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿಪಡಿಸುತ್ತೇವೆಂದು ಹೇಳಿ ಸುಮಾರು5 ವರ್ಷಗಳೇ ಕಳೆದಿವೆ. ಆದರೆ ಇಲ್ಲಿಯವರೆಗೂ ಅಭಿವೃದ್ಧಿಪಡಿಸುವಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ.
ಪೊಲೀಸ್ ಬಂದೋಬಸ್ತ್ : ಕೆರೆಗೆ ಹೆಚ್ಚು ನೀರು ಬಂದು ಇನ್ನೇನು ಹರಿಯುವ ಮಟ್ಟದಲ್ಲಿರುವುದರಿಂದ ಇಲ್ಲಿಗೆ ಅನೇಕ ಪ್ರವಾಸಿಗರು ಮತ್ತು ಮಕ್ಕಳು ಬರುತ್ತಾರೆಂದು ಮುನ್ನೆಚ್ಚರಿಕೆ ಕ್ರಮವಾಗಿ ಅಮಾನಿಬೈರಸಾಗರ ಕೆರೆ ಕಟ್ಟೆಗೆ ಪೊಲೀಸರನ್ನು ನಿಯೋಜನ ಮಾಡಿ ಸೂಕ್ತ ಬಂದೋಬಸ್ತ್ ನೀಡಲಾಗುತ್ತಿದೆ.
–ವೆಂಕಟೇಶ್ ಎನ್.ವಿ