ಈ ಶತಮಾನದ ಅತ್ಯಂತ ಸುದೀರ್ಘ ಚಂದ್ರಗ್ರಹಣ ಶುಕ್ರವಾರ ರಾತ್ರಿಯಿಂದ ಶನಿವಾರ ನಸುಕಿನವರೆಗೆ ಸಂಭವಿಸಲಿದ್ದು, ಈ ಅತ್ಯಪರೂಪದ ವಿದ್ಯಮಾನ ವೀಕ್ಷಣೆಗಾಗಿ ಜನಸಾಮಾನ್ಯರು ಸೇರಿದಂತೆ ವಿಜ್ಞಾನಿಗಳು ಕೂಡಾ ಕಾತರರಾಗಿದ್ದಾರೆ. ಯಾಕೆಂದರೆ ಇಂದು ರಾತ್ರಿಯ ರಕ್ತವರ್ಣದ ಚಂದಿರನ ದರ್ಶನ ತಪ್ಪಿಸಿಕೊಂಡರೆ, ಇನ್ನು 104 ವರ್ಷ ಕಾಯಬೇಕು!
(ಏನಿದು ರಕ್ತಚಂದಿರ?ಇನ್ನು 104 ವರ್ಷ ಕಾಯಬೇಕು)ಖಗ್ರಾಸ ಚಂದ್ರಗ್ರಹಣ ಇನ್ನು 2123ರಲ್ಲಿ ಸಂಭವಿಸಲಿದೆ. ರಾತ್ರಿ 11.43ಕ್ಕೆ ಚಂದ್ರಗ್ರಹಣ ಆರಂಭವಾಗಲಿದ್ದು, 2.43ನಿಮಿಷಕ್ಕೆ ಗ್ರಹಣ ಪೂರ್ಣತೆ, ಬೆಳಗಿನ ಜಾವ 3.49ಕ್ಕೆ ಗ್ರಹಣ ಮೋಕ್ಷ ಕಾಲ. ಈ ಅತ್ಯಪರೂಪದ ಚಂದ್ರಗ್ರಹಣವನ್ನು ಬರಿಗಣ್ಣಿನಲ್ಲಿ ವೀಕ್ಷಿಸಬಹುದಾಗಿದೆ.ಯಾವುದೇ ರೀತಿಯ ಹಾನಿಯಾಗುವುದಿಲ್ಲ ಎಂಬುದಾಗಿ ತಜ್ಞರು ತಿಳಿಸಿದ್ದಾರೆ. ಅಷ್ಟೇ ಅಲ್ಲ ಖಗ್ರಾಸ ಚಂದ್ರಗ್ರಹಣದಿಂದ ಪ್ರಳಯ ಸಂಭವಿಸುತ್ತದೆ ಎಂಬುದು ಸತ್ಯಕ್ಕೆ ದೂರ ಎಂಬುದಾಗಿ ವಿಜ್ಞಾನಿಗಳ ಸ್ಪಷ್ಟನೆ. ಭಾರತವೂ ಸೇರಿದಂತೆ ಆಫ್ರಿಕಾ, ಯುರೋಪ್, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಅಮೆರಿಕದಲ್ಲಿ ಬ್ಲಡ್ ಮೂನ್ ಕಾಣಿಸಲಿದೆ.