Advertisement

“ಟೂರ್‌ ಆಫ್ ಡ್ಯೂಟಿ’ಅಡಿಯಲ್ಲಿ ಸೈನಿಕರ ನೇಮಕ

02:54 AM Apr 07, 2022 | Team Udayavani |

ಹೊಸದಿಲ್ಲಿ: ಭಾರತೀಯ ಸೇನೆಯಲ್ಲಿನ ಶೇ.50ರಷ್ಟು ಯೋಧರು ಇನ್ನು 5 ವರ್ಷಗಳಲ್ಲಿ ನಿವೃತ್ತರಾಗಲಿದ್ದು, ಆ ಹುದ್ದೆಗಳ ಭರ್ತಿಗೆ ಕೇಂದ್ರ ಸರಕಾರ ಕೂಡಲೇ ಮುಂದಾಗುವ ಸಾಧ್ಯತೆ ಇದೆ.

Advertisement

ಕೇಂದ್ರ ಸರಕಾರದ ಮೂಲಗಳಿಂದ ಹೊರಬಿದ್ದ ಮಾಹಿತಿ ಪ್ರಕಾರ, ಕಳೆದೆರಡು ವಾರಗಳಿಂದ “ಟೂರ್‌ ಆಫ್ ಡ್ಯೂಟಿ’ ನೇಮಕಾತಿ ಪ್ರಕ್ರಿಯೆಯ ಕರಡನ್ನು ಸರಕಾರ ಸಿದ್ಧಪಡಿಸುತ್ತಿದೆ.

ಇದರ ಅನ್ವಯ, ನೇಮಕಾತಿಯಲ್ಲಿ ಶೇ.25 ಮಂದಿಯನ್ನು 3 ವರ್ಷಗಳವರೆಗೆ, ಮತ್ತೆ ಶೇ.25 ಮಂದಿಯನ್ನು 5 ವರ್ಷಗಳವರೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ.

ಅಲ್ಲದೆ, ಬಾಕಿ ಉಳಿದ ಶೇ.50 ಮಂದಿಯನ್ನು ನಿವೃತ್ತಿಯ ವರೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಜಾರಿ ನಿರ್ದೇಶನಾಲಯ ಸಮನ್ಸ್‌ ಹಿನ್ನೆಲೆ: ಎ.8ರಂದು ಟಿಟಿವಿ ದಿನಕರನ್‌ ವಿಚಾರಣೆ

Advertisement

3 ಮತ್ತು 5 ವರ್ಷಗಳ ಅವಧಿಗೆ ನೇಮಕಗೊಳ್ಳುವ ಯೋಧರಿಗೆ ನಿವೃತ್ತಿ ವೇತನ, ವೈದ್ಯಕೀಯ ಸೌಲಭ್ಯ ಸೇರಿದಂತೆ ವಿವಿಧ ಸರಕಾರ ಸವಲತ್ತು ನೀಡುವ ಕುರಿತೂ “ಟೂರ್‌ ಆಫ್ ಡ್ಯೂಟಿ’ಯ ಕರಡಿನಲ್ಲಿ ಪ್ರಸ್ತಾಪಿಸಲಾಗಿದೆ.

ಕೇವಲ ಸೈನಿಕ ಶ್ರೇಣಿಗೆ ಮಾತ್ರವೇ ಈ ಕರಡು ನೀತಿ ಅನ್ವಯವಾಗುತ್ತದೆ. ಅಧಿಕಾರಿಗಳ ಶ್ರೇಣಿಗೆ ಅನ್ವಯವಾಗದು ಎಂದು ಮೂಲಗಳು ತಿಳಿಸಿವೆ.

ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಯೋಧ ನಿರೀಕ್ಷಿತ ನೇಮಕಾತಿ ಪ್ರಕ್ರಿಯೆ ನಡೆಯದ ಕಾರಣ, ಆಕಾಂಕ್ಷಿಗಳು ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next