Advertisement

ಉಡುಪಿ –ಮಂಗಳೂರು : ದೇಗುಲ, ಪ್ರವಾಸಿ ತಾಣಗಳಲ್ಲಿ ದಟ್ಟಣೆ

02:05 AM Apr 25, 2022 | Team Udayavani |

ಪಣಂಬೂರು/ಮಲ್ಪೆ, ಎ. 24: ರವಿವಾರ ಕರಾವಳಿಯ ದೇವಸ್ಥಾನಗಳು, ಬೀಚ್‌ಗಳು ಸೇರಿದಂತೆ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಕಂಡುಬಂದರು.

Advertisement

ಕರಾವಳಿಯಲ್ಲಿ ಸೆಕೆಯೂ ಹೆಚ್ಚಾಗಿದ್ದು, ಪಣಂಬೂರು, ಸುರತ್ಕಲ್‌, ಮಲ್ಪೆ ಮೊದಲಾದೆಡೆಗಳಲ್ಲಿ ಪ್ರವಾಸಿಗರ ದಟ್ಟಣೆ ಇತ್ತು. ಜನರು ಸಮುದ್ರದ ನೀರಿಗಿಳಿದು ಸ್ನಾನಗೈದರು. ಮೋಜು ಮಸ್ತಿಯಲ್ಲಿ ಹೊತ್ತು ಕಳೆದು. ಮಲ್ಪೆಯ ಸೀವಾಕ್‌, ಸೈಂಟ್‌ ಮೇರಿಸ್‌ ದ್ವೀಪಕ್ಕೂ ರವಿವಾರ ಬೆಳಗಿನಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿಹರಿಸಿದರು. ವಾಹನ ನಿಲುಗಡೆ ಪ್ರದೇಶಗಳೂ ಭರ್ತಿಯಾಗಿದ್ದವು. ಬೀಚ್‌ ರಕ್ಷಣಾ ಸಿಬಂದಿ ಮುಂಜಾಗ್ರತೆ ಕ್ರಮ ಕೈಗೊಂಡಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು, ಕೊಲ್ಲೂರು ಸೇರಿದಂತೆ ದೇವಸ್ಥಾನಗಳಲ್ಲೂ ಭಕ್ತರ ಸಂಖ್ಯೆ ಅಧಿಕವಿತ್ತು. ಪ್ರಸ್ತುತ ಶಾಲೆಗಳಿಗೆ ರಜೆ ಇರುವುದರಿಂದ ದೂರದ ಊರುಗಳಿಂದ ಕುಟುಂಬ ಸಮೇತ ಭಕ್ತರು ಭೇಟಿ ನೀಡಿ ಸೇವೆ ಸಲ್ಲಿಸುತ್ತಿದ್ದಾರೆ.

ಶುಭ ಸಮಾರಂಭ: ಸಂಚಾರ ದಟ್ಟಣೆ
ಬಂಟ್ವಾಳ, ಎ. 24: ರವಿವಾರ ರಜಾ ದಿನವಾದರೂ ಮದುವೆ ಸೇರಿದಂತೆ ಇನ್ನಿತರ ಸಮಾರಂಭಗಳ ಹಿನ್ನೆಲೆಯಲ್ಲಿ ಹೆಚ್ಚಿನ ವಾಹನಗಳ ಓಡಾಟದ ಪರಿಣಾಮ ಬಹು ತೇಕ ಕಡೆ ಟ್ರಾಫಿಕ್‌ ಜಾಮ್‌ ಕಂಡುಬಂತು. ಬಿ.ಸಿ.ರೋಡು-ಅಡ್ಡಹೊಳೆ ಕಾಮಗಾರಿ ಹಿನ್ನೆಲೆಯಲ್ಲಿ ಈ ಹೆದ್ದಾರಿಯಲ್ಲಿ ನಿತ್ಯವೂ ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿದ್ದು, ರವಿವಾರ ವಾಹನಗಳ ಓಡಾಟ ಹೆಚ್ಚಾಗಿದ್ದರಿಂದ ವಾಹನಗಳು ಇನ್ನಷ್ಟು ನಿಧಾನವಾಗಿ ಸಾಗಿ ಒಂದು ಹಂತದಲ್ಲಿ ಟ್ರಾಫಿಕ್‌ ಜಾಮ್‌ ಸ್ಥಿತಿ ಉಂಟಾಯಿತು.

ಹೆದ್ದಾರಿ ಕಾಮಗಾರಿಗೆ ಸಾಕಷ್ಟು ಕಡೆ ರಸ್ತೆಯನ್ನು ಡೈವರ್ಟ್‌ ಮಾಡಿ ಕೊಡಲಾ ಗಿದ್ದು, ವಾಹನ ಚಾಲಕರು ಗೊಂದಲಕ್ಕೆ ಒಳಗಾಗುವುದರಿಂದ ಆಗಾಗ ಅಲ್ಲಲ್ಲಿ ಬ್ಲಾಕ್‌ ಆಗುತ್ತಿತ್ತು. ರವಿವಾರ ಶುಭದಿನವಾದ ಕಾರಣ ಮದುವೆ ಇತ್ಯಾದಿ ಶುಭ ಸಮಾರಂಭಗಳು ಹೆಚ್ಚು ಇದ್ದು ವಾಹನ ಪಾರ್ಕಿಂಗ್‌ ಸಮಸ್ಯೆ ಕೂಡ ಉಂಟಾಗಿತ್ತು.

Advertisement

ಮಂಗಳೂರಿನ ನಂತೂರು, ಉಡುಪಿಯ ಕಟಪಾಡಿ ಸೇರಿದಂತೆ ಹೆದ್ದಾರಿಯ ವಿವಿಧ ಕೂಡು ರಸ್ತೆಗಳಲ್ಲಿ ವಾಹನ ದಟ್ಟಣೆಯಿಂದ ಜನ ಸಮಸ್ಯೆ ಎದುರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next