ಶ್ರೀನಗರ: ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ಪುನಃಸ್ಥಾಪನೆಗೆ ಚುನಾಯಿತ ಪ್ರತಿನಿಧಿಗಳೊಂದಿಗೆ ಕೇಂದ್ರ ಸರಕಾರ ಮಾತುಕತೆ ನಡೆಸಬೇಕು ಎಂಬ ಐತಿಹಾಸಿಕ ನಿರ್ಣಯವನ್ನು ಅಲ್ಲಿನ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.
ಜಮ್ಮು ಕಾಶ್ಮೀರ ಡಿಸಿಎಂ ಸುರೀಂದರ್ ಚೌಧರಿ ನಿರ್ಣಯನ್ನು ಮಂಡನೆ ಮಾಡಿದರು. “ಈ ಶಾಸನಸಭೆಯು ಜಮ್ಮು-ಕಾಶ್ಮೀರದ ಜನರ ಸಂಸ್ಕೃತಿ, ಗುರು ಹಾಗೂ ಹಕ್ಕುಗಳ ರಕ್ಷಿಸುವ ವಿಶೇಷ ಸ್ಥಾನಮಾನ ಹಾಗೂ ಸಾಂವಿ ಧಾನಿಕ ಭರವಸೆಗಳ ಪ್ರಾಮುಖ್ಯತೆ ಯನ್ನು ಪುನರುಚ್ಚರಿಸುತ್ತದೆ’ ಎಂದು ನಿರ್ಣಯದಲ್ಲಿ ಉಲ್ಲೇಖವಾಗಿದೆ.
ಈ ನಿರ್ಣಯ ಮಂಡನೆಯಾ ದಂತೆಯೇ ಬಿಜೆಪಿ ಸದಸ್ಯರು ದಾಖಲೆಗಳ ಪ್ರತಿಗಳನ್ನು ಹರಿದು, ಸ್ಪೀಕರ್ ವಿರುದ್ಧ ಘೊಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ಇದರಿಂದ ಗದ್ದಲವೇರ್ಪಟ್ಟು, ಅಂತಿಮವಾಗಿ ಸ್ಪೀಕರ್ ಸದನವನ್ನು ಮೂರು ದಿನಗಳವರೆಗೆ ಮುಂದೂಡಿದರು.
ಮಂಡನೆಯಾದ ನಿರ್ಣಯಕ್ಕೆ ಗದ್ದಲದ ನಡುವೆಯೇ ಮತ ಚಲಾವಣೆ ಯಾಗಿದ್ದು, ಯಾವುದೇ ಚರ್ಚೆಯಿಲ್ಲದೇ ಅಂಗೀಕಾರವಾಯಿತು. ಈ ವೇಳೆ ಪಿಡಿಪಿ, ಪೀಪಲ್ಸ್ ಕಾನ್ಫರೆನ್ಸ್ ಹಾಗೂ ಸಿಪಿಎಂ ನಿರ್ಣಯವನ್ನು ಬೆಂಬಲಿಸಿವೆ.
ಇದನ್ನೂ ಓದಿ: Bangladesh: ಹಿಂದೂಗಳ ಮೇಲೆ ಬಾಂಗ್ಲಾ ಸೇನೆಯಿಂದ ದಾಳಿ: ವೀಡಿಯೋ ವೈರಲ್