Advertisement

ಕಠಿಣ ಲಾಕ್‌ ಡೌನ್‌ಗೆ ಕೋಲಾರ ಜಿಲ್ಲೆ ಸ್ತಬ್ಧ

07:00 PM May 23, 2021 | Team Udayavani |

ಕೋಲಾರ: ಕೊರೊನಾ ಸೋಂಕು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಠಿಣ ಲಾಕ್‌ಡೌನ್‌ಗೆ ಸೂಚನೆ ನೀಡಿದ್ದು, ವೈದ್ಯಕೀಯ ಸೇವೆ ಹೊರತುಪಡಿಸಿ ಮೊದಲ ದಿನ ಇಡೀ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿತ್ತು ಮತ್ತು ಅನಗತ್ಯವಾಗಿ ರಸ್ತೆಗಿಳಿದ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದರು.

Advertisement

ಭಟ್ರಹಳ್ಳಿ ಗೇಟ್‌ನಲ್ಲಿ ವ್ಯಕ್ತಿಯೊಬ್ಬ ಪೇದೆಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಶುಕ್ರವಾರ ಸಂಜೆಯಿಂದಲೇ ಲಾಕ್‌ಡೌನ್‌ ಕಠಿಣಗೊಳಿಸಿರುವ ಪೊಲೀಸರು ರಸ್ತೆಗಿಳಿದ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದರಲ್ಲದೇ, ಕೆಲವುಕಡೆಗಳಲ್ಲಿ ಮಾತಿನ ಚಕಮಕಿಗೂ ಕಾರಣವಾಯಿತು.

ಹಾಲು, ವೈದ್ಯಕೀಯಸೇವೆ ಹೊರತುಪಡಿಸಿ ಉಳಿದೆಲ್ಲಾವಾಣಿಜ್ಯ ವಹಿವಾಟುಗಳಿಗೆ ನಿರ್ಬಂಧಹೇರಲಾಗಿತ್ತು. ನಗರಾದ್ಯಂತ ಎಲ್ಲೂಅಂಗಡಿಗಳು ತೆರೆಯಲಿಲ್ಲ.

ಬುದ್ದಿವಾದ ಹೇಳಿದ್ದಕ್ಕೆ ಪೇದೆ ಮೇಲೆ ಹಲ್ಲೆ: ತಾಲೂಕಿನ ಬೇತಮಂಗಲರಸ್ತೆಯ ಭಟ್ರಹಳ್ಳಿ ಗೇಟ್‌ನಲ್ಲಿ ಲಾಕ್‌ಡೌನ್‌ ಸಂದರ್ಭದಲ್ಲಿ ಸುಖಾಸುಮ್ಮನೇ ಓಡಾಡುತ್ತಿದ್ದ ರವಿ ಎಂಬ ಯುವಕನಿಗೆ ಪೊಲೀಸ್‌ ಪೇದೆ ನಾಗರಾಜ್‌ ಬುದ್ದಿವಾದ ಹೇಳಿದ್ದಕ್ಕೆ ಪೇದೆಯ ಲಾಠಿಯನ್ನೇ ಕಿತ್ತುಕೊಂಡು ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಪೇದೆ ನಾಗರಾಜ್‌ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸಾcರ್ಜ್‌ ಆಗಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಯುವಕ ರವಿ ಎಂಬುವವರ ಮೇಲೆ ಗ್ರಾಮಾಂತರ ಠಾಣೆಯಲ್ಲಿ ಕೇಸ್‌ ದಾಖಲಿಸಲಾಗಿದೆ.

Advertisement

ರಸ್ತೆಗೆ ಬ್ಯಾರಿಕೇಡ್‌, ವಾಹನ ತಪಾಸಣೆ: ನಗರದ ಎಂ.ಬಿ.ರಸ್ತೆ, ಎಂ.ಜಿ. ರಸ್ತೆ, ಮೆಕ್ಕೆ ವೃತ್ತದಿಂದ ಬಂಗಾರಪೇಟೆ ವೃತ್ತದ ಕಡೆಗೆ ಹೋಗುವ ಮುಖ್ಯರಸ್ತೆ ಸೇರಿದಂತೆಎಲ್ಲಾ ರಸ್ತೆಗಳನ್ನು ಬ್ಯಾರಿಕೇಡ್‌ ಹಾಕಿಬಂದ್‌ ಮಾಡಿದ ಪೊಲೀಸರು ರಸ್ತೆಗಿಳಿದಪ್ರತಿ ವಾಹನದ ತಪಾಸಣೆ ನಡೆಸಿದರು.

ತುರ್ತು ಸೇವೆಗೆ ಹೋಗುವ ವಾಹನಗಳನ್ನು ಹೊರತುಪಡಿಸಿ ಅನಗತ್ಯವಾಗಿರಸ್ತೆಗಿಳಿದ ವಾಹನಗಳನ್ನು ಜಪ್ತಿ ಮಾಡಿ ಟೆಂಪೋಗೆ ತುಂಬಿ ನಗರದ ಕವಾಯತುಮೈದಾನದಲ್ಲಿ ಹಾಕಲಾಯಿತು.ಮದುವೆ ಮುಗಿಸಿ ಬಂದ ಟೆಂಪೋಟ್ರಾವೆಲ್ಸ್‌ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡ ಘಟನೆ ನಗರದ ರಾಷ್ಟ್ರೀಯಹೆದ್ದಾರಿಯಲ್ಲಿ ಕಂಡು ಬಂತು.ಮದುವೆಗೆ ಮುಗಿಸಿ ವಧುವರನೊಂದಿಗೆ ಬರುತ್ತಿರುವುದಾಗಿ ದಾಖಲೆಗಳೊಂದಿಗೆ ಮಾಹಿತಿ ನೀಡಿದ ನಂತರ ವಾಹನ ಬಿಡಲಾಯಿತು.

ಮೆಡಿಕಲ್‌ ಸ್ಟೋರ್ ಮತ್ತು ಹಾಲಿನಬೂತ್‌ ಹೊರತುಪಡಿಸಿ ಎಲ್ಲಾಅಂಗಡಿಗಳು ಮುಚ್ಚಿ ಇಡೀ ನಗರಸ್ತಬ್ಧವಾಗಿದ್ದು, ಮೇ25ರ ಮಂಗಳವಾರಬೆಳಗ್ಗೆ 6 ಗಂಟೆಯವರೆಗೂ ಇದು ಮುಂದುವರಿಯಲಿದೆ ಎಂದು ಜಿಲ್ಲಾರಕ್ಷಣಾಧಿಕಾರಿ ಕಾರ್ತಿಕ್‌ರೆಡ್ಡಿ ತಿಳಿಸಿದರು.ನಗರದ ಟೇಕಲ್‌ ರಸ್ತೆಯಲ್ಲಿ ವೃತ್ತನಿರೀಕ್ಷಕ ರಂಗಶಾಮಯ್ಯ ನೇತೃತ್ವದಲ್ಲಿಸಂಚಾರ ಪಿಎಸ್‌ಐ ನಾರಾಯಣಸ್ವಾಮಿಮತ್ತು ಸಿಬ್ಬಂದಿ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್‌ ಹಾಕಿ ರಸ್ತೆ ಬಂದ್‌ಮಾಡಿಸಿದರು. ಅಗತ್ಯ ಸೇವೆಗಳನ್ನುಹೊರತು ಪಡಿಸಿ ಉಳಿದೆಲ್ಲ ವಾಹನವಶಕ್ಕೆ ಪಡೆಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next