Advertisement

Rain ತೆಕ್ಕಟ್ಟೆ; ರಿಕ್ಷಾದ ಮೇಲೆ ಉರುಳಿದ ಮರ

11:02 PM Jun 08, 2024 | Team Udayavani |

ತೆಕ್ಕಟ್ಟೆ: ಧಾರಾಕಾರ ಮಳೆಯಿಂದಾಗಿ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಯಡಾಡಿ ಮತ್ಯಾಡಿ (ಗುಡ್ಡೆಅಂಗಡಿ) ಹಿ.ಪ್ರಾ. ಶಾಲೆ ಎದುರು ರಾಜ್ಯ ಹೆದ್ದಾರಿಯಲ್ಲಿ ಶನಿವಾರ ಮಧ್ಯಾಹ್ನ ಚಲಿಸುತ್ತಿದ್ದ ಅಟೋ ರಿಕ್ಷಾದ ಮೇಲೆ ಮರ ಉರುಳಿದೆ. ರಿಕ್ಷಾ ಜಖಂಗೊಂಡಿದೆ.

Advertisement

ರಿಕ್ಷಾವು ಪ್ರಯಾಣಿಕರನ್ನು ಗುಡ್ಡಟ್ಟು ದೇಗುಲಕ್ಕೆ ಬಿಟ್ಟು ಕುಂದಾಪುರದ ಕಡೆಗೆ ಮರಳುತ್ತಿತ್ತು. ರಿಕ್ಷಾದ ಮುಂಭಾಗದ ಗಾಜು ಒಡೆದಿದೆ. ಚಾಲಕ ಶಂಕರ ಪೂಜಾರಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ವಲ್ಪ ಕಾಲ ವಾಹನಸಂಚಾರ ಅಸ್ತವ್ಯಸ್ತಗೊಂಡಿತ್ತು. ಹೊಂಬಾಡಿ ಮಂಡಾಡಿ ಗ್ರಾ.ಪಂ. ಉಪಾಧ್ಯಕ್ಷ ಬಿ. ಅರುಣ್‌ ಕುಮಾರ್‌ ಹೆಗ್ಡೆ, ಗ್ರಾ.ಪಂ. ಸದಸ್ಯ ದಿನೇಶ್‌ ಮೊಗವೀರ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಜೆಸಿಬಿ ಮೂಲಕ ಮರವನ್ನು ತೆರವುಗೊಳಿಸಲಾಯಿತು.

ಉದಯವಾಣಿ ಎಚ್ಚರಿಸಿತ್ತು
ಇಲ್ಲಿನ ರಾ.ಹೆ. ಗುಡ್ಡೆಅಂಗಡಿ, ಬಿದ್ಕಲ್‌ಕಟ್ಟೆ, ಜನ್ನಾಡಿ ಪ್ರಮುಖ ಮಾರ್ಗದ ಇಕ್ಕೆಲಗಳಲ್ಲಿ ಬೆಳೆದುನಿಂತಿರುವ ಅಕೇಶಿಯಾ ಮರಗಳು ಮಳೆ ಬರುವಾಗ ರಸ್ತೆಗೆ ಉರುಳುವ ಸಾಧ್ಯತೆ ಹೆಚ್ಚಾಗಿದ್ದು, ಅವಘಡ ತಪ್ಪಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ ಹಿನ್ನೆಲೆಯಲ್ಲಿ ಉದಯವಾಣಿ ಜನಪರ ಕಾಳಜಿ ವಹಿಸಿ ಮೇ 27ರಂದು “ಗುಡ್ಡೆಅಂಗಡಿ; ರಸ್ತೆಗೆ ಬಾಗಿದ ಮರಗಳ ತೆರವಿಗೆ ಆಗ್ರಹ’ ಎನ್ನುವ ಶೀರ್ಷಿಕೆಯಲ್ಲಿ ಸಚಿತ್ರ ವರದಿ ಪ್ರಕಟಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next