Advertisement
ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವಾರು ಕಡೆಗಳಲ್ಲಿ ಈಗಾಗಲೇ ಒಂದು ವಾರಗಳ ಲಾಕ್ ಡೌನ್ ಸ್ಥಿತಿಯನ್ನು ಘೋಷಿಸಲಾಗಿದೆ.
Related Articles
Advertisement
ಇಂದು ರಾಜ್ಯಾದ್ಯಂತ ಒಟ್ಟು 839 ಕೋವಿಡ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ರಾಜ್ಯದಲ್ಲಿ ಇಂದಿನವರೆಗೆ ಒಟ್ಟು 41581 ಕೋವಿಡ್ 19 ಸೋಂಕು ಪ್ರಕರಣಗಳು ದಾಖಲುಗೊಂಡಿದೆ. ಮತ್ತು ಇವರಲ್ಲಿ 16248 ಸೋಂಕಿತರು ಗುಣಮುಖರಾಗಿದ್ದಾರೆ ಹಾಗೂ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 24572 ಇದೆ.
ಇದನ್ನೂ ಓದಿ: ಕೋವಿಡ್ ಕಂಟಕಕ್ಕೆ ಕರಾವಳಿ ಬಂದ್: ದ. ಕನ್ನಡ ಜಿಲ್ಲೆಯಲ್ಲಿ ಒಂದು ವಾರ ಲಾಕ್ ಡೌನ್ ಗೆ ನಿರ್ಧಾರ
ಇಂದು ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ 47 ಸೋಂಕಿತರು ಮೃತಪಟ್ಟಿದ್ದಾರೆ. ಮೈಸೂರು ಜಿಲ್ಲೆಯಲ್ಲಿ 6 ಹಾಗೂ ಧಾರವಾಡ ಜಿಲ್ಲೆಯಲ್ಲಿ 5 ಸೋಂಕಿತರು ಮೃತಪಟ್ಟಿದ್ದಾರೆ. ಇನ್ನುಳಿದಂತೆ ಶಿವಮೊಗ್ಗ ಜಿಲ್ಲೆಯಲ್ಲಿ 3, ಬಾಗಲಕೋಟೆ, ಕೊಡಗು, ಬೆಳಗಾವಿ ಜಿಲ್ಲೆಗಳಲ್ಲಿ ತಲಾ ಇಬ್ಬರು ಈ ಸೋಂಕಿನ ಕಾರಣದಿಂದ ಮೃತಪಟ್ಟಿದ್ದಾರೆ. ತುಮಕೂರು, ದಾವಣಗೆರೆ, ಹಾಸನ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ತಲಾ ಒಬ್ಬರು ಕೋವಿಡ್ 19 ಸೋಂಕಿತರು ಇಂದು ಸಾವನ್ನಪ್ಪಿದ್ದಾರೆ.
ಈ ಮೂಲಕ ರಾಜ್ಯದಲ್ಲಿ ಒಟ್ಟಾರೆಯಾಗಿ ಇದುವರೆಗೆ 757 ಜನ ಕೋವಿಡ್ 19 ಸೋಂಕಿನ ಕಾರಣದಿಂದ ಮೃತಪಟ್ಟಿದ್ದಾರೆ. ಹಾಗೂ 4 ಜನ ಕೋವಿಡ್ 19 ಸೋಂಕಿತರು ಅನ್ಯ ಕಾರಣದಿಂದ ಮೃತಪಟ್ಟಿದ್ದಾರೆ. 545 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಕುಂದಾಪುರದಲ್ಲಿ 163 ಬಾರಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ವ್ಯಕ್ತಿಯ ವಿರುದ್ಧ ಕೇಸು ದಾಖಲು
ಬೆಂಗಳೂರು ನಗರ ಜಿಲ್ಲೆಯಲ್ಲಿ 1315 ಪಾಸಿಟಿವ್ ಪ್ರಕರಣ ಸೇರಿದಂತೆ, ಯಾದಗಿರಿ – 162, ಮೈಸೂರು – 151, ದಕ್ಷಿಣ ಕನ್ನಡ – 131, ಬಳ್ಳಾರಿ – 106, ಕಲಬುರಗಿ – 89, ವಿಜಯಪುರ 86, ಶಿವಮೊಗ್ಗ – 74, ಧಾರವಾಡ – 71, ಉಡುಪಿ – 53, ತುಮಕೂರು – 48, ರಾಯಚೂರು – 45, ದಾವಣಗೆರೆ – 45, ಚಿಕ್ಕಬಳ್ಳಾಪುರ – 42, ಉತ್ತರ ಕನ್ನಡ – 37, ಬಾಗಲಕೋಟೆ – 37, ಕೊಪ್ಪಳ – 31, ಮಂಡ್ಯ – 30, ಕೊಡಗು – 29, ಬೆಳಗಾವಿ – 27, ಹಾಸನ – 25, ಬೀದರ್ – 23, ಬೆಂಗಳೂರು ಗ್ರಾಮಾಂತರ – 21, ಕೋಲಾರ – 21, ಚಿಕ್ಕಮಗಳೂರು – 10 ಸೇರಿದಂತೆ ರಾಜ್ಯದ ಒಟ್ಟು 25 ಜಿಲ್ಲೆಗಳಲ್ಲಿ ಇಂದು ಎರಡಂಕೆಯ ಕೋವಿಡ್ 19 ಸೋಂಕಿನ ಪ್ರಕರಣಗಳು ವರದಿಯಾಗಿವೆ.
ಇಂದು ರಾಜ್ಯದಲ್ಲಿ ಒಟ್ಟು 17074 ಮಾದರಿಗಳನ್ನು ತಪಾಸಣೆ ನಡೆಸಲಾಗಿದ್ದು ಇವುಗಳಲ್ಲಿ 13952 ವರದಿಗಳು ನೆಗೆಟಿವ್ ಬಂದಿದೆ ಮತ್ತು 2738 ಪ್ರಕರಣಗಳು ಪಾಸಿಟಿವ್ ಆಗಿವೆ. ರಾಜ್ಯದಲ್ಲಿ ಇಲ್ಲಿಯವರೆಗೆ ಒಟ್ಟು 856148 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು ಇವುಗಳಲ್ಲಿ 793561 ಮಾದರಿಗಳ ವರದಿ ನೆಗೆಟಿವ್ ಬಂದಿದೆ ಹಾಗೂ 41581 ವರದಿಗಳು ಪಾಸಿಟಿವ್ ಆಗಿವೆ.
ಇದನ್ನೂ ಓದಿ: ಚಾಮರಾಜನಗರ: ಕೋವಿಡ್ 19 ಸೋಂಕಿಗೆ ಎರಡನೇ ಬಲಿ
ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು ಕೋವಿಡ್ 19 ಸೋಂಕಿತ ಪ್ರಕರಣಗಳ ಸಂಖ್ಯೆ 19702ಕ್ಕೆ ಏರಿಕೆಯಾಗಿದ್ದು, 4328 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆ 15052ಕ್ಕೆ ಏರಿಕೆಯಾಗಿದೆ. ಇಲ್ಲಿ ಕೋವಿಡ್ ಸಂಬಂಧಿತ 321 ಸಾವು ಸಂಭವಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 2353ಕ್ಕೆ ಏರಿಕೆಯಾಗಿದ್ದು ಇವರಲ್ಲಿ 821 ಸೋಂಕಿತರು ಗುಣಮುಖರಾಗಿದ್ದಾರೆ. 1489 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ ಹಾಗೂ ಇಲ್ಲಿ ಕೋವಿಡ್ ಸಂಬಂಧಿತ 41 ಸಾವು ಸಂಭವಿಸಿದೆ.
ಕಲಬುರಗಿಯಲ್ಲಿ ಒಟ್ಟು 2192 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 1506 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. 650 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ ಹಾಗೂ ಇಲ್ಲಿ 36 ಜನರು ಈ ಸೋಂಕಿಗೆ ಮೃತಪಟ್ಟಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 1788 ಕೋವಿಡ್ ಸೋಂಕಿನ ಪ್ರಕರಣಗಳು ದಾಖಲಾಗಿದ್ದು 1024 ಜನ ಸೋಂಕಿತರು ಗುಣಮುಖರಾಗಿದ್ದಾರೆ ಮತ್ತು 722 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ. ಇಲ್ಲಿ ಕೋವಿಡ್ 19 ಸಂಬಂಧಿತ 42 ಸಾವು ಸಂಭವಿಸಿದೆ.
ಇನ್ನು, ಉಡುಪಿ ಜಿಲ್ಲೆಯಲ್ಲಿ 1662 ಕೋವಿಡ್ 19 ಸೋಂಕಿನ ಪ್ರಕರಣಗಳು ದಾಖಲಾಗಿದ್ದು 1269 ಜನರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಹಾಗೂ ಜಿಲ್ಲೆಯಲ್ಲಿ 390 ಸಕ್ರಿಯ ಪ್ರಕರಣಗಳಿವೆ. ಇಲ್ಲಿ ಸೋಂಕು ಸಂಬಂಧಿ 3 ಸಾವುಗಳು ಸಂಭವಿಸಿವೆ.
ಯಾದಗಿರಿ ಜಿಲ್ಲೆಯಲ್ಲಿ 1450 ಕೋವಿಡ್ ಸೋಂಕಿನ ಪ್ರಕರಣಗಳು ದಾಖಲಾಗಿದ್ದು 894 ಜನ ಸೋಂಕಿತರು ಗುಣಮುಖರಾಗಿದ್ದಾರೆ ಮತ್ತು 555 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ. ಇಲ್ಲಿ ಕೋವಿಡ್ 19 ಸಂಬಂಧಿತ 1 ಸಾವು ಸಂಭವಿಸಿದೆ.
ಬೀದರ್ ಜಿಲ್ಲೆಯಲ್ಲಿ 1061 ಕೋವಿಡ್ ಸೋಂಕಿನ ಪ್ರಕರಣಗಳು ದಾಖಲಾಗಿದ್ದು 612 ಜನ ಸೋಂಕಿತರು ಗುಣಮುಖರಾಗಿದ್ದಾರೆ ಮತ್ತು 396 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ. ಬೆಂಗಳೂರು ನಗರ ಜಿಲ್ಲೆ ಹೊರತುಪಡಿಸಿದರೆ ರಾಜ್ಯದಲ್ಲೇ ಇಲ್ಲಿ ಕೋವಿಡ್ 19 ಸಂಬಂಧಿತ ಎರಡನೇ ಅತೀ ಹೆಚ್ಚು ಅಂದರೆ 53 ಸಾವು ಸಂಭವಿಸಿದೆ.
ಧಾರವಾಡ ಜಿಲ್ಲೆಯಲ್ಲಿ 1159 ಕೋವಿಡ್ ಸೋಂಕಿನ ಪ್ರಕರಣಗಳು ದಾಖಲಾಗಿದ್ದು 418 ಜನ ಸೋಂಕಿತರು ಗುಣಮುಖರಾಗಿದ್ದಾರೆ ಮತ್ತು 703 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ. ಇಲ್ಲಿ ಕೋವಿಡ್ 19 ಸಂಬಂಧಿತ 38 ಸಾವು ಸಂಭವಿಸಿದೆ.