Advertisement

Subrahmanya ಪರಿಸರದಲ್ಲಿ ಧಾರಾಕಾರ ಮಳೆ: ಕೆಲವೆಡೆ ಹಾನಿ

12:09 AM May 31, 2024 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಗುರುವಾರ ಅಪರಾಹ್ನ ಧಾರಾಕಾರ ಮಳೆಯಾಗಿದ್ದು ರಸ್ತೆಯಲ್ಲೇ ಮಳೆ ನೀರು ಹರಿದು ಹೊಳೆಯಂತಾಗಿತ್ತು.

Advertisement

ಮಧ್ಯಾಹ್ನ ವರೆಗೆ ಬಿಸಿಲಿನಿಂದ ಕೂಡಿದ್ದ ಸುಬ್ರಹ್ಮಣ್ಯ ಪರಿಸರದಲ್ಲಿ ಬಳಿಕ ಮಳೆ ಆರಂಭವಾಗಿದ್ದು, ಸಂಜೆ ವರೆಗೂ ಮುಂದುವರೆದಿತ್ತು. ಧಾರಕಾರ ಮಳೆಗೆ ಸುಬ್ರಹ್ಮಣ್ಯ-ಗುತ್ತಿಗಾರು-ಸುಳ್ಯ ರಸ್ತೆ ಹಾಗೂ ಸುಬ್ರಹ್ಮಣ್ಯ-ಪಂಜ-ಬೆಳ್ಳಾರೆ ರಸ್ತೆಯ ಹಲವೆಡೆ ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ಮಳೆ ನೀರು ಬಾರೀಪ್ರಮಾಣದಲ್ಲಿ ರಸ್ತೆಯಲ್ಲೇ ಹರಿದು ಹೊಳೆಯಂತಾಗಿತ್ತು. ಪರಿಣಾಮ ವಾಹನ ಸವಾರರು ಸಮಸ್ಯೆ ಅನುಭವಿಸಿದರು.

ಸುಬ್ರಹ್ಮಣ್ಯ, ಬಿಳಿನೆಲೆ, ಯೇನೆಕಲ್ಲು, ಬಳ್ಪ, ಪಂಜ, ಹರಿಹರ ಪಳ್ಳತ್ತಡ್ಕ, ಕೊಲ್ಲಮೊಗ್ರು, ಗುತ್ತಿಗಾರು, ನಡುಗಲ್ಲು, ಎಲಿಮಲೆ, ಸಂಪಾಜೆ ಸೇರಿದಂತೆ ವಿವಿಧೆಡೆ ಧಾರಾಕಾರ ಮಳೆಯಾಗಿದೆ. ಸುಬ್ರಹ್ಮಣ್ಯದಲ್ಲಿ ಕೆಲವು ಮನೆಗಳಿಗೆ, ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದ ಅಂಗಡಿಯೊಂದಕ್ಕೆ ನೀರು ನುಗ್ಗಿದೆ. ಅದಿಸುಬ್ರಹ್ಮಣ್ಯ ಬಳಿ ಚರಂಡಿ ಸಮಸ್ಯೆಯಿಂದ ಮಳೆ ನೀರು ಆಂಗಡಿಗಳಿಗೆ ನುಗ್ಗಿದೆ. ಜಲಾವೃತ ರಸ್ತೆಯಲ್ಲೀ ದೇವಸ್ಥಾನದ ಅನೆಯನ್ನು ನಡೆಸಿಕೊಂಡು ಬರುವ ವೀಡಿಯೋ ವೈರಲ್‌ ಅಗಿದೆ. ನೂಚಿಲದಲ್ಲಿ ಅವರಣ ಗೋಡೆ ಕುಸಿದು ಹಾನಿ ಸಂಭವಿಸಿದೆ.

ಹೊಳೆಯಲ್ಲಿ ಹರಿವು ಹೆಚ್ಚಳ
ಹರಿಹರ ಪಳ್ಳತ್ತಡ್ಕದ ಹೊಳೆ, ದರ್ಪಣ ತೀರ್ಥ ಸೇರಿದಂತೆ ಸಣ್ಣ ಪುಟ್ಟ ಹೊಳೆ ಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.

ಬಳ್ಪದಲ್ಲಿ 245 ಮಿ.ಮೀ. ಮಳೆ
ಕಡಬ ತಾಲೂಕಿನ ಬಳ್ಪದಲ್ಲಿ ಮಧ್ಯಾಹ್ನ 2ರಿಂದ 5 ಗಂಟೆಯ ಅವಧಿಯಲ್ಲಿ ಗಂಟೆಯಲ್ಲಿ 245 ಮಿ.ಮೀ. ಮಳೆಯಾಗಿದೆ. ಕಲ್ಲಾಜೆಯಲ್ಲಿ 115 ಮಿ.ಮೀ., ಕಮಿಲದಲ್ಲಿ 120 ಮಿ.ಮೀ. ಮಳೆಯಾಗಿದೆ ಎಂದು ಮಳೆಮಾಪಕರಾಗಿರುವ ಬಾಳಿಲದ ಪಿಜಿಎಸ್‌ಎನ್‌ ಪ್ರಸಾದ್‌ ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next