Advertisement

NASA; ಮಂಗಳನ ಮೇಲೆ ಹಸುರು ಪ್ರದೇಶ: ಜೀವಕಳೆ ಶಂಕೆ

01:45 AM Oct 28, 2024 | Team Udayavani |

ಹೊಸದಿಲ್ಲಿ: ಮಂಗಳ ಗ್ರಹದ ಮೇಲೆ ಜೀವಸೃಷ್ಟಿಯ ಬಗ್ಗೆ ಮತ್ತಷ್ಟು ಕುತೂಹಲಕರ ಮಾಹಿತಿ ಲಭ್ಯವಾಗಿದೆ. ನಾಸಾನ ಪರ್ಸೀವರೆನ್ಸ್‌ ನೌಕೆ ಮಂಗಳನ ನೆಲದ ಮೇಲೆ 5 ಸೆಂ.ಮೀ. ಅಗಲದ ಹಸುರು ಪ್ರದೇಶವನ್ನು ಗುರುತಿಸಿದೆ ಎಂದು ನಾಸಾ ಹೇಳಿದೆ.

Advertisement

ಭೂಮಿಯಲ್ಲಿರುವ “ರೆಡ್‌ ಬೆಲ್ಟ್’ ವಲಯದಲ್ಲೂ ಭೌತಿಕ ಬದಲಾವಣೆಯಿಂದ ಇಂತಹ ಹಸುರು ಪ್ರದೇಶ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಮಂಗಳನ ಮೇಲೂ ಜೀವ ಸೃಷ್ಟಿ ಇತ್ತು. ಮುಂದೆ ಅದು ಸಾಧ್ಯವಿದೆ ಎಂಬ ವಿಜ್ಞಾನಿಗಳ ವಾದಕ್ಕೆ ಮತ್ತಷ್ಟು ಪುಷ್ಟಿ ದೊರಕಿದಂತಾಗಿದೆ.

ಪತ್ತೆಯಾಗಿದ್ದು ಹೇಗೆ?: ಮಂಗಳಗ್ರಹದ ಮೇಲಿರುವ ಪರ್ಸೀವರೆನ್ಸ್‌ ನೌಕೆ ವಿಶೇಷವಾದ ಕಲ್ಲುಗಳಿಂದ ಕೂಡಿದ್ದ ಪ್ರದೇಶದಲ್ಲಿ ಉತ್ಖನನ ನಡೆಸುವಾಗ 5 ಸೆಂ.ಮೀ. ಅಗಲದ ಹಸುರು ಪ್ರದೇಶ ಪತ್ತೆಯಾಗಿದೆ. ಇದರ ಸುತ್ತಲೂ ಬಿಳಿ ಮತ್ತು ಕಪ್ಪು ಬಣ್ಣದ ಪ್ರದೇಶಗಳನ್ನೂ ಸಹ ಗುರುತಿಸಲಾಗಿದೆ. ಈ ಹಸುರು ಬಣ್ಣದ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಯಬೇಕಿದೆ. ಆಗ ಮಾತ್ರ ಏನಿದು? ಯಾಕೆ ರಚನೆಯಾಗಿದೆ ಎಂಬ ಮಾಹಿತಿ ದೊರಕುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next