Advertisement

ರಾಜ್ಯದಲ್ಲಿ ಇನ್ನು “ಮುಂಗಾರು ಮಳೆ’! ಕೆಲವು ಕಡೆ ಇಂದು ಭಾರೀ ಮಳೆಯಾಗುವ ಸಾಧ್ಯತೆ

10:42 PM Jun 01, 2024 | Team Udayavani |

ಬೆಂಗಳೂರು: ಈ ಬಾರಿ ನಿರೀಕ್ಷೆಯಂತೆ ರಾಜ್ಯಕ್ಕೆ ಜೂ. 2ರಂದು ಮುಂಗಾರು ಪ್ರವೇಶಿಸುವ ಸಾಧ್ಯತೆಯಿದ್ದು, ವಾಡಿಕೆಗಿಂತ ಒಂದು ವಾರ ಮುಂಚಿತವಾಗಿ ಆಗಮಿಸಿದಂತಾಗಲಿದೆ. ಸಾಮಾನ್ಯವಾಗಿ ಜೂನ್‌ ಮೊದಲ ವಾರದಲ್ಲಿ ಅಂದರೆ ಜೂ. 7 ಅಥವಾ 8ರಂದು ರಾಜ್ಯಕ್ಕೆ ಮುಂಗಾರು ಪ್ರವೇಶಿಸುತ್ತದೆ.

Advertisement

ರಾಜಧಾನಿ ಬೆಂಗಳೂರು ಸಹಿತ ಹಳೇ ಮೈಸೂರು ಭಾಗದಲ್ಲಿ ಶನಿವಾರ ವರುಣನ ಅಬ್ಬರ ಬಿರುಸಾಗಿತ್ತು. ಹಾಸನ ನಗರ ಮತ್ತು ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದ್ದು, ಮುಂಗಾರು ಮಳೆ ಆಶಾದಾಯಕವಾಗುವ ಮುನ್ಸೂಚನೆ ನೀಡಿದೆ.

ಚಾಮರಾಜನಗರದಲ್ಲೂ ಉತ್ತಮ ಮಳೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಲ್ಪ ಪ್ರಮಾಣದ ಮಳೆಯಾಯಿತು.

ಮಂಡ್ಯ ಜಿಲ್ಲಾದ್ಯಂತ ಸಂಜೆ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯಿತು.

ಶ್ರೀರಂಗಪಟ್ಟಣದಲ್ಲಿ ಸಂಜೆ ಸುರಿದ ಗುಡುಗು ಸಹಿತ ಮಳೆಗೆ ಪಟ್ಟಣದ ಮುಖ್ಯರಸ್ತೆಯ ಹೊಟೇಲೊಂದರ ಛಾವಣಿ ಕುಸಿದಿದೆ.

Advertisement

ಇಂದು ಹಲವೆಡೆ ಮಳೆ ಸಾಧ್ಯತೆ
ರವಿವಾರದಿಂದ ರಾಜ್ಯದ ಕೆಲವು ಕಡೆಗಳಲ್ಲಿ ಮುಂಗಾರು ಮಳೆ ಸುರಿಯುವ ಸಾಧ್ಯತೆಗಳಿದ್ದು, ಮುಂದಿನ 2-3 ದಿನಗಳಲ್ಲಿ ನೈಋತ್ಯ ಮಾನ್ಸೂನ್‌ ಪೂರ್ಣ ಪ್ರಮಾಣದಲ್ಲಿ ಕರ್ನಾಟಕವನ್ನು ಪ್ರವೇಶಿಸುವ ಅನುಕೂಲಕರ ಪರಿಸ್ಥಿತಿಗಳು ನಿರ್ಮಾಣಗೊಂಡಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವಾಡಿಕೆಗಿಂತ ಮೊದಲೇ ಪ್ರವೇಶ
ಈ ಬಾರಿ ಜೂನ್‌ ಮೊದಲ ವಾರವೇ ಮುಂಗಾರು ಪ್ರವೇಶಿಸಲಿದೆ. ವಾಡಿಕೆಗಿಂತ ಬೇಗ ಮಳೆಗಾಲ ಬಂದರೆ ಆ ವರ್ಷಗಳಲ್ಲಿ ಅತ್ಯಧಿಕ ಮಳೆಯನ್ನು ನಿರೀಕ್ಷಿಸಬಹುದಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next