Advertisement

ಪ್ರವಾಸಿ ಸ್ಥಳಗಳನ್ನು ನೋಡಲೆಂದೇ ಕಾಂಚನಗಂಗಾ ರೈಲು ಏರುವ ಜನರು

01:05 AM Jun 18, 2024 | Team Udayavani |

ಹೊಸದಿಲ್ಲಿ: ಸಿಯಾಲ್ಡಾ ಕಾಂಚನಗಂಗಾ ರೈಲು ಈಶಾನ್ಯ ಭಾರತ ಮತ್ತು ದೇಶದ ಉಳಿದ ಭಾಗಗಳಿಗೆ ಸಂಪರ್ಕ ಕಲ್ಪಿಸುವ ವಿಶೇಷ ರೈಲಾಗಿದೆ. ಅದು ಕೋಲ್ಕತಾದ ಸಿಯಾಲ್ಡಾ ರೈಲು ನಿಲ್ದಾಣದಿಂದ ತ್ರಿಪುರಾ ರಾಜಧಾನಿ ಅಗರ್ತಲಾಕ್ಕೆ ಸಂಚರಿಸುತ್ತದೆ.

Advertisement

ಈ ರೈಲು ಪ್ರವಾಸಿಗರ ರೈಲು ಎಂದೇ ಜನಪ್ರಿಯ. ಪಶ್ಚಿಮ ಬಂಗಾಲ ಮತ್ತು ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಿನ ಪ್ರವಾಸಿ ಸ್ಥಳಗಳು ಇರುವು ದರಿಂದ ಅಲ್ಲಿಗೆ ಭೇಟಿ ನೀಡುವ ನಿಟ್ಟಿನಲ್ಲಿ ಈ ರೈಲನ್ನೇ ಹೆಚ್ಚು ಆಶ್ರಯಿಸುತ್ತಾರೆ. ಪೂರ್ವ ರೈಲ್ವೇ ವಿಭಾಗವು ಈ ರೈಲನ್ನು ನಿಯಂತ್ರಿಸುತ್ತದೆ. 24 ಪ್ರಮುಖ ನಿಲ್ದಾಣಗಳ ಸೇರಿ 35 ರಿಂದ 40 ನಿಲ್ದಾಣಗಳ ನಡುವೆ ಸಂಚರಿಸುವ ಈ ರೈಲು 1,551 ಕಿ.ಮೀ. ದೂರ ಕ್ರಮಿಸುತ್ತದೆ.

1960ರಲ್ಲಿ ರೈಲು ಸಿಯಾಲ್ಡಾದಿಂದ ನ್ಯೂ ಜಲ್ಪಾಯಿಗುರಿವರೆಗೆ ಸಂಚರಿಸುತ್ತಿತ್ತು. ಇಲ್ಲಿಂದ ಕಾಂಚನ ಗಂಗಾ ಶಿಖರ ಗೋಚ ರಿಸುತ್ತದೆ. ಹೀಗಾಗಿ, ರೈಲಿಗೆ ಕಾಂಚನಗಂಗಾ ಹೆಸರನ್ನು ಇರಿಸಲಾಗಿದೆ.

ಎಲ್ಲಿಂದ ಎಲ್ಲಿಗೆ?: ಸಿಯಾಲ್ಡಾದಿಂದ ಅಗರ್ತಲಾಕ್ಕೆ
ಈ ರಾಜ್ಯಗಳಲ್ಲಿ ಸಂಚಾರ: ಪಶ್ಚಿಮ ಬಂಗಾಲ, ಝಾರ್ಖಂಡ್‌, ಬಿಹಾರ, ಅಸ್ಸಾಂ ಹಾಗೂ ತ್ರಿಪುರಾ
ವಿಭಾಗ: ಪೂರ್ವ ರೈಲ್ವೇ
ಪ್ರಮುಖ ನಿಲುಗಡೆ: 24 ನಿಲ್ದಾಣಗಳು
ಒಟ್ಟು ಸಂಚರಿಸುವ ದೂರ: 1,551 ಕಿ.ಮೀ.

Advertisement

Udayavani is now on Telegram. Click here to join our channel and stay updated with the latest news.

Next