Advertisement

ಒಂದು ಗಂಟೆಯೊಳಗೆ ಮೂರು ಸಂಶಯಾತ್ಮಕ ಡ್ರೋನ್ ಗಳ ಹಾರಾಟ ಪತ್ತೆ!

09:56 AM Aug 01, 2021 | Team Udayavani |

ಶ್ರೀನಗರ: ಜಮ್ಮು ಕಾಶ್ಮೀರದ ಡೊಮಾನ ಪ್ರದೇಶದಲ್ಲಿ ಡ್ರೋನ್ ನಂತರ ವಸ್ತುವೊಂದು ಶನಿವಾರ ರಾತ್ರಿ ಪತ್ತೆಯಾಗಿದೆ. ಒಂದು ಗಂಟೆಯ ಅವಧಿಯೊಳಗೆ ಮೂರು ಡ್ರೋನ್ ಗಳು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಡ್ರೋನ್ ಹಾರಾಟ ನಡೆಸುತ್ತಿರುವ ದೃಶ್ಯವನ್ನು ಸ್ಥಳೀಯ ಯುವಕನೋರ್ವ ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾನೆ. ಬೆಳಕು ಸೂಸುತ್ತಾ ಸಾಗಿದ ಡ್ರೋನ್ ಮೂರು ನಿಮಿಷಗಳ ಬಳಿಕ ಕಣ್ಮರೆಯಾಗಿದೆ. ಶನಿವಾರ ಸಂಜೆ ನೆರೆಯ ಜಿಲ್ಲೆಯಲ್ಲೂ ಡ್ರೋನ್ ಹಾರಾಟ ಪತ್ತೆಯಾಗಿದೆ.

ಮೊದಲ ಎರಡು ಡ್ರೋನ್ ಗಳು ಸಾಂಬಾ ಜಿಲ್ಲೆಯಲ್ಲಿ ಪತ್ತೆಯಾಗಿದೆ. ರಾತ್ರಿ 8-9 ಗಂಟೆಯ ಸಮಯದಲ್ಲಿ ಈ ಎರಡು ಡ್ರೋನ್ ಗಳ ಹಾರಾಟ ಪತ್ತೆಯಾಗಿದೆ. ಮತ್ತೊಂದು ಮಾನವ ರಹಿತ ಹಾರಾಡುವ ವಾಹನ 9.50ರ ಸಮಯದಲ್ಲಿ ಜಮ್ಮು ಜಿಲ್ಲೆಯ ಡೊಮಾನ ಪ್ರದೇಶದಲ್ಲಿ ಪತ್ತೆಯಾಗಿದೆ.

ಇದನ್ನೂ ಓದಿ:ವಿಪಕ್ಷಗಳ ಹಠಕ್ಕೆ ಆಪೋಶನವಾಯಿತು ಮೇಲ್ಮನೆ ಕಲಾಪ

ಸಂಶಯಾತ್ಮಕ ಡ್ರೋನ್ ಗಳ ಪತ್ತೆಗಾಗಿ ಈಗಾಗಲೇ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದೆ.

Advertisement

ಜಮ್ಮು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಇತ್ತೀಚಿಗೆ ಈ ಡ್ರೋನ್ ಪತ್ತೆಯಾಗುವ ಘಟನೆಗಳು ಪದೇ ಪದೇ ವರದಿಯಾಗುತ್ತಿದೆ. ಜಮ್ಮುವಿನ ವಾಯು ಪಡೆ ನಿಲ್ದಾಣದ ಮೇಲೆ ನಡೆದ ದಾಳಿಯ ಬಳಿಕ ಈ ಘಟನೆಗಳು ಹೆಚ್ಚಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next